Headlines

ಮಹಿಳೆಯೊಂದಿಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿ ಟಿ ರವಿ ಅಪ್ತನ ಮೇಲೆ ಹಲ್ಲೆ

ಮಹಿಳೆಯೊಂದಿಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿ ಟಿ ರವಿ ಅಪ್ತನ ಮೇಲೆ ಹಲ್ಲೆ


ಚಿಕ್ಕಮಗಳೂರು, (ಜನವರಿ 28): ವಿಧವೆ ಮಹಿಳೆ ಜೊತೆ ಖಾಸಗಿ ಮನೆಯಲ್ಲಿ ತಂಗಿದ್ದನೆಂದು ಆರೋಪಿಸಿ ಮಾಜಿ ಸಚಿವ ಸಿ.ಟಿ. ರವಿ ಅವರ ಆಪ್ತ ಹಾಗೂ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಸಿಡಿಎ) ಮಾಜಿ ಅಧ್ಯಕ್ಷ ಆನಂದ್ ಮೇಲೆ ಹತ್ತಾರು ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ (ಚಿಕ್ಕಮಗಳೂರು) ನಡೆದಿದೆ. ಆನಂದ್ ಮಹಿಳೆಯೊಬ್ಬರ ಜತೆ ಹೋಂಸ್ಟೇನಲ್ಲಿದ್ದಾರೆಂದು ವಿಷಯ ತಿಳಿಯುತ್ತಿದ್ದಂತೆಯೇ ಗಂಪೊಂದು ಏಕಾಏಕಿ ದಾಳಿ ಮಾಡಿದ್ದು, ಈ ವೇಳೆ ಆನಂದ್ ಮಹಿಳೆ ಜತೆಗಿರುವುದು ಕಂಡುಬಂದಿದೆ. ಆಗ ಆನಂದ ಮೇಲೆ ಹಲ್ಲೆ.

ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದ ಮಹಿಳೆಯೊಬ್ಬರ ಜೊತೆ ಸಿಡಿಎ ಮಾಜಿ ಅಧ್ಯಕ್ಷ ಆನಂದ್ ಖಾಸಗಿ ಹೋಂ ಸ್ಟೇಷನ್ ನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಗ್ರಾಮಸ್ಥರಿಗೆ ಸಿಕ್ಕಿತ್ತು. ಈ ಮತ್ತ ಮಹಿಳೆ ವಾಸವಿದ್ದವರ ಗ್ರಾಮದ ಹತ್ತಾರು ಜನರು ಚಿಕ್ಕಮಗಳೂರು-ಕಡೂರು ಮಾರ್ಗದಲ್ಲಿರುವ ಖಾಸಗಿ ಮನೆಯಲ್ಲಿ ಏಕಾಏಕಿ ದಾಳಿ ಮಾಡಿ ಎಲ್ಲಾ ಕೊಠಡಿಗಳನ್ನು ಪರಿಶೀಲಿಸಿದ್ದಾರೆ.ಆಗ ಮಹಿಳೆಯ ಜೊತೆ ಸಿಕ್ಕಿಬಿದ್ದ ಆನಂದ್ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇನ್ನು ವಿಷಯ ತಿಳಿಯದಂತೆ ಚಿಕ್ಕಮಗಳೂರು ಗ್ರಾಮಾಂತರ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ: ಮಾಜಿ ಸಂಸದರೊಬ್ಬರದ್ದು ಎನ್ನಲಾದ ಆಡಿಯೋ ವೈರಲ್: ರಾಜಕೀಯ ರಹಸ್ಯಗಳು ಬಯಲು

ಈ ಬಗ್ಗೆ ಯಾರು ದೂರು ನೀಡಿಲ್ಲ. ಹೀಗಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ, ಹಲ್ಲೆ ನಡೆಸಿರುವ ವಿಡಿಯೋ ಮಾತ್ರ ಸಾಮಾಜಿಕ ಜಲತಾಣಗಳಲ್ಲಿ ಹರಿದಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *