ಬ್ರಹ್ಮಗಂಟು ಧಾರಾವಾಹಿಯ ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್ ಅವರ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಶ್ರೇಷ್ಠ ಎಂಬ ಸಂದೇಶ ಸಾರುವ ಈ ಪಾತ್ರಕ್ಕಾಗಿ ಅವರು ಗಂಟೆಗಟ್ಟಲೆ ಮೇಕಪ್ ಮಾಡಿಕೊಳ್ಳುತ್ತಾರೆ.

ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್…. ಹೌದು. ಇವಳೇ ಜೀ ಕನ್ನಡ ಬ್ರಹ್ಮಗಂಟು ಧಾರಾವಾಹಿಯ ನಾಯಕಿ ದೀಪಾ. ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮೇಲು ಎನ್ನುವ ಕ್ಯಾರೆಕ್ಟರ್ ನಾಯಕಿ ದೀಪಾಳದ್ದು.

ದೀಪಾ ಆಗಿ, ಕೊನೆಗೆ ದಿಶಾ ಆಗಿ ಎಲ್ಲರನ್ನೂ ರಂಜಿಸ್ತಿರೋ ಸುಂದರಿ ಎಂದರೆ ದಿಯಾ ಪಾಲಕ್ಕರ್ (Diya Palakkal). ಕೊನೆಗೂ ಸೌಂದರ್ಯಕ್ಕಿಂತ ಗುಣನೇ ಮೇಲು ಎಂದು ಸಾಬೀತು ಮಾಡಿದ್ದಾಳೆ ದೀಪಾ. ಇದೇ ಖುಷಿಯಲ್ಲಿ ಇದೀಗ ದೀಪಾ ಉರ್ಫ್ ದಿಯಾ ಪಾಲಕ್ಕರ್ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಇವರ ರೊಮ್ಯಾಂಟಿಕ್ ಸ್ಟೆಪ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಷ್ಟಕ್ಕೂ, ಸೀರಿಯಲ್, ಸಿನಿಮಾಗಳಲ್ಲಿ ನಟರನ್ನು ಸುಂದರವಾಗಿ ಕಾಣಿಸುವ ಸಲುವಾಗಿ ಕೆ.ಜಿಗಟ್ಟಲೆ ಮೇಕಪ್ ಮಾಡುವುದು ಇದೆ. ಆದರೆ ಈ ಸೀರಿಯಲ್ನಲ್ಲಿ, ದೀಪಾಳನ್ನು ಈ ಪರಿಯಲ್ಲಿ ಕಾಣುವಂತೆ ಮಾಡಲು ಕೂಡ ಮೇಕಪ್ ಮಾಡಲಾಗುತ್ತಿದೆ. ಈ ಬಗ್ಗೆ ನಟಿ ಮಾತನಾಡಿದ್ದಾರೆ. ನನಗೆ ದೀಪಾ ಕ್ಯಾರೆಕ್ಟರ್ ಬಗ್ಗೆ ಆರಂಭದಲ್ಲಿ ಹೇಳಿದಾಗ ಸ್ವಲ್ಪ ಮುಜುಗರ ಆಯ್ತು. ಆದರೆ ಇದು ತುಂಬಾ ಚಾಲೆಂಜಿಂಗ್ ಎನ್ನಿಸಿತು. ನನ್ನದಲ್ಲದ ರೂಪದಿಂದ ನಟನೆ ಮಾಡುವುದು ಚಾಲೆಂಜಿಂಗ್ ಎನ್ನಿಸಿತು. ಬಾಲನಟಿಯಾಗಿ ನಟಿಸಿದ ಮೇಲೆ ಸಂಪೂರ್ಣ ನಾಯಕಿಯಾಗಿ ಇದೇ ಮೊದಲ ಸೀರಿಯಲ್. ಆದ್ದರಿಂದ ಚಾಲೆಂಜ್ ತೆಗೆದುಕೊಳ್ಳೋಣ ಎಂದು ತೆಗೆದುಕೊಂಡೆ ಎಂದಿದ್ದಾರೆ.

ನನಗೆ ಕನಿಷ್ಠ ಒಂದು ಗಂಟೆಯಾದ್ರೂ ಕಪ್ಪು ಬಣ್ಣ ಬಳಿಯಲು ಬೇಕು. ಎಲ್ಲರಿಗಿಂತಲೂ ಮೊದಲೇ ನಾನು ಮೇಕಪ್ಗೆ ಕುಳಿತರೂ ನನ್ನ ಮೇಕಪ್ ಎಲ್ಲರಿಗಿಂತಲೂ ಕೊನೆಯದಾಗಿ ಆಗುತ್ತದೆ. ಮುಖಕ್ಕೆ ಮೈ, ಹೊಟ್ಟೆ, ಕುತ್ತಿಗೆ, ಬೆನ್ನು ಎಲ್ಲವೂ ಮ್ಯಾಚ್ ಮಾಡುವುದು ಕಷ್ಟವೇ ಎಂದಿದ್ದಾರೆ. ಹಲ್ಲಿಗೆ ಕ್ಲಿಪ್ ಹಾಕುವ ಮುನ್ನ ಡೆಂಟಿಸ್ಟ್ ಸಲಹೆ ಪಡೆದು ನನಗಾಗಿಯೇ ವಿಶೇಷ ರೀತಿಯಲ್ಲಿ ಕ್ಲಿಪ್ ರೆಡಿ ಮಾಡಿದರು. ಇದು ನನ್ನ ಹಲ್ಲಿಗೆ ಡ್ಯಾಮೇಜ್ ಮಾಡುವುದಿಲ್ಲ. ಆದರೆ ಕೆಲವೊಂದು ಈ ಕ್ಲಿಪ್ ತೆಗೆಯಲು ಪುರುಸೊತ್ತು ಇಲ್ಲದಷ್ಟು ಶೂಟಿಂಗ್ ಇರುತ್ತೆ. ಆ ಸಮಯದಲ್ಲಿ ತುಂಬಾ ತಲೆನೋವು ಬರುತ್ತೆ ಎಂದು ದಿಯಾ ಹೇಳಿದ್ದಾರೆ. ಆದರೆ ದೀಪಾ ಪಾತ್ರಕ್ಕೆ ಜನರು ತೋರುವ ಪ್ರೀತಿಯ ಮುಂದೆ ಈ ನೋವು ಏನೂ ಅನ್ನಿಸುವುದೇ ಇಲ್ಲ. ಜನ ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ. ಅದೇ ಖುಷಿ ಎಂದಿದ್ದಾರೆ.

ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.

ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.

Source link
Brahmagantu ದೀಪಾನೂ ಅಲ್ಲ ದಿಶಾನೂ ಅಲ್ಲ- ಈಕೆ ದಿಯಾ! ರೊಮ್ಯಾಂಟಿಕ್ ಸ್ಟೆಪ್ಗೆ ಫ್ಯಾನ್ಸ್ ಫಿದಾ