Headlines

Naa Ninna Bidalaare ರೋಚಕ ಟ್ವಿಸ್ಟ್​: ಭೂತಕಾಲಕ್ಕೆ ಹೋದ ದೆವ್ವ! ಇನ್ನು ನಡೆಯಲ್ಲ ಮಾಳವಿಕಾ ಆಟ

Naa Ninna Bidalaare ರೋಚಕ ಟ್ವಿಸ್ಟ್​: ಭೂತಕಾಲಕ್ಕೆ ಹೋದ ದೆವ್ವ! ಇನ್ನು ನಡೆಯಲ್ಲ ಮಾಳವಿಕಾ ಆಟ

Naa Ninna Bidalaare ರೋಚಕ ಟ್ವಿಸ್ಟ್​: ಭೂತಕಾಲಕ್ಕೆ ಹೋದ ದೆವ್ವ! ಇನ್ನು ನಡೆಯಲ್ಲ ಮಾಳವಿಕಾ ಆಟ

’ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ, ದೆವ್ವವಾಗಿರುವ ಅಂಬಿಕಾ ತನ್ನ ಸಾವಿನ ರಹಸ್ಯವನ್ನು ಭೇದಿಸಲು ಭೂತಕಾಲಕ್ಕೆ ಹೋಗುತ್ತಾಳೆ. ಅಲ್ಲಿ ತನ್ನ ಸಾವಿಗೆ ಮಾಯಾ ಮತ್ತು ಅತ್ತೆ ಮಾಳವಿಕಾ ಕಾರಣ ಎಂದು ತಿಳಿದುಬರುತ್ತದೆ.

ದೆವ್ವ, ಭೂತ, ಪಿಶಾಚಿ ಇರುವ ಸೀರಿಯಲ್​​ಗಳನ್ನು, ಸಿನಿಮಾಗಳನ್ನು ನೋಡಲು ಇಷ್ಟಪಡುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಜೀ ಕನ್ನಡದ ನಾ ನಿನ್ನ ಬಿಡಲಾರೆ ಸೀರಿಯಲ್​ ಕೂಡ ಸಕತ್​ ಫೇಮಸ್​ ಆಗುತ್ತಿದೆ. ಇದರಲ್ಲಿ ಇರುವ ಕ್ಯೂಟ್​ ದೆವ್ವ ಅಂಬಿಕಾ ಎಲ್ಲರ ಫೆವರೆಟ್​ ಆಗಿದ್ದಾಳೆ.

ಇದೀಗ ತನ್ನ ಸಾವಿಗೆ ಯಾರು ಕಾರಣ ಎನ್ನುವುದನ್ನು ಕಂಡುಹಿಡಿಯಲು ಅಂಬಿಕಾ ನಿರ್ಧರಿಸಿದ್ದಾಳೆ. ಆ ಶಕ್ತಿಯನ್ನು ಅವಳ ಅಪ್ಪ ಶಂಭು ಅಂಬಿಕಾಗೆ ನೀಡಿದ್ದಾನೆ.

ಈ ಮೂಲಕ, ದೆವ್ವ ಆಗಿರೋ ಅಂಬಿಕಾ, ಈಗ ಭೂತ ಕಾಲಕ್ಕೆ ಹೋಗಿದ್ದಾಳೆ. ತನ್ನ ಸಾವಿಗೆ ಯಾರು ಕಾರಣ ಎಂದು ತಿಳಿದುಕೊಳ್ಳಲು ತಾನು ಬೆಂಕಿಯಲ್ಲಿ ಬೆಂದು ಹೋಗಿರುವ ದಿನಕ್ಕೆ ಸರಿದಿದ್ದಾಳೆ.

ಅಲ್ಲಿ ಅವಳಿಗೆ ಮಾಯಾ ಮತ್ತು ಮಾಳವಿಕಾ ಕುತಂತ್ರದಿಂದ ಸಾಯಿಸಿರುವುದು ತಿಳಿದಿದೆ. ಮಾಯಾ ಬೆಂಕಿ ಕಡ್ಡಿ ಗೀರಿ ಮನೆಯನ್ನು ಭಸ್ಮ ಮಾಡಿದ್ದರೆ, ಮಾಳವಿಕಾ ಅವಳಿಗೆ ನೆರವಾಗ್ತಿರೋದು ಅಂಬಿಕಾಗೆ ಕಂಡಿದೆ.

ಇದೀಗ ಭೂತಕಾಲದಲ್ಲಿಯೇ ಇರುವ ಅಂಬಿಕಾ ಕೊತಕೊತ ಕುದಿಯುತ್ತಿದ್ದಾಳೆ. ಇಷ್ಟು ದಿನ ಅತ್ತೆ ಮಾಳವಿಕಾ ತುಂಬಾ ಒಳ್ಳೆಯವಳು ಅಂದುಕೊಂಡಿದ್ದಳು ಅವಳು. ಅದರೆ ಇದೀಗ ಬಣ್ಣ ಬಯಲಾಗಿದೆ.

ಈಗ ಮಾಳವಿಕಾ ಮತ್ತು ಮಾಯಾಳ ಕಥೆ ಮುಗಿಸಲು ಪಣ ತೊಟ್ಟಿದ್ದಾಳೆ ಅಂಬಿಕಾ, ಭೂತಕಾಲದಲ್ಲಿಯೇ ಮಾಳವಿಕಾಳ ಬ*ಲಿ ತೆಗೆದುಕೊಳ್ಳಲು ನೋಡುತ್ತಿದ್ದಾಳೆ.ಆದರೆ ತಂತ್ರ ಮಂತ್ರ ವಿದ್ಯೆ ಗೊತ್ತಿರೋ ಮಾಳವಿಕಾ ಅಷ್ಟು ಸುಲಭದಲ್ಲಿ ಸಾಯುವವಳು ಅಲ್ಲ, ಆಕೆ ಸತ್ತರೆ ಸೀರಿಯಲ್​ ಮುಗಿಯುವ ಕಾರಣ, ನಿರ್ದೇಶಕರು ಆಕೆಯನ್ನು ಸಾಯಿಸುವುದೂ ಇಲ್ಲ. ಆದ್ದರಿಂದ ಇದೀಗ ಸೀರಿಯಲ್​ ಮತ್ತಷ್ಟು ಕುತೂಹಲ ಕೆರಳಿಸುತ್ತಿದೆ.

Source link

Leave a Reply

Your email address will not be published. Required fields are marked *