Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 30ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 30ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 30ರ ದಿನಭವಿಷ್ಯ

ನೀವು ಯಾರೊಂದಿಗೆ ನಿತ್ಯ ವ್ಯವಹರಿಸುತ್ತೀರೋ ಅಥವಾ ನೀವು ಕೆಲಸ ಮಾಡುವ ಸ್ಥಳ ಬಹಳ ಬುದ್ಧಿವಂತಿಕೆಯಿಂದ ಮಾತನಾಡುತ್ತಾವೋ, ನೀವು ಪಡುವ ಶ್ರಮಕ್ಕೆ ಮತ್ತು ಬರುವ ಫಲಿತಾಂಶಕ್ಕೆ ಇನ್ನೊಂದಿಷ್ಟು ಸ್ಮಾರ್ಟ್ ವರ್ಕ್ ಮಾಡಬೇಕಾದರೂ ಅನಿಸುತ್ತಾ ಇದ್ದಲ್ಲಿ ‘ಗ್ರೀನ್ ಅವೆಂಚೂರಿಯನ್’ ಧರಿಸಿ. ನಿಮ್ಮಲ್ಲಿ ಆಗುವ ಬದಲಾವಣೆ ಕಂಡು ಬೇರೆಯವರು ಆಶ್ಚರ್ಯಕ್ಕೆ ಒಳಗಾಗುತ್ತಾರೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನೀವು ಯಾರಿಗಾದರೂ ಸಾಲ ನೀಡಿದ್ದಲ್ಲಿ ಒಂದಲ್ಲ ಒಂದು ಕಾರಣ ಕೊಡುತ್ತಾ ವಾಯಿದೆ ಮುಂದಕ್ಕೆ ಹಾಕುತ್ತಾ ಬರುತ್ತಿದ್ದಾರೆ ಎಂದಾಗ ಈ ದಿನ ಗಟ್ಟಿಯಾಗಿ ಪ್ರಯತ್ನಿಸಿ. ಸ್ವಲ್ಪ ಗಟ್ಟಿಯಾದ ಧ್ವನಿಯಲ್ಲಿ ಕೇಳಿದರೂ ಅಡ್ಡಿಯಿಲ್ಲ, ಆ ಸಾಲ ವಸೂಲಿ ಆಗುವ ಅವಕಾಶ ಹೆಚ್ಚಿದೆ. ದಿಢೀರ್ ದೂರ ಪ್ರಯಾಣ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಉದ್ಯೋಗ ಮಾಡುವವರು ಏನಾದರೊಂದು ಕಾರಣಕ್ಕೆ ಕೆಲಸವನ್ನು ಬಿಟ್ಟು, ಗ್ಯಾಪ್ ಬಂದಿದೆ ಎಂದಾದಲ್ಲಿ ಈಗೇನಾದರೂ ಮತ್ತೆ ಪ್ರಯತ್ನ ಮಾಡುತ್ತಾ ಇದ್ದರೆ ಈ ದಿನ ಹೆಚ್ಚು ಪ್ರಯತ್ನವನ್ನು ಮಾಡಿ. ನಿಮಗೆ ಬರುವಂಥ ರೆಫರೆನ್ಸ್ ಅನ್ನು ಗಂಭೀರವಾಗಿ ಪರಿಗಣಿಸಿ. ದೀರ್ಘಾವಧಿಗೆ ಸಹಾಯ ಆಗುವಂಥ ಬೆಳವಣಿಗೆಗಳು ಆಗಲಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನನಗೆ ಗೊತ್ತಿರುವ ವಿಚಾರ ಇಷ್ಟೇ ಅಂತ ನೀವೇ ಒಂದು ಕಂಫರ್ಟ್ ಝೋನ್ ಒಳಗೆ ಇದ್ದು ಬಿಟ್ಟಿದ್ದಲ್ಲಿ ಹೊರಗೆ ಬರುವಂಥ ದಿನ ಇದು. ಹೊಸ ಕಾಂಟ್ಯಾಕ್ಟ್ ಗಳು ಸಹಾಯಕ್ಕೆ ಬರುತ್ತವೆ. ಬಹಳ ಸಮಯದಿಂದ ನೀವು ಆಸೆ ಪಟ್ಟಿಯಂಥ ವಸ್ತುವೊಂದು ಖರೀದಿಸುವಂಥ ಯೋಗ ಈ ದಿನ ನಿಮಗೆ ಇದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *