ಬೆಂಗಳೂರು, ಜನವರಿ 30: ಖಾಕಿ ಪ್ಯಾಂಟ್ ಅಥವಾ ಖಾಕಿ ಚಡ್ಡಿ ಮತ್ತು ಬಿಳಿ ಅಂಗಿ ಹಾಕಿದ ವ್ಯಕ್ತಿ ಮಹಾತ್ಮ ಗಾಂಧೀಜಿ (ಮಹಾತ್ಮ ಗಾಂಧಿ) ಜೊತೆಗೆ ಸಂಭಾಷಣೆ ಮಾಡುತ್ತಿದ್ದಾರೆ. ಗಾಂಧಿ ಎದುರಿಗಿರುವ ವ್ಯಕ್ತಿಯನ್ನು ಸಂಘಪ್ಪ ಎಂದು ಕರೆಯಲಾಗಿದೆ. ಇಡೀ ಜಾಹಿರಾತಿನಲ್ಲಿ ಮನ್ರೇಗಾ (MNAREGA) ಯೋಜನೆಯನ್ನ ಗಾಂಧೀಜಿ ಸಮರ್ಥಿಸಿಕೊಂಡಂತೆ ಹಾಗೂ ಎದುರಿಗಿರುವ ವ್ಯಕ್ತಿ ಜಿ ರಾಮ್ ಜಿ ಪರವಾಗಿ ಮಾತನಾಡುವಂತೆ ತೋರಿಸಲಾಗಿದೆ. ಇದೆ ಜಾಹೀರಾತು ಈಗ ಬಿಜೆಪಿ ನಾಯಕರನ್ನು ಕೆರಳಿಸಿದೆ. ವಿಧಾನಸಭೆಯೊಳಗೆ (ಅಸೆಂಬ್ಲಿ ಅಧಿವೇಶನ) ಇದೇ ವಿಚಾರಕ್ಕೆ ಭಾರಿ ಮಾತಿನ ಯುದ್ಧವೇ ನಡೆದಿದೆ.
ಶಾಸಕ ಸುರೇಶ್ ಕುಮಾರ್ ವಿಷಯ ಪ್ರಸ್ತಾಪಿಸಿದರೆ, ಇದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ, ‘ಯಾವ ನಿಯಮ ಉಲ್ಲಂಘನೆ ಆಗಿದೆ ಎಂದು ಹೇಳಿ’ ಎಂದು ಸವಾಲು ಹಾಕಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ದಾಖಲೆ ಆದೇಶವನ್ನು ಓದಿ, ನಿಯಮ ಉಲ್ಲಂಘನೆಯಾಗಿದೆ. ಆದರೆ, ಜಾಹೀರಾತಿನಲ್ಲಿ ತೋರಿಸಿರುವ ವ್ಯಕ್ತಿ ಯಾರು ಎಂಬ ಬಗ್ಗೆಯೂ ಭಾರಿ ವಾಕ್ಸಮರ ನಡೆದಿದೆ.
ರಾಜ್ಯ ಸರ್ಕಾರದ ಕಡೆಯಿಂದ ಜಾಹೀರಾತು ನೀಡುವುದಕ್ಕೂ ಬಿಜೆಪಿ ಆಕ್ಷೇಪ ಎತ್ತಿದೆ. ಪಕ್ಷದಿಂದ ಬೇಕಿದ್ದರೆ ಜಾಹಿರಾತು ಕೊಡಿ, ಸರ್ಕಾರದಿಂದ ಕೊಡಬೇಡಿ ಎಂದು ಶಾಸಕ ಸುನಿಲ್ ಕುಮಾರ್ ಗರಂ ಆದರು. ಸುನೀಲ್ ಕುಮಾರ್ ಮಾತಿಗೆ ಖಡಕ್ ತಿರುಗೇಟು ಕೊಟ್ಟ ಪ್ರಿಯಾಂಕ್ ಖರ್ಗೆ, ಈ ಹಿಂದಿನ ಬಿಜೆಪಿ ಸರ್ಕಾರಗಳ ಜಾಹೀರಾತು ನೆನಪಿಸಿತು.
ಇದನ್ನೂ ಓದಿ: ಇಂಧನ ಇಲಾಖೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪಕ್ಕೆ ಮುಂದಾಗಿದ್ದ ಕೆಜೆ ಜಾರ್ಜ್: ಆಮೇಲಾಗಿದ್ದೇ ಬೇರೆ!
ಶಿವಮೊಗ್ಗದಲ್ಲಿ ಜಾಹೀರಾತು ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ನಮ್ಮದೇ ಆದ ರೀತಿಯಲ್ಲಿ ನಾವು ಜಾಹೀರಾತು ನೀಡಿದ್ದೇವೆ. ಅದನ್ನು ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಸದ್ಯ ನರೇಗಾ ಮಹಾಯುದ್ಧ ಈಗ ಜಾಹೀರಾತು ಜಟಾಪಟಿಯತ್ತ ತಿರುಗಿದೆ. ಈ ಮಧ್ಯೆ ವಿಶೇಷ ಅಧಿವೇಶನವನ್ನು ನಾಲ್ಕರವರೆಗೆ ವಿಸ್ತರಣೆ ಮಾಡಲಾಗಿದೆ. ಹೀಗಾಗಿ, ಆಡಳಿತ ವಿಪಕ್ಷಗಳ ಸಂಘರ್ಷ ಮತ್ತಷ್ಟು ತಾರಕಕ್ಕೆ ಏರುವುದರಲ್ಲಿ ಅನುಮಾನವಿಲ್ಲ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ