ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾದ ಅರಿಜಿತ್ ಸಿಂಗ್? ಗಾಯಕನ ದೊಡ್ಡ ಹೆಜ್ಜೆ

ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾದ ಅರಿಜಿತ್ ಸಿಂಗ್? ಗಾಯಕನ ದೊಡ್ಡ ಹೆಜ್ಜೆ


ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ (ಅರಿಜಿತ್ ಸಿಂಗ್) ಅವರು ಇತ್ತೀಚೆಗೆ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದರು. ಅವರು ಗಾಯನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಇದು ಅಚ್ಚರಿ ಮೂಡಿಸಿತ್ತು. ಈಗ ಅರಿಜಿತ್ ಸಿಂಗ್ ಅವರ ದೊಡ್ಡ ಹೆಜ್ಜೆ ಇಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಅವರು ರಾಜಕೀಯ ಪಕ್ಷ ಸ್ಥಾಪಿಸಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಎದುರಿಸಲಿದ್ದಾರಂತೆ. ಈ ವರದಿ ಅನೇಕರಿಗೆ ಅಚ್ಚರಿ ತರಿಸಿದೆ.

ಅರಿಜಿತ್ ಸಿಂಗ್ ರಾಜಕೀಯಕ್ಕೆ ಕಾಲಿಡುವ ಬಗ್ಗೆ ಎನ್ ಡಿಟಿವಿ ವರದಿ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಈ ವರ್ಷ ಚುನಾವಣೆ. ಆದರೆ, ಸಿಂಗ್ ಇದರಲ್ಲಿ ಲಭ್ಯವಿರುವ ಆಲೋಚನೆ ಅರಿಜಿತ್ ಅವರಿಗೆ ಇಲ್ಲ. ಒಂದು ಪಕ್ಷ ಕಟ್ಟಿ ಬೆಳೆಸಬೇಕು, ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದರೆ ಅದು ಸಣ್ಣ ವಿಷಯ ಅಲ್ಲ. ಅದಕ್ಕೆ ಸಾಕಷ್ಟು ಸಿದ್ಧತೆ ಬೇಕು. ಈ ಸಿದ್ಧತೆಯನ್ನು ಮಾಡಿಕೊಳ್ಳುವ ಆಲೋಚನೆಯಲ್ಲಿ ಅರಿಜಿತ್ ಸಿಂಗ್ ಇದ್ದಾರೆ.

ಸಾಮಾನ್ಯವಾಗಿ ನಟ-ನಟಿಯರು ರಾಜಕೀಯ ಪಕ್ಷ ಸ್ಥಾಪಿಸಿ ಚುನಾವಣೆಗೆ ಉದಾಹರಣೆ ಇದೆ. ಅದೇ ರೀತಿ ಕೆಲವು ಗಾಯಕರು ಒಂದು ಪಕ್ಷದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ, ಗಾಯಕನೋರ್ವ ಪಕ್ಷ ಸ್ಥಾಪಿಸುವ ಆಲೋಚನೆ ಮಾಡಿದ್ದು ಕಡಿಮೆ. ಈಗ ಅಂತಹ ಅಪರೂಪದ ಕೆಲಸಕ್ಕೆ ಅರಿಜಿತ್ ಸಿಂಗ್ ಕೈ ಹಾಕಿದ್ದಾರೆ.

ಇದನ್ನೂ ಓದಿ: 38ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಗಾಯಕ ಅರಿಜಿತ್ ಸಿಂಗ್ ಮುಂದಿನ ಯೋಜನೆ ಏನು?

ಅರಿಜಿತ್ ಸಿಂಗ್ ಕೇವಲ ಗಾಯಕ ಮಾತ್ರ ಅಲ್ಲ. ಅವರು ಒಳ್ಳೆಯ ಮನಸ್ಸನ್ನು ತೋರಿಸಿದ್ದಾರೆ. ಸಾಮಾಜಿಕ ಕೆಲಸಗಳನ್ನು ಮಾಡುತ್ತಾರೆ. ಅರಿಜಿತ್ ಸಿಂಗ್ ಪಶ್ಚಿಮ ಬಂಗಾಳದ ಮುರ್ಷಿದಾ ಬಾದ್ನವರು. ಅವರು ಹುಟ್ಟೂರಿಗೆ ಏನನ್ನಾದರೂ ಮಾಡಬೇಕು ಎಂದು ಕನಸು ಕಂಡವರು. ಒಂದು ಹೊತ್ತಿನ ಊಟಕ್ಕೂ ಅವರು ಕಷ್ಟಪಡುವ ಜನರಿಗಾಗಿ ಇಲ್ಲಿ ರೆಸ್ಟೋರೆಂಟ್ ಆರಂಭಿಸಿದ್ದು, 40 ರೂಪಾಯಿಗೆ ಊಟ ನೀಡುವ ಕೆಲಸ ಮಾಡುತ್ತಿದ್ದಾರೆ. ಈಗ ಅವರು ರಾಜಕೀಯದ ಮೂಲಕ ತಮ್ಮ ಕೆಲಸ ಮುಂದುವರಿಸೋ ಆಲೋಚನೆಯಲ್ಲಿ ಇದ್ದಾರೆ. ಈ ಕಾರಣದಿಂದಲೇ ಅವರು ಸಂಗೀತ ಜಗತ್ತನ್ನು ತೊರೆದಿರಬಹುದು ಎಂದು ಹೇಳಲಾಗದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

ರಂದು ಪ್ರಕಟಿಸಲಾಗಿದೆ – 7:01 am, ಶುಕ್ರ, 30 ಜನವರಿ 26



Source link

Leave a Reply

Your email address will not be published. Required fields are marked *