Headlines

2 ಗಂಟೆ 10 ನಿಮಿಷದ ಕನ್ನಡದ ಸೈಕಾಲಜಿಕಲ್ ಹಾರರ್ ಚಿತ್ರ ಗಳಿಸಿದ್ದು 20 ಕೋಟಿ!

2 ಗಂಟೆ 10 ನಿಮಿಷದ ಕನ್ನಡದ ಸೈಕಾಲಜಿಕಲ್ ಹಾರರ್ ಚಿತ್ರ ಗಳಿಸಿದ್ದು 20 ಕೋಟಿ!

Psychological horror Movie: 2004ರಲ್ಲಿ ಬಿಡುಗಡೆಯಾದ ಈ ಕನ್ನಡದ ಸೈಕಾಲಜಿಕಲ್ ಹಾರರ್  ಸಿನಿಮಾ ಕೇವಲ 3 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 20 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಕನ್ನಡದಲ್ಲಿ ಹಾರರ್‌ ಸಿನಿಮಾಗಳಿಗೇನು ಕಡಿಮೆ ಇಲ್ಲ. ಇಂದು ನಾವು ಹೇಳುತ್ತಿರುವ 2 ಗಂಟೆ 10 ನಿಮಿಷದ ಕನ್ನಡದ ಸೈಕಾಲಜಿಕಲ್ ಹಾರರ್ ಚಿತ್ರ ಕೇವಲ 3 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. 2004ರಲ್ಲಿ ಬಿಡುಗಡೆಯಾದ ಈ ಚಿತ್ರ 20 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎಂದು ಹೇಳಲಾಗುತ್ತದೆ.

ಈ ಚಿತ್ರದಲ್ಲಿ ನಟಿಸಿದ ನಟಿ ಸಿನಿಮಾ ಬಿಡುಗಡೆಗೂ ಮುನ್ನ ದುರಂತವೊಂದರಲ್ಲಿ ಸಾವನ್ನಪ್ಪುತ್ತಾರೆ. ಈ ಚಿತ್ರದ ಮುಂದುವರಿದ ಭಾಗದ ಸಿನಿಮಾ ಬಿಡುಗಡೆಗೂ ಮುನ್ನವೇ ನಾಯಕನ ಸಾವು ಆಗುತ್ತದೆ. ಈ ಸಾವುಗಳು ಕಾಕತಾಳಿಯೋ ಎಂಬವುದು ಗೊತ್ತಿಲ್ಲ. ಆದ್ರೂ ಈ ಚಿತ್ರದಲ್ಲಿ ಆ ಪಾತ್ರದ ಹೆಸರು ಕೇಳಿದ್ರೆ ಜನರು ಭಯಗೊಳ್ಳುತ್ತಾರೆ.

2004ರಲ್ಲಿ ಬಿಡುಗಡೆಯಾದ ಆಪ್ತಮಿತ್ರ ಸಿನಿಮಾದಲ್ಲಿ ಬಹು ವರ್ಷಗಳ ನಂತರ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೊತೆಯಾಗಿದ್ದು ವಿಶೇಷವಾಗಿತ್ತು.

ಇನ್ನು ರಮೇಶ್ ಅರವಿಂದ್, ಸೌಂದರ್ಯ, ಪ್ರೇಮಾ, ಅವಿನಾಶ್ ಸೇರಿದಂತೆ ದೊಡ್ಡ ತಾರಾಗಣವನ್ನು ಆಪ್ತಮಿತ್ರ ಚಿತ್ರತಂಡ ಹೊಂದಿತ್ತು. ಚಿತ್ರದ ರಾ.. ರಾ ಹಾಡು ಇಂದಿಗೂ ಟ್ರೆಂಡಿಂಗ್‌ನಲ್ಲಿರುತ್ತದೆ.

ನಾಗವಲ್ಲಿಯಾಗಿ ಬದಲಾಗುವ ಡ್ಯೂಯಲ್ ಪರ್ಸನಾಲಿಟಿ ಪಾತ್ರದಲ್ಲಿ ಸೌಂದರ್ಯ ನಟನೆ ಚಿತ್ರದ ಕೊನೆಯರೆಗೂ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಇನ್ನು ವಿಷ್ಣುವರ್ಧನ್, ರಮೇಶ್ ಅರವಿಂದ್ ಮತ್ತು ಅವಿನಾಶ್ ಪಾತ್ರಗಳು ಚಿತ್ರಗಳು ಗೆಲುವಿನ ಶಿಖರಕ್ಕೆ ಕೊಂಡ್ಯುಯ್ಯುವಲ್ಲಿ ಯಶಸ್ವಿಯಾಗಿದ್ದವು. ಗುರುಕಿರಣ್ ಸಂಗೀತ ಆಪ್ತಮಿತ್ರ ಚಿತ್ರಕ್ಕೆ ಕಳಸ ಇರಿಸಿದಂತೆ ಆಗಿತ್ತು.

ರಮೇಶ್-ಗಂಗಾ ದಂಪತಿ ಹಳೆಯ ಅರಮನೆಯನ್ನು ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಈ ಮನೆಯಲ್ಲಿ ನಾಗವಲ್ಲಿ ಆತ್ಮವಿರೋ ವಿಷಯ ತಿಳಿದ ರಮೇಶ್ ಆಪ್ತಮಿತ್ರ, ಮನೋವಿಜ್ಞಾನಿ ವಿಜಯ್ ಆಗಮಿಸುತ್ತಾನೆ. ಕುಟುಂಬದ ಹಿರಿಯರ ವಿರೋಧದ ನಡುವೆಯೂ ಗಂಗಾ, ಆ ನಾಗವಲ್ಲಿ ರೂಮ್ ಬಾಗಿಲು ತೆರೆಯುತ್ತಾಳೆ. ಮುಂದೆ ಗಂಗಾಳೇ ನಾಗವಲ್ಲಿಯಾಗಿ ಬದಲಾಗುತ್ತಾಳೆ. ಮುಂದೆ ಏನಾಗುತ್ತೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸಿನಿಮಾವನ್ನು ಯುಟ್ಯೂಬ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

Source link

Leave a Reply

Your email address will not be published. Required fields are marked *