ಒಟಿಟಿಗೆ ಬಂದ ‘ಧುರಂಧರ್’ ಸಿನಿಮಾ; ಕನ್ನಡ ಪ್ರೇಕ್ಷಕರಿಗೆ ನಿರಾಸೆ

ಒಟಿಟಿಗೆ ಬಂದ ‘ಧುರಂಧರ್’ ಸಿನಿಮಾ; ಕನ್ನಡ ಪ್ರೇಕ್ಷಕರಿಗೆ ನಿರಾಸೆ


ಒಟಿಟಿ ಯುಗದಲ್ಲೂ ಎರಡು ತಿಂಗಳುಗಳ ಕಾಲ ಥಿಯೇಟರ್ ನಲ್ಲಿ ಅಬ್ಬರಿಸಿದ ‘ಧುರಂಧರ’ ಸಿನಿಮಾ ಈಗ ನೆಟ್ ಫ್ಲಿಕ್ಸ್ ಮೂಲಕ ಪ್ರಸಾರ ಆರಂಭಿಸಿದೆ. ‘ಧರುಂಧರ್’ ಚಿತ್ರ (ಧುರಂಧರ್ ಚಲನಚಿತ್ರ) ಡಿಸೆಂಬರ್ 5 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಯಿತು. ಚಿತ್ರವನ್ನು ಎಲ್ಲರೂ ನೋಡಿ ಕೊಂಡಾಡಿದರು. ಈಗ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಲಾಗಿದೆ. ಒಟಿಟಿ ವೀಕ್ಷಿಸುತ್ತಾರೆ ಈ ಚಿತ್ರವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಕುತೂಹಲ ಮೂಡಿದೆ.

‘ಧುರಂಧರ’ ಚಿತ್ರ ಥಿಯೇಟರ್‌ನಲ್ಲಿ ಹಿಂದಿ ಭಾಷೆಯಲ್ಲಿ ಮಾತ್ರ ರಿಲೀಸ್ ಆಯಿತು. ಈಗ ಒಟಿಟಿಯಲ್ಲಿ ತಂಡದವರು ತಮಿಳು ಮತ್ತು ತೆಲುಗು ಭಾಷೆಗೂ ಡಬ್ ಮಾಡಿ ರಿಲೀಸ್ ಮಾಡಿದ್ದಾರೆ. ಆದರೆ, ಕನ್ನಡಿಗರಿಗೆ ಈ ವಿಷಯದಲ್ಲಿ ನಿರಾಸೆ ಆಗಿದೆ. ಈ ಕನ್ನಡ ವರ್ಷನ್ ವೀಕ್ಷಣೆಗೆ ಲಭ್ಯವಿಲ್ಲ. ಇದು ಕನ್ನಡಿಗರ ಬೇಸರಕ್ಕೆ ಕಾರಣ. ಮುಂಚಿತವಾಗಿ ಒಟಿಟಿಗಳು ಕನ್ನಡಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿಲ್ಲ. ಇದು ಕರ್ನಾಟಕದ ಜನತೆಗೆ ನಿಜಕ್ಕೂ ಬೇಸರದ ವಿಷಯ.

‘ಧುರಂಧರ’ ಸಿನಿಮಾದಲ್ಲಿ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಆದಿತ್ಯ ಧಾರ್ ಅವರ ನಿರ್ದೇಶನವಿದೆ. ಈ ಚಿತ್ರ ಬಿಡುಗಡೆಗೂ ಸಾಕಷ್ಟು ನೆಗೆಟಿವ್ ಪ್ರಚಾರ ಪಡೆಯಿತು. ಆದರೆ, ಇದನ್ನು ಸಿನಿಮಾ ಮೆಟ್ಟಿ ನಿಂತಿತು. ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಅತಿ ದೀರ್ಘ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕೆ ಸಿಕ್ಕಿದೆ. ಸಿನಿಮಾದ ಅವಧಿ ಒಟಿಟಿಯಲ್ಲಿ ಮೂರುವರೆ ಗಂಟೆ ಇದೆ.

ಇದನ್ನೂ ಓದಿ: ದಕ್ಷಿಣದ ಮೇಲೆ ಕಣ್ಣು ಪ್ಯಾನ್ ಇಂಡಿಯಾ ಆಗಲಿದೆ ‘ಧುರಂಧರ 2’

ಆದಿತ್ಯ ಧಾರ್ ನಿರ್ದೇಶನಕ್ಕೆ ಜನರು ಮರುಳಾಗಿದ್ದಾರೆ. ಈ ಚಿತ್ರ ಸ್ಪೈ ಕಥೆಯನ್ನು ಹೊಂದಿದೆ. ಈ ಸಿನಿಮಾನ ಥಿಯೇಟರ್ ನಲ್ಲಿ ತಪ್ಪಿಸಿಕೊಂಡವರು ಅಥವಾ ಸಿನಿಮಾ ಚಿತ್ರಮಂದಿರದಲ್ಲಿ ನೋಡಿ ಮತ್ತೊಮ್ಮೆ ಮಗದೊಮ್ಮೆ ನೋಡಬೇಕು ಎಂದುಕೊಂಡವರು ಈ ಚಿತ್ರವನ್ನು ಒಟಿನಲ್ಲಿ ಕಣ್ತುಂಬಿಕೊಳ್ಳಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

ರಂದು ಪ್ರಕಟಿಸಲಾಗಿದೆ – 10:15 am, ಶುಕ್ರ, 30 ಜನವರಿ 26





Source link

Leave a Reply

Your email address will not be published. Required fields are marked *