‘ಪೋಷಕರಿಗೆ ಹೇಳಿದ್ರೆ ಕುತ್ತಿಗೆ ಹಿಸುಕುತ್ತೇನೆ’ಎಂದ ಶಿಕ್ಷಕಿ
ಬೆಂಗಳೂರು, ಜನವರಿ 30: ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ 4ನೇ ತರಗತಿ ಬಾಲಕನ ಮೇಲೆ ಶಿಕ್ಷಕಿ ಕ್ರೂರವಾಗಿ ಹಲ್ಲೆ ಮಾಡಿದ್ದಾಳೆ (ವಿದ್ಯಾರ್ಥಿಯ ಮೇಲೆ ಶಿಕ್ಷಕ ಹಲ್ಲೆ) ಜನವರಿ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂದಿನಿ ಲೇಔಟ್‌ನಲ್ಲಿರುವ ವೀಣಾ ವಿದ್ಯಾ ಸಂಸ್ಥೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ಆಂಗ್ಲಿನ್ ಬಾಲಕನಿಗೆ ಬಾಸುಂಡೆ ಬರುವ ಮಟ್ಟಿಗೆ ಥಳಿಸಿದ್ದಾರೆ ಎಂದು ಬಾಲಕನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾನು ಶಾಲೆಗೆ ಹೋಗಲ್ಲಮ್ಮ ಎಂದಿದ್ದ ಬಾಲಕ!
ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮೀ ತಮ್ಮ ಮಗನನ್ನು ಹಾಸ್ಟೆಲ್‌ನಲ್ಲಿ ಬಿಟ್ಟು ಓದಿಸುತ್ತಿದ್ದರು. ಇತ್ತೀಚೆಗೆ ಮಗನನ್ನು ನೋಡಲು ಬಂದ ವೇಳೆ, ಆತನ ಕೈ ಮತ್ತು ದೇಹದ ಮೇಲೆ ಬಾಸುಂಡೆ ಗುರುತುಗಳು ಕಂಡು ಶಾಕ್ ಆಗಿದ್ದರು. ಈ ವೇಳೆ ತಾಯಿಯನ್ನು ಕಂಡ ಮಗು ಅಳುತ್ತಾ ಹೋಂ ವರ್ಕ್ ಮಾಡದ ಕಾರಣ ಶಿಕ್ಷಕಿ ಆಂಗ್ಲಿನ್ ತನಗೆ ಥಳಿಸಿದಳು. ಹಲ್ಲೆ ವಿಚಾರವನ್ನು ಪೋಷಕರಿಗೆ ತಿಳಿಸಿದರೆ ಕುತ್ತಿಗೆ ಹಿಸುಕುವುದಾಗಿ ಬೆದರಿಕೆ ಹಾಕಿದ್ದಾಳೆ ತಾಯಿಯ ಬಳಿ ಬಾಲಕ ಏನೂ ಹೇಳಿಲ್ಲವೆಂದೂ ಕಣ್ಣೀರಿಟ್ಟಿದ್ದಾನೆ.
ವಿಷಯ ತಿಳಿದ ಲಕ್ಷ್ಮೀ ಈ ಬಗ್ಗೆ ಶಾಲಾ ಮುಖ್ಯಸ್ಥರನ್ನು ಪ್ರಶ್ನಿಸಿದ್ದರು. ಪೊಲೀಸರನ್ನೂ ಕರೆಸಿ ಹಲ್ಲೆ ನಡೆಸಿದ ಶಿಕ್ಷಕಿಯನ್ನು ಅಮಾನತುಗೊಳಿಸುವಂತೆಯೂ ಹೇಳಿದ್ದರು. ಈ ಮಧ್ಯೆ ಬಾಲಕ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದ. ನಂತರ ಶಿಕ್ಷಕಿ ಸಸ್ಪೆಂಡ್ ಆಗಬಹುದೆಂದು ಮಗನನ್ನು ಶಾಲೆಗೆ ಕಳುಹಿಸಲು ಹೋದಾಗ ಆಕೆಯನ್ನು ಅಮಾನತುಗೊಳಿಸಿಲ್ಲವೆಂದು ತಿಳಿದು ಮತ್ತೆ ಶಾಲೆಯ ಆಡಳಿತಕ್ಕೆ ಪ್ರಶ್ನಿಸಿದಾಗಲೂ ಅವರು ನಿರ್ಲಕ್ಷ್ಯ ತೋರಿದ್ದಾರೆ. ಇದೆಲ್ಲದರಿಂದ ಆಕ್ರೋಶಕ್ಕೊಳಗಾದ ತಾಯಿ ಗುರುವಾರ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ ಗರ್ಭಿಣಿ ಸೊಸೆಯನ್ನು ಮಾವ ಕೊಂದಿದ್ಯಾಕೆ ಗೊತ್ತಾ? ವೇಳೆ ಬಾಯ್ಬಿಟ್ಟ ಆರೋಪಿ ವಿಚಾರಣೆ!
ಮಗುವಿನ ತಾಯಿ ಹೇಳಿದ್ದೇನು?
ಬೆಂಗಳೂರಿನ ನಂದಿನಿ ಲೇಟ್‌ನ ವೀಣಾ ವಿದ್ಯಾ ಸಂಸ್ಥೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕನ ಮೇಲೆ ಶಿಕ್ಷಕಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಕನ ತಾಯಿ ಲಕ್ಷ್ಮೀ ಟಿವಿ9ಗೆ ಹೇಳಿಕೆ ನೀಡಿದ್ದು, ಇತ್ತೀಚೆಗೆ ಮಗನನ್ನು ನೋಡಲು ಬಂದಾಗ ಆತನ ಕೈ ಮತ್ತು ದೇಹದ ಮೇಲೆ ಬಾಸುಂಡೆ ಗುರುತು ಪತ್ತೆಯಾಗಿದೆ. ವಿಚಾರಿಸಿದಾಗ ಕಳೆದ ಎರಡು ತಿಂಗಳಿನಿಂದ ಇಂಗ್ಲಿಷ್ ಶಿಕ್ಷಕಿ ಆಂಗ್ಲಿನ್ ಮಗುವಿಗೆ ಹೊಡೆದು, ಪೋಷಕರಿಗೆ ಹೇಳಿದರೆ ಕುತ್ತಿಗೆ ಹಿಸುಕಿದೆ ಎಂದು ತಿಳಿದಿದೆ. ಎಫ್‌ಐಆರ್ ದಾಖಲಾಗಿದ್ದರೂ ಶಿಕ್ಷಕಿಯ ವಿರುದ್ಧ ತಕ್ಷಣ ಕ್ರಮಕೈಗೊಂಡಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇದೀಗ ಬಿಇಒಗೆ ದೂರು ನೀಡಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.