ಜನವರಿ 30: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ನಿರ್ಮಲಾ ಸೀತಾರಾಮನ್) ಫೆಬ್ರುವರಿ 1 ರಂದು ಪ್ರಸ್ತುತಪಡಿಸುತ್ತಿರುವ ಬಜೆಟ್ 2026-27 ಬಗ್ಗೆ ನಿರೀಕ್ಷೆಗಳು ಹಲವಿವೆ. ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಹೂಡಿಕೆದಾರರು ಈ ಬಜೆಟ್ ಏನು ನಿರೀಕ್ಷಿಸುತ್ತಾರೆ? ಆರ್ಥಿಕ ಬೆಳವಣಿಗೆಗೆ ನೀರೆರೆದು ಪೋಷಿಸಲು ಸರ್ಕಾರ ಯಾವ ಯೋಜನೆ ಮಾಡಿದೆ? ವಿತ್ತೀಯ ಶಿಸ್ತು ಕಾಯ್ದುಕೊಳ್ಳುವುದರೊಂದಿಗೆ ಬಂಡವಾಳ ವೆಚ್ಚವನ್ನು ಏನು ಕ್ರಮ ತೆಗೆದುಕೊಳ್ಳದಿದ್ದರೆ ಎಂಬುದು ಹೂಡಿಕೆದಾರರಿಗೆ ಇರುವ ಕುತೂಹಲ ಮತ್ತು ನಿರೀಕ್ಷೆ.
ಕಳೆದ ಬಜೆಟ್ ನಲ್ಲಿ ಸರ್ಕಾರವು ಬಂಡವಾಳ ವೆಚ್ಚಕ್ಕಿಂತ ಅನುಭೋಗಕ್ಕೆ ಪ್ರಾಶಸ್ತ್ಯ ಕೊಟ್ಟಂತಿತ್ತು. ಆದಾಯ ತೆರಿಗೆ ಮತ್ತು ಜಿಎಸ್ಟಿ ದರಗಳನ್ನು ಇಳಿಸುವ ಮೂಲಕ ಅನುಭೋಗಕ್ಕಾಗಿ ಕ್ರಮ ತೆಗೆದುಕೊಂಡಿತು. ಅದರ ಫಲವೆಂಬಂತೆ ಗ್ರಾಮೀಣ ಪ್ರದೇಶಗಳಲ್ಲಿ ಅನುಭೋಗ ಹೆಚ್ಚಿದೆ. ಬ್ರೋಕರೇಜ್ ಸಂಸ್ಥೆಯಾದ ಜೆಎಂ ಫೈನಾನ್ಷಿಯಲ್ ಈ ಅಂಶವನ್ನು ಗಮನಿಸಲಾಗಿದೆ. ಹಾಗೆಯೇ, ನಗರ ಭಾಗಗಳಲ್ಲಿ ಅನುಭೋಗ ದುರ್ಬಲವಾಗಿರುವ ಸಂಗತಿಯನ್ನೂ ಅದು ಎತ್ತಿ ತೋರಿಸಿದೆ.
ಇದನ್ನೂ ಓದಿ: ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಈ ಬಾರಿ ಏನೆಲ್ಲಾ ಸಿಗಬಹುದು? ಉದ್ದವಿದೆ ನಿರೀಕ್ಷೆಗಳ ಪಟ್ಟಿ!
ನಗರದಲ್ಲಿ ಅನುಭೋಗ ಹೆಚ್ಚುವುದು ಬಹಳ ಮುಖ್ಯ. ಇಲ್ಲಿ ಅನುಭೋಗ ಆರಕ್ಕೇರದ, ಮೂರಕ್ಕಿಳಿಯದ ಸ್ಥಿತಿಯಲ್ಲಿರುವುದರಿಂದ ಉತ್ಪಾದಕರು ತಮ್ಮ ಘಟಕವನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯೂ ಆಗುತ್ತದೆ. ಆರ್ಬಿಐ ದತ್ತಾಂಶದ ಪ್ರಕಾರ ಭಾರತದ ಉತ್ಪಾದನಾ ಸಂಸ್ಥೆಗಳಲ್ಲಿ ಈಗಿರುವ ಉತ್ಪಾದನಾ ಸಾಮರ್ಥ್ಯದಲ್ಲಿ ಶೇ. 75ಕ್ಕಿಂತ ಕಡಿಮೆ ಬಳಕೆ ಆಗುತ್ತಿದೆ.
ಆರ್ಬಿಐನ ಈ ಡಾಟಾವನ್ನು ಉಲ್ಲೇಖಿಸಿರುವ ಜೆಎಂ ಫೈನಾನ್ಷಿಯಲ್, ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರವು ಅನುಭೋಗ ಮತ್ತು ಬಂಡವಾಳ ವೆಚ್ಚದಲ್ಲಿ ಸಮತೋಲನ ತರಲು ಪ್ರಯತ್ನಿಸುತ್ತದೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2026: ಹೊಸ ಟ್ಯಾಕ್ಸ್ ರೆಜಿಮ್‌ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಬಹುದೇ?
ರೆವಿನ್ಯೂ ಎಕ್ಸ್ ಪೆಂಡಿಚರ್ ಅಥವಾ ಆದಾಯದ ವೆಚ್ಚದ ಅನುಭೋಗವು ಅಲ್ಪಾವಧಿಗೆ ಏರಿಕೆಯಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಅಥವಾ ಬಂಡವಾಳ ವೆಚ್ಚದಿಂದ ಜಿಡಿಪಿಗೆ ಮೂರು ಪಟ್ಟು ಪುಷ್ಟಿ ನೀಡುತ್ತದೆ. ಸರ್ಕಾರವು ಕ್ರಮೇಣವಾಗಿ ಬಂಡವಾಳ ವೆಚ್ಚವನ್ನು ಜಿಡಿಪಿಯ ಶೇ. 3ರಷ್ಟು ಮಟ್ಟಕ್ಕೆ ಏರಬಹುದು ಎಂದು ಜೆಎಂ ಫೈನಾನ್ಷಿಯಲ್ ನಿರೀಕ್ಷಿಸುತ್ತಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ