‘ಸಲಾರ್ 2’ ಸಿನಿಮಾ ನಿಂತೇ ಹೋಯ್ತೆ? ಪ್ರಭಾಸ್-ನೀಲ್ ಮಾಡಿರುವ ಚರ್ಚೆ ಏನು?

‘ಸಲಾರ್ 2’ ಸಿನಿಮಾ ನಿಂತೇ ಹೋಯ್ತೆ? ಪ್ರಭಾಸ್-ನೀಲ್ ಮಾಡಿರುವ ಚರ್ಚೆ ಏನು?


‘ಬಾಹುಬಲಿ 2’ (ಬಾಹುಬಲಿ 2) ಸಿನಿಮಾದ ಬಳಿಕ ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್ ಗೆಲುವಿನ ಹಳಿಗೆ ಮರಳಿ ತಂದಿದ್ದು ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ. ನೀಲ್ ಅವರೇ ನಿರ್ಮಿಸಿದ್ದ ಕನ್ನಡದ ‘ಉಗ್ರಂ’ ಸಿನಿಮಾದ ಕತೆಯನ್ನೇ ಆದರೆ ಪ್ರಭಾಸ್ ಸ್ಟಾರ್ ಡಮ್ ಗೆ ತಕ್ಕಂತೆ ಅದ್ಧೂರಿತನದಿಂದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಂಡಿತ್ತು. ‘ಸಲಾರ್ 2’ ಸಹ ಬರಲಿದೆ ಎಂದು ‘ಸಲಾರ್’ ಸಿನಿಮಾದ ಅಂತ್ಯದಲ್ಲಿ ಪ್ರಕಟಿಸಲಾಗಿದೆ. ಆದರೆ ‘ಸಲಾರ್’ ಬಿಡುಗಡೆ ಆಗಿ ಮೂರು ವರ್ಷಗಳಾಗುತ್ತಾ ಬಂದಿದ್ದರೂ ‘ಸಲಾರ್ 2’ ಸಿನಿಮಾದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ. ಹಾಗಿದ್ದರೆ ‘ಸಲಾರ್ 2’ ನಿಂತು ಹೋಯ್ತಾ? ಇಲ್ಲಿದೆ ಅಪ್ಡೇಟ್.

ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಅವರು ‘ಸಲಾರ್ 2’ ಸಿನಿಮಾದ ಬಗ್ಗೆ ಚರ್ಚೆ ನಡೆಸಿದ್ದು, ನೀಲ್ ರೆಡಿ ಮಾಡಿಕೊಂಡಿರುವ ‘ಸಲಾರ್ 2’ ಸಿನಿಮಾದ ಕತೆಯನ್ನು ಸಂಪೂರ್ಣವಾಗಿ ಬದಲಾಯಿಸಲು ನಿರ್ಧರಿಸಿದಂತೆ. ಹೀಗೆಂದು ಸಿನಿಮಾಕ್ಕೆ ಸಂಬಂಧಿಸಿದ ಒಬ್ಬರೇ ಹೇಳುವಂತೆ ಪಿಂಕ್ ಇಲ್ಲಾ ವರದಿ ಮಾಡಿದೆ. ಪ್ರಭಾಸ್ ಅವರ ಇತ್ತೀಚೆಗಿನ ಸಿನಿಮಾಗಳು ಯಶಸ್ಸು ಗಳಿಸಲು ಕಾರಣ, ‘ಸಲಾರ್ 2’ ಸಿನಿಮಾದ ಕತೆ, ಪ್ರೆಸೆಂಟೇಷನ್ ಅನ್ನು ಸಂಪೂರ್ಣವಾಗಿ ಬದಲಾಯಿಸುವ ನಿರ್ಧಾರವನ್ನು ನೀಲ್ ಮಾಡಿದ್ದು, ಇದಕ್ಕೆ ಪ್ರಭಾಸ್ ಅವರ ಸಲಹೆಯೇ ಕಾರಣ.

‘ಸಲಾ’ ಸಿನಿಮಾ ಬಿಡುಗಡೆಯಾದಾಗ ಇದ್ದಾಗಲೂ ಈಗಿನ ಪ್ರಕೃತಿಗೂ ಅಜಗಜಾಂತರ ವ್ಯತ್ಯಾಸವಿದೆ. ಈಗಿನ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಬಗ್ಗೆ ನೀಲ್ ಹಾಗೂ ಪ್ರಭಾಸ್ ಚರ್ಚಿಸಿದ್ದಾರೆ. ಇದೇ ಕಾರಣಕ್ಕೆ ಸಿನಿಮಾದ ಕತೆ, ಟೋನ್, ನಿರೂಪಣೆ ಇನ್ನೂ ಹಲವು ವಿಷಯಗಳನ್ನು ಬದಲಾವಣೆ ಮಾಡಿ, ಚಿತ್ರಕ್ಕೆ ಹೋಗುವ ನಿರ್ಧಾರದಂತೆ.

ಇದನ್ನೂ ಓದಿ:’ರಾಜಾಸಾಬ್’ ಸೋಲಿನ ಬಳಿಕ ಬಜೆಟ್ ಉಳಿಸಲು ಹೊಸ ಪ್ಲ್ಯಾನ್ ರೂಪಿಸಿದ ಪ್ರಭಾಸ್

‘ಸಲಾರ್’ ಸಿನಿಮಾಕ್ಕೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿತ್ತು. ಪ್ರಭಾಸ್ ಜೊತೆಗೆ ಹೊಂಬಾಳೆ ಫಿಲಂಸ್ ಮೂರು ಸಿನಿಮಾಗಳ ಒಪ್ಪಂದ ಮಾಡಿಕೊಂಡಿದ್ದು, ‘ಸಲಾರ್ 2’ ಸಹ ಅದರಲ್ಲಿ ಉಳಿದಿದೆ. ಆದರೆ ಪ್ರಭಾಸ್ ಮತ್ತು ನೀಲ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯೂಸಿ ಆಗಿರುವ ‘ಸಲಾರ್ 2’ ಸಿನಿಮಾ ತಡವಾಗುತ್ತಲೇ ಇದೆ. ಈ ಹಿಂದೆ ಪ್ರಭಾಸ್ ಮತ್ತು ನೀಲ್ ನಡುವೆ ಮನಸ್ತಾಪ ಉಂಟಾಗಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಪ್ರಭಾಸ್ ಅವರ ಹೊಸ ಸಿನಿಮಾ ಮುಹೂರ್ತಕ್ಕೆ ನೀಲ್ ಅತಿಥಿಯಾಗಿ ಹಾಜರಾಗಿ ಆ ಸುದ್ದಿಗಳಿಗೆ ತೆರೆ ಎಳೆದರು.

ಇದೀಗ ಪ್ರಭಾಸ್ ರಘು ಹನುಪುಡಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಅದಾದ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್ ನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕವಷ್ಟೆ ‘ಸಲಾರ್ 2’ ಪ್ರಾರಂಭ ಆಗಲಿದೆ. ಇನ್ನು ನೀಲ್ ಪ್ರಸ್ತುತ ಜೂ ಎನ್ ಟಿಆರ್ ನಟಿಸುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿದ್ದಾರೆ. ಅದರ ಬಳಿಕ ಅವರು ಅಲ್ಲು ಅರ್ಜುನ್ ಅಥವಾ ರಾಮ್ ಚರಣ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *