Headlines

‘ನಾ ಡ್ರೈವರ’: ಆರ್​​ಸಿಬಿ ಕ್ಯಾಂಪ್​​ನಲ್ಲಿ ಮಾಳು ಹಾಡಿನ ಹವಾ

‘ನಾ ಡ್ರೈವರ’: ಆರ್​​ಸಿಬಿ ಕ್ಯಾಂಪ್​​ನಲ್ಲಿ ಮಾಳು ಹಾಡಿನ ಹವಾ


‘ನಾ ಡ್ರೈವರ, ನನ ಲವ್ವರ’ ಮಾಳು ನಿಪ್ಪಾಳ (ಮಾಲು ನಿಪ್ಪಾಳ) ​​ಹಾಡಿರುವ ಈ ಹಾಡು ಇತ್ತೀಚೆಗಿನ ಬಲು ಜನಪ್ರಿಯ ಕನ್ನಡ ಹಾಡುಗಳಲ್ಲಿ ಒಂದಾಗಲಿದೆ. ಈ ಹಾಡೊಂದರ ಕಾರಣಕ್ಕೆ ಗಾಯಕ ಮಾಳು ನಿಪ್ಪಾಳಗೆ ಹಲವು ಅವಕಾಶಗಳು ಅರಸಿ ಬಂದವು. ಬಿಗ್ಬಾಸ್ ಶೋಗೂ ಸಹ ಬರುವಂತಾಯ್ತು. ಈ ಜವಾರಿ ಹಾಡು ಇಷ್ಟುದಿನ ಶ್ರಮಿಕ, ಕಾಲೇಜು ಯುವಕ-ಯುವತಿಯರ ಬಾಯಲ್ಲಿ ನಲಿದಾಡುತ್ತಿದೆ, ಆದರೆ ಈಗ ‘ನಾ ಡ್ರೈವರ್’ ಹಾಡಯ್ಯ ಆರ್ ಸಿಸಿಬಿ ಕ್ಯಾಂಪನ್ನೂ ಸಹ ತಲುಪಿದೆ.

ಹೌದು, ಇದೀಗ ಮಹಿಳಾ ಐಪಿಎಲ್ ಚಾಲ್ತಿಯಲ್ಲಿದ್ದು, ಆರ್ ಸಿಬಿ ತಂಡ ಅದ್ಭುತ ತೋರಿ ಫೈನಲ್ ಪ್ರವೇಶಿಸಿದೆ. ಆರ್ಸಿಬಿ ತಂಡ ಮೊದಲಿನಿಂದಲೂ ಕ್ರಿಕೆಟ್‌ನ ಜೊತೆಗೆ ತನ್ನ ಸೋಶಿಯಲ್ ಮೀಡಿಯಾ ಕಾಂಟೆಂಟ್ ಗೇಮ್‌ನಲ್ಲೂ ಬಹಳ ಮುಂದಿದೆ. ಅದ್ಭುತ ಕಾಂಟೆಂಟ್ ಅಭಿಮಾನಿಗಳಿಗೆ, ಜನರಿಗೆ ನೀಡುತ್ತಾ ಬಂದಿದೆ. ಆರ್ಸಿಬಿ ತಂಡ ಭಾಗವೇ ಆಗಿರುವ ದಾನಿಷ್ ಸೇಠ್ ನಡೆಸಿಕೊಡುವ ಆರ್ಸಿಬಿ ಇನ್ ಡೈಡರ್ ಶೋ ವಿಶ್ವಪ್ರಸಿದ್ಧ. ಇದೀಗ ಆರ್ಸಿಬಿ ಇನ್ಸೈಡರ್ನಲ್ಲಿ ಮಾಳುವಿನ ‘ನಾ ಡ್ರೈವರ್’ ಹಾಡಿಗೆ ಆರ್ಸಿಬಿ ಆಟಗಾರ್ತಿ ಸಖತ್ ಸ್ಟೆಪ್ಪು ಹಾಕಿದ್ದಾರೆ.

ದಾನಿಷ್ ಸೇಠ್, ‘ಆರ್ಸಿಬಿ ಇನ್ ಡೈಡರ್ ಶೋ’ಗಾಗಿ ಆರ್ಸಿಬಿಯ ಆಲ್ರೌಂಡ್ ಆಟಗಾರ್ತಿ, ಕನ್ನಡತಿಯೂ ಆಗಿರುವ ಶ್ರೇಯಾಂಕಾ ಪಾಟೀಲ್ ಅವರೊಂದಿಗೆ ಸಂದರ್ಶನ ನಡೆಸಿದ್ದಾರೆ. ಶ್ರೇಯಾಂಕಾ ಅವರೊಟ್ಟಿಗೆ ಹಾಸ್ಯಮಯ ಸಂದರ್ಶನ ಮಾಡಿರುವ ಡ್ಯಾನಿಶ್, ಸಂದರ್ಶನದ ಕೊನೆಯಲ್ಲಿ ಎರಡೂ ಕ್ರೀಡಾಂಗಣದಲ್ಲಿ ಪಿಚ್ ರೋಲ್ ಮಾಡುವ ವಾಹನದ ಮೇಲೆ ಕೂತು ‘ನಾ ಡ್ರೈವರ್’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ:ವೇದಿಕೆ ಏರಿದ ಮಾಳು ವಿರುದ್ಧ ಸೇಡು ತೀರಿಸಿಕೊಂಡ ಗಿಲ್ಲಿ ಫ್ಯಾನ್ಸ್; ಭಾರೀ ಮುಜುಗರ

ಇನ್ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ, ಡ್ಯಾನ್ಸ್ ರೀಲ್ಸ್ನಲ್ಲಿ ಅನುಭವ ಇರುವ ಶ್ರೇಯಾಂಕಾ ಪಾಟೀಲ್ ‘ನಾ ಡ್ರೈವರ್’ ಹಾಡಿಗೆ ಸಖತ್ತಾಗಿ ಸ್ಟೆಪ್ಪುಗಳನ್ನು ಹಾಕಿದ್ದಾರೆ. ಮೂಲ ಹಾಡಿನಲ್ಲಿ ಮಾಳು ಮಾಡಿರುವ ಸ್ಟೆಪ್ಪುಗಳನ್ನು ಅನುಕರಣೆ ಸಹ ಮಾಡಿದ್ದಾರೆ. ಶ್ರೇಯಾಂಕಾ ಹಾಗೂ ದಾನಿಷ್ ಅವರ ಡ್ಯಾನ್ಸ್ ನೋಡಿ ಆರ್ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ ಆಶ್ಚರ್ಯ ಪಟ್ಟಿದ್ದಾರೆ.

ಶ್ರೇಯಾಂಕಾ ಮತ್ತು ದಾನಿಶ್ ಅವರುಗಳು ‘ನಾ ಡ್ರೈವರ್’ ಹಾಡಿಗೆ ಹಾಕಿರುವ ಸ್ಟೆಪ್ಪುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಜವಾರಿ ಹಾಡಾದ ‘ನಾ ಡ್ರೈವರ್’ ಆರ್ ಸಿಬಿ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೇರಿದೆ ಎಂದು ಕಮೆಂಟುಗಳನ್ನು ಹಾಕುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 3:01 pm, ಶುಕ್ರ, 30 ಜನವರಿ 26





Source link

Leave a Reply

Your email address will not be published. Required fields are marked *