ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ; ವಿಡಿಯೋ

ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ; ವಿಡಿಯೋ


ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಐದನೇ ಮತ್ತು ಅಂತಿಮ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಕೇರಳದ ತಿರುವನಂತಪುರಂಗೆ ಆಗಮಿಸಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿರುವ ಸಂಜು ಸ್ಯಾಮ್ಸನ್ ಕೇರಳದ ತಿರುವನಂತಪುರದವರಾಗಿದ್ದಾರೆ. ಜೊತೆಗೆ ಸಂಜು ಸ್ಯಾಮ್ಸನ್ ಇದೇ ಮೊದಲ ಬಾರಿಗೆ ತನ್ನ ತವರಿನಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನಾಡುತ್ತಿದೆ. ಹೀಗಾಗಿ ಅಭಿಮಾನಿಗಳು ಕೂಡ ಸಂಜು ನೋಡಲು ಕಾಯುತ್ತಿದ್ದಾರೆ. ತವರಿನಲ್ಲಿ ಮೊದಲ ಪಂದ್ಯವನ್ನಾಡಲು ಬಂದ ಸಂಜುಗೆ ವಿಶೇಷ ಸ್ವಾಗತ ಸಿಕ್ಕಿದೆ. ಅಭಿಮಾನಿಗಳಿಂದ ಇದೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಕೂಡ ಸಂಜುಗೆ ವಿಶೇಷ ರೀತಿಯ ಸ್ವಾಗತ.

ಟೀಂ ಇಂಡಿಯಾ ಆಟಗಾರರು ಕೇರಳದ ತಿರುವನಂತಪುರಂಗೆ ಆಗಮಿಸುತ್ತಿರುವ ವಿಡಿಯೋವನ್ನು ಬಿಸಿ ಹಂಚಿಕೊಂಡಿದೆ. ಅದರಲ್ಲಿ ಸೂರ್ಯ ಮತ್ತು ಸ್ಯಾಮ್ಸನ್ ನಡುವಿನ ತಮಾಷೆಯ ಕ್ಷಣಗಳು ಹೈಲೈಟ್ ಆಗಿವೆ. ತಿರುವನಂತಪುರಂ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದ ಸಂಜು ಸ್ಯಾಮ್ಸನ್ ಅವರನ್ನು ಸೂರ್ಯಕುಮಾರ್ ಯಾದವ್ ವಿಶೇಷವಾಗಿ ಸ್ವಾಗತಿಸಿದ್ದಾರೆ. ಸಂಜುಗೆ ಅಂಗರಕ್ಷಕನಂತೆ ನಟಿಸಿರುವ ಸೂರ್ಯ, ದಾರಿ ಬಿಡಿ ದಾರಿ, ಚೇಟ (ಸಂಜು) ಅವರಿಗೆ ತೊಂದರೆಕೊಡಬೇಡಿ, ಅವರ ಫೋಟೋ ತೆಗೆಯಬೇಡಿ. ಸೂರ್ಯ, ಸಂಜು ಅವರ ಕಾಲೆಳೆಯಲು ಈ ರೀತಿಯಾಗಿ ನಟಿಸಿದ್ದು, ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.



Source link

Leave a Reply

Your email address will not be published. Required fields are marked *