Headlines

Union Budget 2026 Live: ಬಜೆಟ್ ಭಾಷಣ ಸಮಯ, ಲೈವ್ ಸ್ಟ್ರೀಮಿಂಗ್, ಪಿಡಿಎಫ್ ಕಾಪಿ ಡೌನ್​ಲೋಡ್ ಇತ್ಯಾದಿ ಮಾಹಿತಿ

Union Budget 2026 Live: ಬಜೆಟ್ ಭಾಷಣ ಸಮಯ, ಲೈವ್ ಸ್ಟ್ರೀಮಿಂಗ್, ಪಿಡಿಎಫ್ ಕಾಪಿ ಡೌನ್​ಲೋಡ್ ಇತ್ಯಾದಿ ಮಾಹಿತಿ


ಯೂನಿಯನ್ ಬಜೆಟ್ 2026-27: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ನಿರ್ಮಲಾ ಸೀತಾರಾಮನ್) ಅವರು ಫೆಬ್ರುವರಿ 1, ಭಾನುವಾರದಂದು 2026-27ನೇ ಸಾಲಿನ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದಾರೆ. ಭಾನುವಾರ ಬೆಳಗ್ಗೆ 11ಗಂಟೆಗೆ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಸಚಿವ ಬಜೆಟ್ ಮಂಡನೆ ಆರಂಭಿಸುತ್ತಾರೆ. ಬಜೆಟ್ ಭಾಷಣ ಮುಗಿಯಲು ಮಧ್ಯಾಹ್ನ ಎರಡು ಗಂಟೆ ದಾಟಬಹುದು. ಇದು ಭಾರತದಲ್ಲಿ ಮಂಡಿಯಾಗುವ 88ನೇ ಬಜೆಟ್ ಆಗಿದೆ. ನಿರ್ಮಲಾ ಸೀತಾರಾಮನ್ ಅವರಿಗೆ ಇದು 9ನೇ ಬಜೆಟ್ ಮಂಡನೆ. ಅದು ಸತತವಾಗಿ. ಸತತ 9 ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಲಾ ಅವರದ್ದಾಗಿತ್ತು.

ಟ್ರಂಫ್ ಅವರ ಟ್ಯಾರಿಫ್ ಪ್ರತಾಪ, ವಿವಿಧ ದೇಶಗಳ ಮೇಲೆ ಅಮೆರಿಕದ ಧಮಕಿ, ರಷ್ಯಾ ಉಕ್ರೇನ್ ಯುದ್ಧ ಮುಂದುವರಿದಿರುವುದು, ಇವೇ ಮುಂತಾದ ಜಾಗತಿಕವಾಗಿ ಅನಿಶ್ಚಿತ ವಾತಾವರಣ ಒಂದೆಡೆ ಇದೆ. ಜೊತೆಗೆ, ಯೂರೋಪ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿರುವುದು, ಜಿಡಿಪಿ ನಿರೀಕ್ಷೆಮೀರಿ ಬೆಳೆಯುತ್ತಿರುವುದು, ಹಣದುಬ್ಬರಕ್ಕೆ ಕಡಿವಾಣ ಬಿದ್ದಿರುವುದು ಇತ್ಯಾದಿ ಅಂಶಗಳು ಇನ್ನೊಂದೆಡೆ ಇವೆ. ಇಂತಹ ಮಿಶ್ರ ಸನ್ನಿವೇಶದಲ್ಲಿ ಬಜೆಟ್ ಮಂಡನೆ ಆಗುತ್ತಿದೆ, ನಿರೀಕ್ಷೆಗಳು ಹಲವಿವೆ.

ಈ ಕೆಳಗಿನ ಯೂಟ್ಯೂಬ್‌ನಲ್ಲಿ ಫೆಬ್ರವರಿ 1 ರಂದು ಬಜೆಟ್ ಭಾಷಣವನ್ನು ಲೈವ್ ಆಗಿ ವೀಕ್ಷಿಸಬಹುದು

ಬಜೆಟ್ ಭಾಷಣ ಎಲ್ಲಿ ನೋಡುವುದು?

2026ರ ಫೆಬ್ರವರಿ 1, ಭಾನುವಾರದಂದು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಆರಂಭವಾಗಲಿದೆ. ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರ ಪ್ರಸಾರ ಇರುತ್ತದೆ. ಟಿವಿ9 ಕನ್ನಡ ವಾಹಿನಿಯಲ್ಲಿ ನೇರ ಪ್ರಸಾರ ಮಾಡಬಹುದು. TV9 ಕನ್ನಡ ಯೂಟ್ಯೂಬ್ ಮತ್ತು ವೆಬ್‌ಸೈಟ್‌ನ ಬಜೆಟ್ ಭಾಷಣವನ್ನು ನೇರ ಪ್ರಸಾರ ಮಾಡಬಹುದು. ವೆಬ್‌ಸೈಟ್‌ನಲ್ಲಿ ಬಜೆಟ್ ಭಾಷಣ ಆರಂಭಕ್ಕೂ ಮುನ್ನ ಲೈವ್ ಬ್ಲಾಗ್ ಕೂಡ ಇರುತ್ತದೆ. ಬಜೆಟ್ನ ಇಂಚುಗಳು ಲೈವ್ ಬ್ಲಾಗ್ನಲ್ಲಿ ಕಂಡುಬರುತ್ತವೆ.

ಬಜೆಟ್ ಸಂಬಂಧಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಜೆಟ್ ಪ್ರತಿ ಡೌನ್ ಲೋಡ್ ಮಾಡುವುದು

ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಮುಗಿದ ಕೂಡಲೇ ಅದರ ಪ್ರತಿಯು ಆನ್‌ಲೈನ್‌ನಲ್ಲಿ ಲಭ್ಯವಿದೆ. ಬಜೆಟ್ ಭಾಷಣದಿಂದ ಹಿಡಿದು ಬಜೆಟ್ ಹೈಲೈಟ್ಸ್ವರೆಗೆ ವಿವಿಧ ಸಂಬಂಧಿತ ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತವೆ. ಅದಕ್ಕೆಂದೇ ರೂಪಿಸಲಾಗಿದೆ indiabudget.gov.in ವೆಬ್ ಸೈಟ್‌ನಲ್ಲಿ ಈ ದಾಖಲೆಗಳನ್ನು ನೋಡಬಹುದು, ದಯವಿಟ್ಟು, ಡೌನ್‌ಲೋಡ್ ಕೂಡ ಮಾಡಬಹುದು. ಬಜೆಟ್ ಪ್ರತಿಯು ಪಿಡಿಎಫ್ ಫಾರ್ಮ್ಯಾಟ್ನಲ್ಲಿ ಇರುತ್ತದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *