ತೆರೆಗೆ ಬರುತ್ತಿದೆ ಮೈಕಲ್ ಜಾಕ್ಸನ್ ಜೀವನ: ಬಿಡುಗಡೆ ಯಾವಾಗ?

ತೆರೆಗೆ ಬರುತ್ತಿದೆ ಮೈಕಲ್ ಜಾಕ್ಸನ್ ಜೀವನ: ಬಿಡುಗಡೆ ಯಾವಾಗ?


ವಿಶ್ವ ಸಂಗೀತ ಮತ್ತು ಪಾಪ ಕ್ಷೇತ್ರದಲ್ಲಿ ದಂತಕತೆ. ಅವರ ನೃತ್ಯ ಮತ್ತು ಹಾಡು ಅಮೆರಿಕದ ಪಾಪ್ ಸಂಸ್ಕೃತಿಯನ್ನೇ ಬದಲಾಯಿಸಿತು. ಮೈಕಲ್ ಜಾಕ್ಸನ್ (ಮೈಕಲ್ ಜಾಕ್ಸನ್) ಅವರ ಶೈಲಿಯ ನೃತ್ಯ, ಅವರ ಥ್ರಿಲ್ಲರ್, ಬ್ಯಾಡ್ ಮತ್ತು ಡೇಂಜರಸ್ ಆಲ್ಬಂಗಳು ಇತಿಹಾಸವನ್ನೇ ನಿರ್ಮಿಸಿವೆ. ಮೈಕಲ್ ಜಾಕ್ಸನ್ ಸಹ ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಪ್ರಭುದೇವ ಸೇರಿದಂತೆ ಕೋಟ್ಯಂತರ ಕಲಾವಿದರಿಗೆ ಪ್ರೇರಣೆ ನೀಡಿದ್ದಾರೆ. ಪಾಪ ರಾಜನೆಂಬ ಹೆಸರನ್ನು ಪಡೆದಿದ್ದ ಮೈಕಲ್ ಅವರ ಖಾಸಗಿ ಜೀವನಕ್ಕೆ ಸಾಕಷ್ಟು ನೋವು, ಹೋರಾಟಗಳಿಂದ ಕೂಡಿತ್ತು. ಇದೀಗ ಮೈಕಲ್ ಜಾಕ್ಸನ್ ಜೀವನ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದ್ದರೆ, ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

ಮೈಕಲ್ ಜಾಕ್ಸನ್ ಜೀವನ ಆಧಾರಿತ ಸಿನಿಮಾ ಹಾಲಿವುಡ್‌ನಲ್ಲಿ ನಿರ್ಮಾಣಗೊಂಡಿದ್ದು ಸಿನಿಮಾಕ್ಕೆ ‘ಮೈಕಲ್’ ಎಂದು ಹೆಸರಿಸಲಾಗಿದೆ. ಈ ಹಿಂದೆ ಭಾರತೀಯ ಮೂಲದ ಪಾಪ್ ತಾರೆ ಫ್ರೆಡಿ ಮರ್ಕ್ಯುರಿ ಜೀವನ ಆಧಾರಿತ ‘ಬೋಹಿಯನ್ ರಾಪ್ಸಡಿ’ ಸಿನಿಮಾ ನಿರ್ಮಾಣ ಮಾಡಿದ್ದ ಗ್ರಹಾಂ ಕಿಂಗ್, ಇದೀಗ ಮೈಕಲ್ ಜಾಕ್ಸನ್ ಜೀವನ ಆಧರಿಸಿದ ‘ಮೈಖಲ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ಮೈಕಲ್’ ಸಿನಿಮಾವನ್ನು ಆಂಟೊನಿ ಫರುಖಾ ನಿರ್ದೇಶನ ಮಾಡಿದ್ದಾರೆ.

ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗಿದೆ. ಈ ಸಿನಿಮಾ ಮೈಖಲ್ ಜಾಕ್ಸನ್ ಅವರ ಬಾಲ್ಯ, ಯೌವ್ವನ ಅವರ ಜನಪ್ರಿಯತೆ, ಅವರ ಬಣ್ಣ ಬದಲಾವಣೆಗೆ ಕಾರಣ, ಮೈಕಲ್ ಅನ್ನು ಸುತ್ತಿಕೊಂಡ ವಿವಾದಗಳು, ಮೈಕಲ್ ಆರೋಗ್ಯ ಸಮಸ್ಯೆ, ಅವರ ಸಾವು ಎಲ್ಲವನ್ನೂ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಅಂತೂ ಅದ್ಭುತವಾಗಿ ಮೂಡಿ ಬಂದಿದೆ. ಮೈಕಲ್ ಅವರ ಒರಿಜಿನಲ್ ಹಾಡುಗಳನ್ನು ಬಳಸಲಾಗಿದೆ.

ಇದನ್ನೂ ಓದಿ:ಹಾಲಿವುಡ್ ಸ್ಟಾರ್ ನಟನಿಗೆ ಭಾರತದ ಈ ನಿರ್ದೇಶಕನಿಗೆ ಕೆಲಸ ಮಾಡುವ ಆಸೆ

ಮೈಕಲ್ ಜಾಕ್ಸನ್ ಪಾತ್ರದಲ್ಲಿ ಅವರ ಸಹೋದರ ಪುತ್ರ ಆಗಿರುವ ಜಾಫರ್ ಜಾಕ್ಸನ್ ಅವರೇ ನಟಿಸುತ್ತಿರುವುದು ವಿಶೇಷ. ಜಾಫರ್ ಜಾಕ್ಸನ್ ಪಾತ್ರಧಾರಿ ಗಾಯಕ ಮತ್ತು ನಟರಾಗಿ, ತಮ್ಮ ಅಂಕಲ್ ನಲ್ಲಿ ಅವರು ನಟಿಸುತ್ತಿದ್ದಾರೆ. ಜಾಫರ್ ಜಾಕ್ಸನ್ ಗೆ ‘ಮೈಕಲ್’ ಮೊದಲ ಸಿನಿಮಾ ಆಗಿದೆ. ಟ್ರೈಲರ್‌ನಲ್ಲಿ ಮೈಕಲ್ ಆಗಿ ಅವರು ಗಮನ ಸೆಳೆಯುತ್ತಿದ್ದಾರೆ. 1300 ಕೋಟಿ ಬಜೆಟ್ ನಲ್ಲಿ ಸಿನಿಮಾವನ್ನು ನಿರ್ಮಿಸಲಾಗಿತ್ತು, ಸಿನಿಮಾದ ಮೊದಲ ಪ್ರೀಮಿಯರ್ ಏಪ್ರಿಲ್ 10 ರಂದು ಬರ್ಲಿನ್ ನಲ್ಲಿ ನಡೆಯಲಿದೆ. ಬಳಿಕ ಏಪ್ರಿಲ್ 24 ರಂದು ವಿಶ್ವದಾದ್ಯಂತ ‘ಮೈಕಲ್’ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *