Headlines

ರಾಯ್ ನಿಧನಕ್ಕೆ ಸಿಂಗರ್ ಹನುಮಂತ ಸಂತಾಪ: ಕುರಿಗಾಯಿಗೆ ಈ ಕೋಟ್ಯಾಧಿಪತಿ ಹೇಗೆ ಪರಿಚಯ?

ರಾಯ್ ನಿಧನಕ್ಕೆ ಸಿಂಗರ್ ಹನುಮಂತ ಸಂತಾಪ: ಕುರಿಗಾಯಿಗೆ ಈ ಕೋಟ್ಯಾಧಿಪತಿ ಹೇಗೆ ಪರಿಚಯ?


ಸಾವಿಗೆ ಶರಣಾಗಿರುವ ಉದ್ಯಮಿ ಸಿಜೆ ರಾಯ್ (ಸಿಜೆ ರಾಯ್) ಅವರು ಮನರಂಜನಾ ಕ್ಷೇತ್ರಕ್ಕೂ ಸಹ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಮಲಯಾಳಂ ಸಿನಿಮಾಗಳನ್ನು ನಿರ್ಮಿಸಿದ್ದರು. ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ 50 ಲಕ್ಷ ರೂಪಾಯಿ ಹಣ ಕೊಟ್ಟಿದ್ದರು, ಸ್ಟಾರ್ ಸುವರ್ಣದ ‘ಸ್ಟಾರ್ ಸಿಂಗರ್’ ರಿಯಾಲಿಟಿ ಶೋದ ಪ್ರಾಯೋಜಕರಲ್ಲಿ ಕೂಡ ಒಬ್ಬರಾಗಿದ್ದರು. ಹೀಗೆ ಮನರಂಜನಾ ಕ್ಷೇತ್ರಕ್ಕೆ ರಾಯರ ಕೊಡುಗೆ ಇದೆ.ಇನ್ನು ಅವರ ನಿಧನಕ್ಕೆ ಕನ್ನಡ ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಹಾಗೂ ಸರಿಗಮಪ ಸೀಸನ್ 15ರ ರನ್ನರ್ ಅಪ್ ಆಗಿರುವ ಕುರಿಗಾಯಿ ಹನುಮಂತ ಸಂತಾಪ ಸೂಚಿಸಿದ್ದಾರೆ.

ಹನುಮಂತು ಸಂತಪದ ಪೋಸ್ಟ್

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿರುವ ಹನುಮಂತ, ತುಂಬಾ ಒಳ್ಳೆಯ ಸಂಗತಿ. ಸರಿಗಮಪ ಸೀಸನ್ 15ರಲ್ಲಿ ರನ್ನರ್ ಅಪ್ ಅದ ನನಗೆ ಹಣ ನೀಡಿ ಬದುಕಿಗೆ ದಾರಿ ದೀಪವಾಗಿದ್ದರೂ. ಬಿಗ್ ಬಾಸ್ ಸೀಸನ್ 11 ಗೆದ್ದಾಗಲೂ ಸಂಭ್ರಮಿಸಿ ಹಣ ನೀಡಿದ್ದರು . ನೀವು ಮತ್ತು ನಿಮ್ಮ ಋಣವನ್ನು ಯಾವತ್ತು ಮರಿಯೋಕೆ ಸಾಧ್ಯವಿಲ್ಲ. ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಿನಿಮಾ, ಟಿವಿ ಕ್ಷೇತ್ರದೊಟ್ಟಿಗೆ ಜೆಸಿ ರಾಯರು ಅವರಿಗಿದ್ದ ಬಂಧ ಎಂಥದ್ದು?

ಹನುಮಂತುಗೆ ಹಣ ಸಹಾಯ ಮಾಡಿದ್ದ ರಾಯರು

ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯಲ್ಲಿ ಕನ್ನಡಿಗರ ಹೃದಯ ಗೆದ್ದು ಬಿಗ್ ಬಾಸ್ ಚಾಂಪಿಯನ್ ಪಟ್ಟ ಅಲಂಕರಿಸಿದ ಗಾಯಕ ಹನುಮಂತ ಲಮಾಣಿಗೆ ಇದೇ ಕಾನ್ಫಿಡೆಂಟ್ ಗ್ರೂಪ್ ಚೆರ್ಮೆನ್ ಸಿಜೆ ರಾಯ್ 50 ಲಕ್ಷ ರೂಪಾಯಿ ಬಹುಮಾನ ನೀಡಿದ್ದರು. ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಸಿಜೆ ರಾಯ್ 50 ಲಕ್ಷ ರೂಪಾಯಿ ಬಹುಮಾನ ವಿತರಿಸಿದ್ದರು. ಸರಿಗಮಪ ಸೀಸನ್ 15 ರಲ್ಲಿ ರನರ್ ಅಪ್ ಆಗಿದ್ದಾಗಲೂ ಸಹ ಸಿಜೆ ರಾಯ್ ಅವರು ಹನುಮಂತನಿಗೆ ಹಣದ ಸಹಾಯ ಮಾಡಿದರು. ಇಷ್ಟ ಮಾಡಿದ ಸಿಜೆ ರಾಯರು ಈ ಸಂದರ್ಭದಲ್ಲಿ ಹನುಮಂತ ನೆನಪಿಸಿಕೊಂಡಿದ್ದಾರೆ.

ಜೀ ಕನ್ನಡ ವಾಹಿನಿಯ ‘ಸರಿಗಮಪ’ ಸೀಸನ್ 15ರಲ್ಲಿ ಗಾಯಕನಾಗಿ ಎಂಟ್ರಿ ಕೊಟ್ಟಿದ್ದ ಹನುಮಂತ, ತನ್ನ ಗಾಯನ ಮತ್ತು ಮುಗ್ಧತೆಯಿಂದ ಫೇಮಸ್ ಆಗಿದ್ದಾರೆ. ಗ್ರಾಮೀಣ ಪ್ರದೇಶದ ಜನಪದ ಹಾಡುಗಳು ಎಲ್ಲರ ಪ್ರೀತಿಯನ್ನು ಗಳಿಸಿ ಜನಮಣ್ಣೆ ಗಳಿಸಿದ್ದಾರೆ. ಹೀಗೆ ಹನುಮಂತಗೆ ಸಾಕಷ್ಟು ಜನಪ್ರಿಯತೆ ಸಿಕ್ಕ ನಂತರ ಜೀ ಕನ್ನಡದ ಹಲವು ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಅಲ್ಲಿಯೂ ಹನುಮಂತ ನೃತ್ಯ ಮಾಡಿ ಗಮನಸೆಳೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *