ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಮ್ಯಾಕ್ಸ್’ ಹಾಗೂ ‘ಮಾರ್ಕ್’ ಮೂಲಕ 2024 ಹಾಗೂ 2025ರಲ್ಲಿ ಅಭಿಮಾನಿಗಳನ್ನು ರಂಜಿಸಿದರು. ಸುದೀಪ್ ಅವರ ಸಿನಿ ಪಯಣಕ್ಕೆ ಇದೀಗ 30 ವರ್ಷ. ಮೂರು ಲಭ್ಯ ಯಶಸ್ಸಿನ ಜರ್ನಿಯಲ್ಲಿ ಭಾಗಿಯಾದ ಎಲ್ಲರಿಗೂ ಅವರಿಗೆ ಧನ್ಯವಾದ.
‘ಬ್ರಹ್ಮ’ ಸುದೀಪ್ ನಟನೆಯ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಅಂಬರೀಶ್ ಅವರು ನಟಿಸಿದ್ದರು. ಆದರೆ, ಈ ಚಿತ್ರ ರಿಲೀಸ್ ಆಗಲೇ ಇಲ್ಲ. ಸುದೀಪ್ ಈ ಚಿತ್ರಕ್ಕಾಗಿ ಕ್ಯಾಮೆರಾ ಎದುರು ನೋಡುತ್ತಿದ್ದ ದಿನವನ್ನು ಚಿತ್ರರಂಗದಲ್ಲಿ ಮೊದಲ ದಿನ ಎಂದು ಪರಿಗಣಿಸಿದ್ದಾರೆ. ಅವರ ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೆ (ಜನವರಿ 31) 30 ವರ್ಷಗಳು ಕಳೆದಿವೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.
30 ವರ್ಷಗಳು. ಅನಂತ ಕೃತಜ್ಞತೆ. 🎬❤️
ಈ ಕ್ರೇಜಿ, ಸುಂದರ ಚಲನಚಿತ್ರ ಜಗತ್ತಿನಲ್ಲಿ ಮೂರು ದಶಕಗಳ ನಂತರ ಇಲ್ಲಿ ನಿಂತಿರುವ ನನ್ನ ಹೃದಯ ಕೇವಲ … ತುಂಬಿದೆ. ಕನಸುಗಳು, ಅನುಮಾನಗಳು ಮತ್ತು ಹುಚ್ಚು ಭರವಸೆಯ ಹುಡುಗನಿಂದ ಹಿಡಿದು ಅದು ಏನಾಯಿತು – ನಿಮ್ಮ ಕಾರಣದಿಂದಾಗಿ ಇದು ನಾನು ಊಹಿಸಿದ್ದಕ್ಕಿಂತ ದೊಡ್ಡದಾಗಿದೆ. ಅಭಿಮಾನಿಗಳು – ನೀವು ನನ್ನ… pic.twitter.com/4gipzvWKeg
— ಕಿಚ್ಚ ಸುದೀಪ (@KicchaSudeep) ಜನವರಿ 31, 2026
‘ಮೂವತ್ತು ವರ್ಷಗಳ ಸಾರ್ಥಕ ಪಯಣ’ ಎಂದು ಸುದೀಪ್ ಪತ್ರ ಆರಂಭಿಸಿದ್ದಾರೆ. ‘ಚಿತ್ರರಂಗದಲ್ಲಿ 3 ನೆಲೆಯನ್ನು ಪೂರೈಸಿ ನಿಂತಿರುವ ಈ ಕ್ಷಣ ನನ್ನ ಹೃದಯ ತುಂಬಿ ಬಂದಿದೆ. ಅಂದು ಕನಸುಗಳು, ಅನುಮಾನಗಳು ಮತ್ತು ಅಪಾರ ಭರವಸೆ ಹೊತ್ತಿದ್ದ ಒಬ್ಬ ಹುಡುಗ ನಾನು. ಅಂದಿನ ಸ್ಥಿತಿ, ಇಂದು ಬೆಳೆದಿರುವ ರೀತಿಗಿಂತ ದೊಡ್ಡದಾಗಿದೆ. ಇದಕ್ಕೆ ಕಾರಣ ನೀವು’ ಎಂದು ಸುದೀಪ್ ಧನ್ಯವಾದ ಹೇಳಿದ್ದಾರೆ. ಅದೇ ರೀತಿ ವೃತ್ತಿ ಜೀವನದಲ್ಲಿ ಯಾರ ಪಾತ್ರ ಯಾವ ರೀತಿ ಇದೆ ಎಂದು ವಿವರಿಸಿದ್ದಾರೆ ಸುದೀಪ್.
- ಅಭಿಮಾನಿಗಳು: ನನ್ನ ಶಕ್ತಿ, ನೀವೇ ನನ್ನ ಪ್ರೇರಣೆ. ನಾನು ಪ್ರತಿದಿನ ಕೆಲಸಕ್ಕೆ ಬರಲು ನೀವೇ ಕಾರಣ.
- ನಿರ್ದೇಶಕರು ಮತ್ತು ಬರಹಗಾರರು: ನಿಮ್ಮ ಕಥೆಗಳಿಗೆ ನಾನು ಸರಿ ಹೊಂದುತ್ತೇನೆ ಎಂದು ನಂಬಿ ಜವಾಬ್ದಾರಿ ನೀಡಿದ್ದಕ್ಕಾಗಿ, ನನ್ನನ್ನು ಹುರಿದುಂಬಿಸಿದ್ದಕ್ಕಾಗಿ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು.
- ನಿರ್ಮಾಪಕರು: ನಿಮ್ಮ ಧೈರ್ಯ ಮತ್ತು ನಂಬಿಕೆ ನನ್ನ ಕನಸುಗಳನ್ನು ನನಸಾಗಿಸುತ್ತದೆ.
- ಸಹ ಕಲಾವಿದರು ಮತ್ತು ತಂತ್ರಜ್ಞರು: ಸಿನಿಮಾ ಎಂಬುದು ಸಂಘಟಿತ ಕೆಲಸ. ಲೈಟ್ ಬಾಯ್ ಇಂದ ಕ್ಯಾಮೆರಾಮನ್ಗಳವರೆಗೆ, ಕಲಾ ತಂಡದಿಂದ ಕಾಸ್ಟ್ಯೂಮ್ ಡಿಸೈನರ್ ವರೆಗೆ, ಸ್ಪಾಟ್ ಬಾಯ್ಸ್ನಿಂದ ಹಿಡಿದು ಎಡಿಟರ್ಗಳವರೆಗೆ, ನಿಮ್ಮ ತೆರೆಯ ಹಿಂದಿನ ಶ್ರಮವೇ ಎಲ್ಲದಕ್ಕೂ ಕಾರಣ.
- ಮಾಧ್ಯಮ: ನೀವು ನನ್ನ ಧ್ವನಿಯನ್ನು ಜನರಿಗೆ ತಲುಪಿಸಿದ್ದೀರಿ. ನನ್ನನ್ನು ಪ್ರಶ್ನಿಸಿದ್ದೇನೆ, ನನ್ನ ಯಶಸ್ಸನ್ನು ಸಂಭ್ರಮಿಸಿದ್ದೇನೆ ಮತ್ತು ನಾನು ಬೆಳೆಯಲು ಸಹಾಯ ಮಾಡಿದ್ದೇನೆ.
- ಕನ್ನಡ ಚಿತ್ರರಂಗ: ನಿಮಗೆ ನನ್ನ ಗುರುತು, ಹೆಮ್ಮೆ. ಚಿತ್ರರಂಗ ನನಗೆ ನೆಲೆ ನೀಡಿದೆ. ನಾನು ಸದಾ ಕನ್ನಡ ಚಿತ್ರವನ್ನು ನನ್ನ ಹೃದಯದಲ್ಲಿ ಹೊತ್ತು ನಡೆಯುತ್ತೇನೆ.
- ನನ್ನ ಕುಟುಂಬ ಮತ್ತು ಸ್ನೇಹಿತರು: ಈ ಎಲ್ಲಾ ಏರಿಳಿತಗಳ ನಡುವೆ ನನ್ನನ್ನು ಸಾಮಾನ್ಯ ಮನುಷ್ಯನನ್ನಾಗಿ ನೀವು ನೋಡಿದ್ದೀರಿ. ನಾನು ಹೇಗಿದ್ದೇನೋ ಹಾಗೆ ಸ್ವೀಕರಿಸಿದ್ದಕ್ಕೆ ಧನ್ಯವಾದ.
‘ಈ 30 ವರ್ಷಗಳು ನನಗೆ ಒಂದು ಪಾಠ ಕಲಿಸಿದ್ದರೆ ಅದು ‘ಮಾನವೀಯತೆ’. ಪ್ರತಿಯೊಂದು ಗೆಲುವೂ ನಮಗೆ ದಕ್ಕಿದ ಪ್ರಸಾದ. ನಾನು ಇನ್ನೂ ಕಠಿಣವಾಗಿ ಶ್ರಮಿಸುತ್ತೇನೆ, ಕಲೆಯನ್ನು ಗೌರವಿಸುತ್ತೇನೆ ಮತ್ತು ಸಿನಿಮಾ ನನಗೆ ಕೊಟ್ಟದ್ದನ್ನು ಮರಳಿ ನೀಡುತ್ತೇನೆ ಎಂದು ಭರವಸೆ ನೀಡುತ್ತೇನೆ. ಕೈಮುಗಿದು, ಕೃತಜ್ಞತಾ ಭಾವದೊಂದಿಗೆ, ನಿಮ್ಮೆಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು’ ಎಂದು ಸುದೀಪ್ ಪತ್ರ ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 3:11 pm, ಶನಿ, 31 ಜನವರಿ 26