ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ) ಚುನಾವಣೆ ಇಂದು (ಜನವರಿ 31) ನಡೆದಿದ್ದು, ಭಾಮಾ ಹರೀಶ್ ವಿರುದ್ಧ ಜಯಮಾಲ ಅವರು ವಿಜೇತರಾಗಿ, ವಾಣಿಜ್ಯ ಮಂಡಳಿಯ ಮುಂದಿನ ಅಧ್ಯಕ್ಷರಾಗುವುದು ಖಾತ್ರಿಯಾಗಿದೆ. ಇಂದು ಬೆಳಿಗ್ಗೆ ಆರಂಭವಾದ ಮತದಾನದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗಿ ಆಗಿದ್ದರು. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವಾರು ನಟ, ನಟಿಯರು, ತಂತ್ರಜ್ಞರು ಆಗಮಿಸಿ ವಿವಿಧ ಸ್ಥಾನಗಳಿಗೆ ಚುನಾವಣೆ ಎದುರಿಸುತ್ತಿದ್ದ ಸ್ಪರ್ಧಿಗಳಿಗೆ ತಮಗೆ ಸೂಕ್ತ ಎನಿಸಿದವರಿಗೆ ಮತ ಚಲಾಯಿಸಿದರು.
ಇಂದೇ ಮತ ಎಣಿಕೆಯೂ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆಂದು ಭಾಮಾ ಹರೀಶ್ ಮತ್ತು ಜಯಮಾಲ ಅವರ ನಡುವೆ ತುರುಸಿನ ಪೈಪೋಟಿ ಇತ್ತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಈ ಬಾರಿ ಚಲಾವಣೆ ಆಗಿದ್ದು, 512 ಮತಗಳನ್ನು ಜಯಮಾಲ ಮಾಡಲು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಮುಂದಿನ ಅವಧಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಜಯಮಾಲ ಅವರು ಅಧಿಕಾರ ವಹಿಸಿಕೊಳ್ಳುವುದು ಬಹತೇಕ ಖಾತ್ರಿಯಾಗಿದೆ. ಜಯಮಾಲ ಅವರು ಎರಡನೇ ಬಾರಿ ಫಿಲಂ ಚೇಂಬರ್ ನ ಅಧ್ಯಕ್ಷೆ ಆಗಲಿದ್ದಾರೆ. 2008ರಲ್ಲಿ ಹಿರಿಯ ನಟಿ ಜಯಮಾಲ ಅವರು ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈಗ ಮತ್ತೊಮ್ಮೆ ಅಧ್ಯಕ್ಷೆ ಆಗಲಿದ್ದಾರೆ.
ಇದನ್ನೂ ಓದಿ:ಜಿಡ್ಡಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಚುನಾವಣೆ ಮುಂದೂಡಿಕೆ
ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ, ಕಜಾಂಚಿ, ಕಾರ್ಯದರ್ಶಿ, ಗೌರವ ಕಾರ್ಯದರ್ಶಿ (ವಿತರಕರ), ಗೌರವ ಕಾರ್ಯದರ್ಶಿ (ಪ್ರದರ್ಶಕರ ವಲಯ) ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದೆ. ಫಿಲಂ ಚೇಂಬರ್ ಪಕ್ಕದಲ್ಲೇ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನ ನಡೆದಿದೆ. ಮತದಾನಕ್ಕೆ ಮುಂಚೆ ನಡೆದ ಸಭೆಯಲ್ಲಿ ಗಲಾಟೆಗಳು ನಡೆದವು. ಮೈಕ್ ಕಿತ್ತು ಪರಸ್ಪರ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದರು. ಭಾರಿ ಕುತೂಹಲವನ್ನು ಮೂಡಿಸಿದ್ದ ಅಧ್ಯಕ್ಷ ಸ್ಥಾನ ಇದೀಗ ಜಯಮಾಲ ಅವರ ಪಾಲಾಗಿದೆ. ಇತರೆ ಸ್ಥಾನಗಳ ಫಲಿತಾಂಶ ಹೊರಬೀಳಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 9:12 pm, ಶನಿ, 31 ಜನವರಿ 26