ದಳಪತಿ ವಿಜಯ್ (ತಲಪತಿ ವಿಜಯ್) ನಟನೆಯ ‘ಜನ ನಾಯಕನ್’ ಸಿನಿಮಾ ರಾಜಕೀಯ ಕಾರಣಗಳಿಂದ ಬಿಡುಗಡೆ ಆಗುತ್ತಲೇ ಇದೆ. ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರಿಮೇಕ್ ಆದ ‘ಜನ ನಾಯಕನ್’ಗೆ ಸಿಬಿಎಫ್ ಸಿಯು ಸೆನ್ಸಾರ್ ಪ್ರಮಾಣ ಪತ್ರ ನಿರಾಕರಿಸಿದೆ. ಇದನ್ನು ಪ್ರಶ್ನಿಸಿ ‘ಜನ ನಾಯಕನ್’ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದರೂ ಅಲ್ಲಿಯೂ ಸಹ ‘ಜನ ನಾಯಕ’ ನಿರ್ಮಾಪಕರಿಗೆ ಸೂಕ್ತವಾಗಿ ನ್ಯಾಯ ದೊರಕಿಲ್ಲ ಬದಲಾಗಿ ನ್ಯಾಯ ವಿತರಣೆ ತಡವಾಗಿ ಸಾಗುತ್ತಿದೆ. ಈಗಾಗಲೇ ರೋಸಿ ಹೋಗಿರುವ ನಿರ್ಮಾಪಕರು ದೂರನ್ನೇ ಹಿಂಪಡೆಯಲು ನಿರ್ಧರಿಸಿದ್ದಾರೆ.
‘ಜನ ನಾಯಕನ್’ ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕ ಕೆವಿಎನ್ ಪ್ರೊಡಕ್ಷನ್ ನ ವೆಂಕಟ್ ಅವರು ನ್ಯಾಯಾಲಯದಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬೇಸತ್ತು ಕೇಸನ್ನೇ ಹಿಂಪಡೆಯಲು ನಿರ್ಧರಿಸಲಾಗಿದೆ. ಇತ್ತೀಚೆಗಷ್ಟೇ ಆದೇಶ ಹೊರಡಿಸಿದೆ, ಪ್ರಕರಣದಲ್ಲಿ ಈ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಬದಿಗೆ ಸರಿಸಿರುವುದಲ್ಲದೆ, ಪ್ರಕರಣವನ್ನು ಮತ್ತೆ ಏಕಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿದೆ. ಜೊತೆಗೆ ಸಿಬಿಎಫ್ ಸಿಯ ವಾದವನ್ನು ಆಲಿಸುವಂತೆ ಸೂಚಿಸಲಾಗಿದೆ. ಹೆಚ್ಚು ತಡವಾಗುವ ಸಾಧ್ಯತೆಯಿದೆ. ಇದರಿಂದ ಸಿನಿಮಾದ ಬಿಡುಗಡೆ ಇನ್ನೂ ಹೆಚ್ಚು ಸಮಯ ಹಿಡಿಯಲಿದೆ.
ಇದನ್ನೂ ಓದಿ:’ಜನ ನಾಯಕ’ ವಿಳಂಬದಿಂದ ‘ಟಾಕ್ಸಿಕ್’,’ಕೇಡಿ’ಗೆ ದೊಡ್ಡ ಹೊಡೆತ?
ಆದರೆ ಬದಲಿಗೆ ಕೇಸು ವಾಪಸ್ ಪಡೆದರೆ ಸಿಬಿಎಫ್ ಸಿ ಯು, ಈ ಮೊದಲು ನಿರ್ಣಯಿಸಿದಂತೆ ರಿವ್ಯೂ ಕಮಿಟಿಗೆ ಸಿನಿಮಾವನ್ನು ಕಳಿಸುತ್ತದೆ. ಅಲ್ಲಿ ಗರಿಷ್ಠ ಹದಿನೈದು ದಿನಗಳಲ್ಲಿ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲೇ. ಸಿಬಿಎಫ್ ಸಿ ಹೇಳುವ ಎಲ್ಲ ಕಟ್ಗಳಿಗೆ ನಿರ್ಮಾಪಕರು ಈ ಮುಂಚೆಯೇ ಒಪ್ಪಿದ ಕಾರಣ ಮತ್ತು ನ್ಯಾಯಾಲಯದಲ್ಲಿ ಪ್ರಕ್ರಿಯೆ ವಿಳಂಬವಾಗುತ್ತಿರುವ ಕಾರಣ ಇದೀಗ ನಿರ್ಮಾಪಕರು ಈ ನಿರ್ಣಯವನ್ನು ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ನಿರ್ಮಾಪಕರು ತಮ್ಮ ದಾವೆಯನ್ನು ಹಿಂಪಡೆಯಲಿದ್ದಾರೆ ಅಥವಾ ಮುಂದಿನ ವಿಚಾರಣೆಯಲ್ಲಿ ತಮಗೆ ತಮ್ಮ ರಿವ್ಯೂ ಕಮಿಟಿಗೆ ಯಾವುದೇ ಆಕ್ಷೇಪವಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಲಿದ್ದಾರೆ.
‘ಜನ ನಾಯಕನ್’ ಸಿನಿಮಾವು ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ರಾಜಕೀಯ ಪಕ್ಷ ಸ್ಥಾಪಿಸಿ, ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ತಯಾರಾದ ವಿಜಯ್ ಅವರು ‘ಜನ ನಾಯಕನ್’ ಸಿನಿಮಾವನ್ನು ತಮ್ಮ ರಾಜಕೀಯ ಅಜೆಂಡ ಪ್ರಚಾರಕ್ಕೆ ಬಳಸುತ್ತಿದ್ದಾರೆ ಎಂಬ ಗುಮಾನಿ ಮೇಲೆ ರಾಜಕೀಯ ಒತ್ತಡಗಳನ್ನು ತಂದು ಸಿನಿಮಾದ ಸೆನ್ಸಾರ್ ಪ್ರಮಾಣ ಪತ್ರವನ್ನು ತಡೆ ಹಿಡಿಯಲಾಗಿದೆ. ಸಿಬಿಎಫ್ಸಿಯ ಈ ನಡೆಯನ್ನು ಕಾಂಗ್ರೆಸ್ ಕಠಿಣ ಶಬ್ದಗಳಲ್ಲಿ ಟೀಕೆ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ