Headlines

Daily Devotional: ಇಂದೇ ಮಾಘ ಹುಣ್ಣಿಮೆ ಇದರ ಮಹತ್ವ ತಿಳಿದುಕೊಳ್ಳಿ

Daily Devotional: ಇಂದೇ ಮಾಘ ಹುಣ್ಣಿಮೆ ಇದರ ಮಹತ್ವ ತಿಳಿದುಕೊಳ್ಳಿ


ಬೆಂಗಳೂರು, ಫೆಬ್ರುವರಿ 01: ಮಾಘ ಮಾಸದ ಹುಣ್ಣಿಮೆ ದಿನವು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಶಸ್ತ್ಯವನ್ನು ಹೊಂದಿದೆ. ಇಂದಿಗೆ ಮಾಘ ಸ್ನಾನವು ಸಮಾಪ್ತಿಯಾಗುತ್ತದೆ. ಮಾಗ ಎಂದರೆ ಕನ್ನಡದಲ್ಲಿ ಮಾಗಿರುವುದು ಅಥವಾ ಪರಿಪೂರ್ಣವಾಗಿರುವುದು ಎಂಬ ಅರ್ಥವಿದೆ.

ಈ ದಿನ ಜಪ, ಪೂಜೆ, ಧ್ಯಾನ ಮತ್ತು ದಾನ ಕಾರ್ಯಗಳಿಗೆ ಹೆಚ್ಚಿನ ಮಹತ್ವವಿದೆ. ಮಾಘ ಹುಣ್ಣಿಮೆಯಂದು ಸಕಲ ದೇವತೆಗಳು ಭೂಮಿಗೆ ಆಗಮಿಸುತ್ತಾರೆ ಎಂಬ ನಂಬಿಕೆ ಇದೆ. ಈ ದಿನದಂದು ಮಾಡುವ ಆಚರಣೆಗಳಿಂದ ನವಗ್ರಹ ದೋಷ, ಶನಿ ದೋಷ, ಅಕಾಲ ಮರಣ ಮತ್ತು ಅಪವಾದಗಳಂತಹ ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.

ವ್ರತಾಚರಣೆಯ ಭಾಗವಾಗಿ ಉಪವಾಸ, ವಿಷ್ಣು, ಲಕ್ಷ್ಮಿ, ಕುಲದೇವರ ಪೂಜೆಗಳನ್ನು ಮಾಡಿದರು. ಕೆಲವು ಸತ್ಯನಾರಾಯಣ ಸ್ವಾಮಿ ಪೂಜೆಯನ್ನೂ ಆಚರಿಸುತ್ತಾರೆ. ನದಿ ಅಥವಾ ಗಂಗಾ ಸ್ನಾನಕ್ಕೆ ವಿಶೇಷ ಪ್ರಾಶಸ್ತ್ಯವಿದ್ದು, ಮನೆಯಲ್ಲಿ ಸ್ನಾನ ಮಾಡುವಾಗಲೂ “ಹರ ಹರ ಗಂಗೆ” ಎಂದು ಮೂರು ಬಾರಿ ಹೇಳಿ ನೀರನ್ನು ಸೇವಿಸಬಹುದು. ಸಂಜೆ ಚಂದ್ರೋದಯದ ಸಮಯದಲ್ಲಿ ಲಕ್ಷ್ಮಿ ಪೂಜೆ ಮಾಡುವುದರಿಂದ ತಾಯಿಯ ಕೃಪೆಗೆ ಪಾತ್ರರಾಗಬಹುದು. ಈ ದಿನ ಮಾಡುವ ದಾನವು ಅಕ್ಷಯ ದಾನವಾಗಿ ಫಲ ನೀಡುತ್ತದೆ ಎಂದು ಗುರೂಜಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *