ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸ ಇತ್ತು ಎಂದ ತೆಲುಗುದೇಶಂ

ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸ ಇತ್ತು ಎಂದ ತೆಲುಗುದೇಶಂ

ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸ ಇತ್ತು ಎಂದ ತೆಲುಗುದೇಶಂ

ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸದ ಅಂಶಗಳಿವೆ ಎಂದು ಟಿಡಿಪಿ ಆರೋಪಿಸಿದೆ. 2022 ಮತ್ತು 2023ರ ಪ್ರಯೋಗಾಲಯ ವರದಿಗಳು ತುಪ್ಪ ಕಲಬೆರಕೆಯಾಗಿದ್ದು, ಪ್ರಾಣಿಜನ್ಯ ಅಂಶಗಳನ್ನು ಹೊಂದಿದೆ ಎಂದು ದೃಢಪಡಿಸಿವೆ ಎಂದು ಆಡಳಿತಾರೂಢ ಪಕ್ಷ ಹೇಳಿದೆ.

‘ತಿರುಪತಿ ಲಡ್ಡು ತಯಾರಿಕೆಗೆ ಪೂರೈಸಿದ್ದ ಕಲಬೆರಕೆ ತುಪ್ಪವನ್ನು ಸಸ್ಯಜನ್ಯ ಜಿಡ್ಡಿನಿಂದ ತಯಾರಿಸಲಾಗಿತ್ತೇ ಹೊರತೂ, ಅದರಲ್ಲಿ ಗೋಮಾಂಸ, ಹಂದಿಯ ಮಾಂಸದ ಅಂಶಗಳು ಇರಲಿಲ್ಲ’ ಎಂದು ಸಿಬಿಐ ಚಾರ್ಜ್‌ಶೀಟನ್ನು ಉಲ್ಲೇಖಿಸಿ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕರು ನೀಡಿದ್ದ ಹೇಳಿಕೆಯನ್ನು ಆಡಳಿತಾರೂಢ ಟಿಡಿಪಿ (ತೆಲುಗುದೇಶಂ) ತಿರಸ್ಕರಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಆಂಧ್ರಪ್ರದೇಶ ಸರ್ಕಾರದ ಸಚಿವ ಪಿ.ಕೇಶವ, ‘ಟಿಟಿಡಿಗೆ (ತಿರುಮಲ ತಿರುಪತಿ ದೇವಸ್ಥಾನ) ಪೂರೈಸುವ ತುಪ್ಪ ಕಲಬೆರಕೆ ಆಗಿದೆ ಎಂದು 2022ರಲ್ಲಿ ಮೈಸೂರಿನ ಸಿಎಫ್‌ಟಿಆರ್‌ಐ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿತ್ತು. ಅದರ ಹೊರತಾಗಿಯೂ ವೈಎಸ್ಸಾರ್ ಸರ್ಕಾರ ಕಲಬೆರಕೆ ತುಪ್ಪ ಖರೀದಿ ಮುಂದುವರೆದಿತ್ತು.

2023ರಲ್ಲಿ ಗುಜರಾತ್‌ನ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಪ್ರಯೋಗಾಲಯದ ವರದಿ, ತುಪ್ಪದಲ್ಲಿ ಪ್ರಾಣಿಜನ್ಯ ಅಂಶಗಳಿವೆ ಎಂದು ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಅದರನ್ನು ಆಧರಿಸಿಯೇ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಲಬೆರಕೆ ತುಪ್ಪದಲ್ಲಿನ ಗೋಮಾಂಸದ ಬಗ್ಗೆ ಪ್ರಸ್ತಾಪಿಸಿದ್ದರು’ ಎಂದರು.

ಇದನ್ನೂ ಓದಿ: 46 ವರ್ಷಗಳ ಹಿಂದೆ ತಿರುಮಲದ ಗರ್ಭಗುಡಿಯಲ್ಲಿ ನಡೆದ ಘಟನೆಗೆ ಇಂದಿಗೂ ಸಿಕ್ಕಿಲ್ಲ ಉತ್ತರ

‘ಹಿಂದಿನ ಸಿಎಂ ಜಗನ್‌ಗೆ ತುಪ್ಪ ಖರೀದಿಗೆ ಕೇವಲ ವಾಣಿಜ್ಯ ವ್ಯವಹಾರವಾಗಿತ್ತೇ ವಿನಃ ವೆಂಕಟೇಶ್ವರನ ಮೇಲಿನ ಭಕ್ತಿಯ ವಿಷಯವಾಗಿರಲಿಲ್ಲ. ಅದರೆ ನಾಯ್ಡು ಅವರು ಜವಾಬ್ದಾರಿಯುತ ವ್ಯಕ್ತಿಯಾಗಿರುವ ಕಾರಣ, ಜನರ ಮುಂದೆ ಸತ್ಯಾಂಶ ಬಹಿರಂಗಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಿರುಪತಿ ಲಡ್ಡು ತಯಾರಿಗೆ 68 ಲಕ್ಷ ಕೆಜಿ ನಕಲಿ ತುಪ್ಪ; 250 ಕೋಟಿ ಗೋಲ್ಮಾಲ್: CBI ತನಿಖೆಯ ಸತ್ಯ

Source link

Leave a Reply

Your email address will not be published. Required fields are marked *