ಭಾರತೀಯ ಕರಾವಳಿ ಭದ್ರತಾ ಪಡೆ ದಿನಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ಭಾರತವು ವಿಶಾಲವಾದ ಕರಾವಳಿ ಪ್ರದೇಶಗಳನ್ನು ಹೊಂದಿರುವ ರಾಷ್ಟ್ರವಾಗಿದೆ, 7,500 ಕಿಲೋಮೀಟರ್ಗಳಷ್ಟು ಹೆಚ್ಚು ಕರಾವಳಿ ಪ್ರದೇಶವನ್ನು ಹೊಂದಿದೆ. ಮೂರು ಕಡೆಗಳಲ್ಲಿ ಸಾಗರದಿಂದ ಸುತ್ತುವರೆದಿರುವ ನಮ್ಮ ಈ ರಾಷ್ಟ್ರಕ್ಕೆ ಕಡಲ ಗಡಿ ಭದ್ರತೆಯು ತುಂಬಾ ಸುಂದರವಾಗಿರುತ್ತದೆ. ಈ ಕಡಲ ಗಡಿಗಳನ್ನು ಸುರಕ್ಷಿತವಾಗಿಡುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲದೆ ಕಡಲ್ಗಳ್ಳತನ, ಕರಾವಳಿ ಪ್ರದೇಶದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಸಮುದ್ರದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಯಾವುದೇ ಭಾರತೀಯ ಕರಾವಳಿ ಭದ್ರತಾ ಪಡೆಯ ಸಿಬ್ಬಂದಿಗಳ ಧೈರ್ಯ, ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸಲು ಪ್ರತಿವರ್ಷ ಫೆಬ್ರವರಿ 1 ರಂದು ಭಾರತೀಯ ಕರಾವಳಿ ಕಾವಲುಪಡೆ ದಿನವನ್ನು ಆಚರಿಸುವುದಿಲ್ಲ.
ಭಾರತೀಯ ಕರಾವಳಿ ಭದ್ರತಾ ಪಡೆ ದಿನದ ಇತಿಹಾಸವೇನು?
ಪ್ರತಿ ವರ್ಷ ಫೆಬ್ರವರಿ 1 ರಂದು ಆಚರಿಸಲಾಗುವ ಭಾರತೀಯ ಕರಾವಳಿ ಕಾವಲು ದಿನವು 1978 ರಲ್ಲಿ ಕರಾವಳಿ ಕಾವಲು ಪಡೆಯ (ICG) ಸ್ಥಾಪನೆಯ ದಿನವನ್ನು ಸ್ಮರಿಸುತ್ತದೆ. ಭಾರತೀಯ ಕೋಸ್ಟ್ ಗಾರ್ಡ್ ಫೆಬ್ರವರಿ 1, 1977 ರಂದು ಅಸ್ತಿತ್ವಕ್ಕೆ ಬಂದಿತು. ಆ ಸಮಯದಲ್ಲಿ ಅದು ಭಾರತೀಯ ಜಲಪ್ರದೇಶ ಮತ್ತು ವಿಶೇಷ ಆರ್ಥಿಕ ವಲಯದಲ್ಲಿ ಕಣ್ಗಾವಲುಗಾಗಿ ಕೇವಲ ಏಳು ಹಡಗುಗಳ ನೌಕಾಪಡೆಯ ಬಲವನ್ನು ಹೊಂದಿತ್ತು. ನಂತರ ಅಧಿಕೃತವಾಗಿ, ಭಾರತೀಯ ಕೋಸ್ಟ್ ಗಾರ್ಡ್ ಅನ್ನು ಆಗಿನ ಪ್ರಧಾನಿ ಶ್ರೀ ಮೊರಾರ್ಜಿ ದೇಸಾಯಿ ಅವರು ಆಗಸ್ಟ್ 19, 1978 ರಂದು ಉದ್ಘಾಟಿಸಿದರು. ಈ ದಿನದ ನೆನಪಿಗಾಗಿ ಪ್ರತಿವರ್ಷ ಫೆಬ್ರವರಿ 1 ರಂದು ಭಾರತೀಯ ಕರಾವಳಿ ಕಾವಲು ಪಡೆ ದಿನವನ್ನು ಆಚರಿಸುತ್ತಾ ಬರುತ್ತಿದೆ.
ಭಾರತೀಯ ಕರಾವಳಿ ಭದ್ರತಾಪಡೆ ದಿನದ ಉದ್ದೇಶವೇನು?
- ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಕರಾವಳಿ ಭದ್ರತಾ ಪಡೆಯ ಸಮರ್ಪಣೆ ಮತ್ತು ಶೌರ್ಯವನ್ನು ಗೌರವಿಸುವುದು.
- ಭಾರತೀಯ ಕರಾವಳಿ ಕಾವಲು ಪಡೆ ದಿನದ ಉದ್ದೇಶ ಭಾರತೀಯ ಕರಾವಳಿ ಮತ್ತು ಕಡಲ ಪ್ರದೇಶಗಳನ್ನು ರಕ್ಷಿಸುತ್ತದೆ.
- ಕಡಲ ಭದ್ರತೆಯನ್ನು ಉತ್ತೇಜಿಸುವುದು.
- ಕರಾವಳಿ ರಕ್ಷಣಾ ಪಡೆ ಸಿಬ್ಬಂದಿಗಳ ತ್ಯಾಗ, ಕೊಡುಗೆಗಳನ್ನು ಗೌರವಿಸುವುದು.
ಇದನ್ನೂ ಓದಿ: ಜನವರಿ 30 ರಂದು ಹುತಾತ್ಮರ ದಿನವನ್ನು ಆಚರಿಸುವುದೇಕೆ? ಇಲ್ಲಿದೆ ಮಾಹಿತಿ
ಭಾರತೀಯ ಕರಾವಳಿ ಕಾವಲು ಪಡೆಯ ದಿನದ ಮಹತ್ವವೇನು?
ಐಸಿಜಿಯ ಪಾತ್ರವನ್ನು ಗುರುತಿಸುವುದು: ಕಡಲ ಸುರಕ್ಷತೆ, ಭದ್ರತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಭಾರತೀಯ ಕರಾವಳಿ ಪಡೆಯ ಪ್ರಮುಖ ಪಾತ್ರವನ್ನು ಗುರುತಿಸಲು ಮತ್ತು ಪ್ರಶಂಸಿಸಲು ಈ ದಿನವು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಐಸಿಜಿ ಸಿಬ್ಬಂದಿಯನ್ನು ಗೌರವಿಸುವುದು: ಭಾರತದ ಕಡಲ ಗಡಿಗಳನ್ನು ಅವಿಶ್ರಾಂತವಾಗಿ ರಕ್ಷಿಸುವ ಭಾರತೀಯ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳ ಸಮರ್ಪಣೆ ಮತ್ತು ತ್ಯಾಗವನ್ನು ಗೌರವಿಸಲು ಈ ದಿನ ಒಂದು ದಿನವಾಗಿದೆ.
ಸಾರ್ವಜನಿಕ ಜಾಗೃತಿ ಮೂಡಿಸುವುದು: ಐಸಿಜಿಯ ಕೊಡುಗೆ ಪಾತ್ರಗಳು, ಜವಾಬ್ದಾರಿಗಳು ಮತ್ತು ಸಾಧನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಭವಿಷ್ಯದ ಪೀಳಿಗೆಗೆ ಸ್ಫೂರ್ತಿ: ಈ ದಿನವು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ಐಸಿಜಿಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಮತ್ತು ದೇಶದ ಕಡಲ ಭದ್ರತೆಗೆ ಯುವಜನರನ್ನು ಪ್ರೋತ್ಸಾಹಿಸುತ್ತದೆ.
ಭಾರತೀಯ ಕರಾವಳಿ ಕಾವಲು ಪಡೆಗಳ ಕಾರ್ಯವೇನು?
- ಕಡಲ ಗಡಿಗಳನ್ನು ರಕ್ಷಿಸುವುದು.
- ಕಳ್ಳಸಾಗಣೆ ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವುದು.
- ವಿಪತ್ತು ನಿರ್ವಹಣೆ ಮತ್ತು ಪರಿಹಾರ ಕಾರ್ಯಚರಣೆ
- ಮಾಲಿನ್ಯ ನಿಯಂತ್ರಣ ಮತ್ತು ಸಮುದ್ರದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಗೆ, ಭಾರತೀಯ ಕರಾವಳಿ ಕಾವಲು ಪಡೆ ಭಾರತೀಯ ಕರಾವಳಿಯನ್ನು ಅಕ್ರಮ ಚಟುವಟಿಕೆಗಳಿಂದ ರಕ್ಷಿಸುವ ಕಾರ್ಯವನ್ನೂ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ