400 ಕೋಟಿ ದರೋಡೆ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್; 35 ಕೋಟಿ ತೋರಿಸಲು ಮುಂದಾಯ್ತಾ SIT?

400 ಕೋಟಿ ದರೋಡೆ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್; 35 ಕೋಟಿ ತೋರಿಸಲು ಮುಂದಾಯ್ತಾ SIT?

400 ಕೋಟಿ ದರೋಡೆ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್; 35 ಕೋಟಿ ತೋರಿಸಲು ಮುಂದಾಯ್ತಾ SIT?

400 ಕೋಟಿ ರೂಪಾಯಿ ದರೋಡೆ ಪ್ರಕರಣವು ರೋಚಕ ತಿರುವು ಪಡೆದುಕೊಂಡಿದೆ. ದೂರುದಾರ ಸಂದೀಪ್ ಪಾಟೀಲ್, ತನಿಖೆ ನಡೆಸುತ್ತಿರುವ ಎಸ್‌ಐಟಿ ವಿರುದ್ಧವೇ ಪ್ರಕರಣವನ್ನು ಮುಚ್ಚಿಹಾಕುವ ಆರೋಪ ಮಾಡಿದ್ದಾರೆ. ಈ ನಡುವೆ, ಹಣದ ಮಾಲೀಕ ಎನ್ನಲಾದ ಬಿಲ್ಡರ್ ಕಿಶೋರ್ ಶೇಠ್ ಪೊಲೀಸರಿಗೆ ಶರಣಾಗಿದ್ದಾರೆ.

ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂಪಾಯಿ ದರೋಡೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ದೂರುದಾರ ಸಂದೀಪ್ ಪಾಟೀಲ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ವಿರುದ್ಧವೇ ಗಂಭೀರ ಆರೋಪವನ್ನು ಮಾಡಿದ್ದಾರೆ.

ಸಂದೀಪ್ ಪಾಟೀಲ್ ದೂರಿನ ಮೇರೆಗೆ ಮಹಾರಾಷ್ಟ್ರ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಇದೀಗ ಎಸ್ಐಟಿ 400 ಕೋಟಿ ದರೋಡೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯುತ್ನಿಸುತ್ತಿದೆಯಾ ಎಂಬ ಅನುಮಾನವನ್ನು ಸಂದೀಪ್ ಪಾಟೀಲ್ ಅವರ ಪೋಸ್ಟ್ ಮೂಡಿಸುತ್ತಿದೆ.

ಎಸ್‌ಐಟಿ ಪೊಲೀಸರು 400 ಕೋಟಿ ಬದಲಾಗಿ 35 ಕೋಟಿ ದರೋಡೆ ಎಂದು ತೋರಿಸಲು ಮುಂದಾಗಿದ್ದಾರೆ ಎಂದು ಸಂದೀಪ್ ಪಾಟೀಲ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಚೋರ್ಲಾ ಘಾಟ್‌ನಲ್ಲಿ ಮಾಯವಾದ ಎರಡು ಟ್ರಕ್‌ಗಳು ಎಲ್ಲಿವೆ ಎಂಬುದರ ಇದುವರೆಗೂ ತಿಳಿದು ಬಂದಿಲ್ಲ.

ಈ 400 ಕೋಟಿ ಹಣದ ಮಾಲೀಕ ಎನ್ನಲಾಗುತ್ತಿರುವ ಬಿಲ್ಡರ್ ಕಿಶೋರ್ (ಸಾವಳಾ) ಶೇಠ್ ಶನಿವಾರ ಸಂಜೆ ಎಸ್‌ಐಟಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಮಹಾರಾಷ್ಟ್ರದ ನಾಸಿಕ ತಾಲೂಕಿನ ಘೋಟಿ ಪೊಲೀಸ್ ಠಾಣೆಗೆ ಬಂದ ಕಿಶೋರ್‌ನನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ದೇಶದ ಅತಿದೊಡ್ಡ ದರೋಡೆ: ₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವಿಯಲ್ಲಿ ನಾಪತ್ತೆ!

ಸದ್ಯ ಕಿಶೋರ್ ಸೇಠ್ ಸಾವಳಾ ಬಂಧನ ಹಿನ್ನೆಲೆ ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆಗಳಿವೆ. ಶನಿವಾರ ಸಂಜೆಯಿಂದಲೇ ಕಿಶೋರ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. 400 ಕೋಟಿ ದರೋಡೆ ಪ್ರಕರಣ ಮೂರು ರಾಜ್ಯಗಳಿಗೆ ಸಂಬಂಧಿಸಿದ್ದು, ದೇಶದ ಅತಿದೊಡ್ಡ ದರೋಡೆ ಪ್ರಕರಣ ಎಂದು ಕರೆಯಲಾಗುತ್ತಿದೆ.

ಇದನ್ನೂ ಓದಿ: ₹400 ಕೋಟಿ ದರೋಡೆಗೆ ಚೋರ್ಲಾ ಘಾಟ್ ಆಯ್ಕೆ ಮಾಡಿಕೊಂಡಿದ್ಯಾಕೆ? 15-20 ಕಿಮೀ ನಡುವೆಯೇ ದಾಳಿ?

Source link

Leave a Reply

Your email address will not be published. Required fields are marked *