ಹೋಟೆಲ್‌ನಂತೆ ಗರಿಗರಿಯಾದ ತೂತು ಉದ್ದಿನವಡೆ ಮಾಡಲು ಹಲವರು ಪ್ರಯತ್ನಿಸಿ ವಿಫಲರಾಗಿರುತ್ತಾರೆ. ಉದ್ದಿನಬೇಳೆ ಹಿಟ್ಟಿಗೆ ನೆನೆಸಿದ ಒಂದು ವಸ್ತು ಸೇರಿಸುವುದರಿಂದ ಮನೆಯಲ್ಲೇ ಸುಲಭವಾಗಿ ಹೋಟೆಲ್ ಶೈಲಿಯ ಕ್ರಿಸ್ಪಿ ವಡೆಯನ್ನು ತಯಾರಿಸಬಹುದು.

ಬೆಳಗ್ಗೆಯ ತಿಂಡಿ ತಿನ್ನಲು ಹೋಟೆಲ್‌ಗೆ ಹೋದ್ರೆ ಗರಿಗರಿಯಾದ ಉದ್ದಿನ ವಡೆಗಳು ಕಾಣಿಸುತ್ತವೆ. ಇಡ್ಲಿ ಜೊತೆ ಉದ್ದಿನ ವಡೆ ಬೆಸ್ಟ್ ಕಾಂಬಿನೇಷನ್ ಆಗಿದ್ದು, ಇದು ಕೇವಲ ಭಾರತದ ದಕ್ಷಿಣ ಭಾಗಕ್ಕೆ ಸೀಮಿತವಾಗದೇ ಇಡೀ ಪ್ರಪಂಚದಾದ್ಯಂತ ತನ್ನದೇ ಆದ ಗತ್ತನ್ನು ಹೊಂದಿರುವ ತಿಂಡಿಯಾಗಿದೆ.

ಹೋಟೆಲ್‌ಗಳ ರೀತಿಯಲ್ಲಿ ಉದ್ದಿನ ವಡೆ ಮಾಡಬೇಕೆಂದು ಸಹಜವಾಗಿಯೇ ಗೃಹಿಣಿಯರು ಟ್ರೈ ಮಾಡಿರುತ್ತಾರೆ. ಆದ್ರೆ ಹೋಟೆಲ್‌ನಂತೆ ಆಗದೇ ಮನೆಯ ಉದ್ದಿನವಡೆ ಬೋಂಡಾ ಆಗಿ ಬದಲಾಗಿರುತ್ತದೆ. ವೃತ್ತಾಕಾರವಾಗಿ ಸೆಂಟ್ರಲ್ ಹೋಲ್ ಇರುವಂತೆ ಉದ್ದಿನ ವಡೆ ಮಾಡಲು ಒಂದು ವಸ್ತುವನ್ನು ಸ್ವೀಕರಿಸಿಕೊಳ್ಳಬೇಕು. ಈ ವಸ್ತು ನಿಮ್ಮ ಉದ್ದಿನವಡೆಯನ್ನು ಸಖತ್ ಕ್ರಿಸ್ಪಿಯನ್ನಾಗಿ ಮಾಡುತ್ತದೆ.

ತೂತು ಉದ್ದಿನವಡೆ ಮಾಡಲು ಸಾಮಾನ್ಯವಾಗಿ ಉದ್ದಿನಬೇಳೆಯನ್ನು ನಾಲ್ಕರಿಂದ ಐದು ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಿ. ಇನ್ನುಳಿದಂತೆ ಎಲ್ಲಾ ವಿಧಾನಗಳನ್ನು ಬಳಸಿಕೊಂಡು ಉದ್ದಿನವಡೆ ಹಿಟ್ಟನ್ನು ಸಿದ್ಧ ಮಾಡಿಕೊಳ್ಳಬೇಕು. ಉದ್ದಿನವಡೆಯ ಹಿಟ್ಟನ್ನು ಬಿಸಿಯಾದ ಎಣ್ಣೆಗೆ ಹಾಕುವ ಸುಮಾರು ಒಂದು ಗಂಟೆ ಮುಂಚೆಯೇ ಅವಲಕ್ಕಿಯನ್ನು ಸೇರಿಸಿಕೊಳ್ಳಬೇಕು.

ನಿಮಗೆ ಸಿಗುವ ಯಾವುದೇ ಅವಲಕ್ಕಿಯನ್ನು ಎರಡು ಬಾರಿ ನೀರಿನಲ್ಲಿ ತೊಳೆದುಕೊಂಡು, ಸಿದ್ಧ ಮಾಡಿಕೊಂಡಿರುವ ಉದ್ದಿನವಡೆ ಹಿಟ್ಟಿಗೆ ಸೇರಿಸಿಕೊಳ್ಳಬೇಕು. ನಂತರ ಮುಚ್ಚಳ ಮುಚ್ಚಿ ಸುಮಾರು ಒಂದು ಗಂಟೆ ಎತ್ತಿಡಿ. ಎಣ್ಣೆಯಲ್ಲಿ ವಡೆ ಹಾಕುವ ಮುನ್ನ ಹಿಟ್ಟನ್ನು ಚೆನ್ನಾಗಿ ಕಲಿಸಿಕೊಳ್ಳಿ.

ತದನಂತರ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಅಂಗೈಯಲ್ಲಿಟ್ಟುಕೊಂಡು ಮಧ್ಯೆದಲ್ಲಿ ಸಣ್ಣದಾದ ತೂತು ಮಾಡಿ ಎಣ್ಣೆಯಲ್ಲಿ ಹಾಕಿಕೊಳ್ಳಿ. ವಡೆ ಹಾಕುತ್ತಿದ್ದಂತೆ ಒಲೆಯನ್ನು ಹೈಫ್ಲೇಮ್‌ನಲ್ಲಿಟ್ಟು ಎರಡು ಕಡೆ ಸರಿಯಾಗಿ ಬೇಯಿಸಿಕೊಂಡ್ರೆ ರುಚಿಯಾದ ಉದ್ದಿನವಡೆ ಸವಿಯಲು ಸಿದ್ಧವಾಗುತ್ತದೆ.

Source link
ಏನೇ ಮಾಡಿದ್ರೂ ಬೋಂಡಾ ಆಗ್ತಿದೆಯಾ ಉದ್ದಿನ ವಡೆ? ಎಣ್ಣೆಗೆ ಹಾಕೋ ಮುನ್ನ ಒಂದು ವಸ್ತು ಸೇರಿಸಿ