Headlines

Bengaluru: ಮಾಗಡಿ ರಸ್ತೆಯಲ್ಲಿರುವ ಟ್ರಸ್ಟ್‌ಗೆ ಸೇರಿದ 172 ಎಕರೆ ಸರ್ಕಾರದ ವಶಕ್ಕೆ | 172 Acres On Magadi Road Taken Over By The State Government Mrq

Bengaluru: ಮಾಗಡಿ ರಸ್ತೆಯಲ್ಲಿರುವ ಟ್ರಸ್ಟ್‌ಗೆ ಸೇರಿದ 172 ಎಕರೆ ಸರ್ಕಾರದ ವಶಕ್ಕೆ | 172 Acres On Magadi Road Taken Over By The State Government Mrq



Bengaluru: ಮಾಗಡಿ ರಸ್ತೆಯಲ್ಲಿರುವ ಟ್ರಸ್ಟ್‌ಗೆ ಸೇರಿದ 172 ಎಕರೆ ಸರ್ಕಾರದ ವಶಕ್ಕೆ | 172 Acres On Magadi Road Taken Over By The State Government Mrq

ಮಾಗಡಿ ರಸ್ತೆಯಲ್ಲಿರುವ ಜಮ್ನಾಲಾಲ್ ಬಜಾಜ್ ಟ್ರಸ್ಟ್‌ಗೆ ಸೇರಿದ 172 ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುವ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.  15ನೇ ವಿತ್ತೀಯ ಆಯೋಗದಿಂದ ಬರಬೇಕಿದ್ದ 2304 ಕೋಟಿ ರೂಪಾಯಿಗಳ ಕೇಂದ್ರ ಅನುದಾನವನ್ನು ಕಳೆದುಕೊಂಡಿದೆ.

ಬೆಂಗಳೂರು: ಎಪಿಎಂಸಿಯ ಮೆಗಾ ಮಾರುಕಟ್ಟೆ ಸ್ಥಾಪಿಸಲು ಮಾಗಡಿ ರಸ್ತೆಯಲ್ಲಿರುವ ಜಮ್ನಾಲಾಲ್ ಬಜಾಜ್ ಟ್ರಸ್ಟ್‌ಗೆ ಸೇರಿದ 172 ಎಕರೆ ಜಮೀನು ಭೂಸ್ವಾಧೀನ ಕ್ರಮಬದ್ಧವಾಗಿದೆ ಎಂಬ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ಎತ್ತಿ ಹಿಡಿದಿದೆ.

ಶ್ರೀಗಂಧ ಕಾವಲ್ ಗ್ರಾಮದಲ್ಲಿ ಮೆಗಾ ಮಾರ್ಕೆಟ್ ಯೋಜನೆ ಜಾರಿಗೊಳಿಸಲು 1994ರಲ್ಲಿ ಜಿಲ್ಲಾಡಳಿತದಿಂದ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಮತ್ತೊಂದೆಡೆ ಈ ಜಾಗ ತಮಗೆ ಸೇರಿದ್ದು ಎಂದು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಜಮ್ನಾಲಾಲ್ ಬಜಾಜ್ ಟ್ರಸ್ಟ್ ಹಕ್ಕು ಮಂಡಿಸಿತ್ತು. ಅಲ್ಲದೇ, ಟ್ರಸ್ಟ್‌ಗೆ ಸೇರಿದ ಜಮೀನಿನ ಭೂ ಸ್ವಾಧೀನ ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್ ಮೊರೆ ಹೋಗಿತ್ತು.

ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ, ಭೂಸ್ವಾಧೀನ ಪ್ರಕ್ರಿಯೆ ಸರಿಯಾಗಿದೆ ಎಂದು ತೀರ್ಪು ನೀಡಿತ್ತು. ಈ ಆದೇಶ ಪ್ರಶ್ನಿಸಿ ಟ್ರಸ್ಟ್‌ನಿಂದ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

ಬೆಂಗಳೂರಿಗೆ ತಪ್ಪಿದ 2304 ಕೋಟಿ ರೂಪಾಯಿ ಅನುದಾನ

ಬೆಂಗಳೂರಿನ ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸಮಯಕ್ಕೆ ಸರಿಯಾಗಿ ಪಾಲಿಕೆ ಚುನಾವಣೆ ನಡೆಯದ ಕಾರಣ,15ನೇ ವಿತ್ತೀಯ ಆಯೋಗದ ಶಿಫಾರಸಿನಂತೆ ಬರಬೇಕಿದ್ದ 2304 ಕೋಟಿ ರು. ಕೇಂದ್ರೀಯ ಅನುದಾನ ತಪ್ಪಿದೆ. ಬೆಂಗಳೂರು ಸೇರಿದಂತೆ ಮುಂಬೈ ಪಾಲಿಕೆಗೂ ಸಹ ಇದೇ ರೀತಿ ಅನುದಾನ ಕೈತಪ್ಪಿದೆ. 2021ರಲ್ಲಿ ರಚನೆಯಾದ 15ನೇ ಹಣಕಾಸು ಆಯೋಗದ ಅವಧಿಯು ಶನಿವಾರ (ಜ.31) ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ಸ್ಥಳೀಯ ನಗರ ಪಾಲಿಕೆಗಳ ಚುನಾವಣೆ ನಡೆದರೆ, ಅರ್ಥಾತ್‌ ಚುನಾಯಿತ ಪಾಲಿಕೆಗಳು ಇದ್ದರೆ, ಸದಸ್ಯರು ಅಭಿವೃದ್ಧಿ ಕೆಲಸಗಳಿಗೆ ಬಳಸಲಿ ಎಂದು ಕೇಂದ್ರ ಸರ್ಕಾರವು. ಆಯೋಗದ ಶಿಫಾರಸಿನಂತೆ ಅನುದಾನ ಮೀಸಲಿರಿಸುತ್ತದೆ. ಆದರೆ ಬೆಂಗಳೂರು ಸೇರಿದಂತೆ ಹಲವು ರಾಜ್ಯಗಳ ನಗರ ಪಾಲಿಕೆ ಚುನಾವಣೆಗಳು ನಿರಂತರವಾಗಿ ಮುಂದೂಡಲ್ಪಟ್ಟ ಕಾರಣ ಈ ಅನುದಾನವು ಅವುಗಳಿಗೆಲ್ಲ ಕೈತಪ್ಪಿದೆ.

ಇದನ್ನೂ ಓದಿ: ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!

ಹಂಚಿಕೆ ಆಗದ ಅನುದಾನ

ಬೆಂಗಳೂರು ಮಹಾನಗರ ಪಾಲಿಕೆಗೆ (ಈಗ ಜಿಬಿಎ) 2020ರಿಂದಲೇ ಚುನಾವಣೆ ನಡೆದಿಲ್ಲ. ಹೀಗಾಗಿ ಬೆಂಗಳೂರಿಗೆ 2304 ಕೋಟಿ ರು. ಅನುದಾನ ಹಂಚಿಕೆ ಆಗಿಲ್ಲ. ಮುಂಬೈ/ನವೀ ಮುಂಬೈ ಸೇರಿ 4031 ಕೋಟಿ ರು. ಅನುದಾನವು ಸಿಗದಂತಾಗಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆಗೆ ಕಳೆದ 2 ವರ್ಷದಿಂದ ಚುನಾವಣೆ ನಡೆದಿರಲಿಲ್ಲ. ಇತ್ತೀಚೆಗೆ ಚುನಾವಣೆ ನಡೆದಿತ್ತು.

ಇದನ್ನೂ ಓದಿ: Bengaluru: ಚಲ್ಲಘಟ್ಟ ಮೆಟ್ರೋ ಸ್ಟೇಷನ್‌ ಬಳಿಕ ಸ್ಕೈಡೆಕ್‌ಗೆ 45 ಎಕರೆ ಜಾಗ ಫಿಕ್ಸ್ ಮಾಡಿದ ಬಿಡಿಎ!



Source link

Leave a Reply

Your email address will not be published. Required fields are marked *