Headlines

Budget 2026: ಡಿಫೆನ್ಸ್​ನಿಂದ ಹಿಡಿದು ಚಿಪ್​ವರೆಗೆ ಭಾರತವನ್ನು ತಂತ್ರಜ್ಞಾನ ದೈತ್ಯವಾಗಿಸಬಲ್ಲ ಬಜೆಟ್

Budget 2026: ಡಿಫೆನ್ಸ್​ನಿಂದ ಹಿಡಿದು ಚಿಪ್​ವರೆಗೆ ಭಾರತವನ್ನು ತಂತ್ರಜ್ಞಾನ ದೈತ್ಯವಾಗಿಸಬಲ್ಲ ಬಜೆಟ್


ನವದೆಹಲಿ, ಫೆಬ್ರುವರಿ 1: ಜಾಗತಿಕ ಅನಿಶ್ಚಿತ ವಾತಾವರಣದ ನಡುವೆ ಬೆಳ್ಳಿ ಚುಕ್ಕಿಯಂತೆ ಮಿನುಗುತ್ತಿರುವ ಭಾರತದ ಆರ್ಥಿಕ ಶಕ್ತಿಗೆ ಇನ್ನಷ್ಟು ಮೆರಗು ಕೊಡಲು ನಿರ್ಮಲಾ ಸೀತಾರಾಮನ್ ಬಜೆಟ್ (ಯೂನಿಯನ್ ಬಜೆಟ್) ಮಂಡಿಸಿದ್ದಾರೆ. ಭಾರತವನ್ನು ಟೆಕ್ ಸೂಪರ್ ಪವರ್ ಆಗಿಸುವತ್ತ ಪೂರಕವಾದ ಬಜೆಟ್ ಅನ್ನು ಮಂಡಿಸುವ ಪ್ರಯತ್ನ ಮಾಡಿದೆ ಹಣಕಾಸು ಸಚಿವರು. ಸೆಮಿಕಂಡಕ್ಟರ್, ರೇರ್ ಅರ್ಥ್, ಡಿಫೆನ್ಸ್ ಇತ್ಯಾದಿ ಆಯಕಟ್ಟಿನ ಕ್ಷೇತ್ರಗಳಲ್ಲಿ ವಿದೇಶೀ ಅವಲಂಬನೆ ತಪ್ಪಿಸಿ ಪೂರ್ಣ ಸ್ವಾವಲಂಬನೆಯ ಭಾರತವನ್ನು ನಿರ್ಮಿಸುವ ಗುರಿಯನ್ನು ಇಡಲಾಗಿದೆ.

ಡಿಫೆನ್ಸ್ ಸೆಕ್ಟರ್‌ಗೆ ಪುಷ್ಟಿ

ಎಲ್ಲವನ್ನೂ ಮ್ಯಾನುಫ್ಯಾಕ್ಚರಿಂಗ್ ಮಿಷನ್ ರೂಪಿಸಲಾಗಿದೆ. ಹೈಸ್ಪೀಡ್ ರೈಲುಗಳು, ಡ್ರೋನ್, ಅತ್ಯಾಧುನಿಕ ಮ್ಯೂನಿಶನ್ಗಳು ಎಲ್ಲಾ ದೇಶೀಯವಾಗಿ ತಯಾರಿಸಲ್ಪಡುತ್ತವೆ. ಇವುಗಳಿಗೆ ನೀಡಲಾದ ಅನುದಾನದಲ್ಲಿ ಶೇ 20ರಷ್ಟು ಮೊತ್ತವಾಗಿದೆ.

ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ: ಕರಾವಳಿ ಕೃಷಿಕರಿಗೆ ಬಂಪರ್ ಕೊಡುಗೆ

ಎಐ ಮತ್ತು ಡೀಪ್ಟೆಕ್ ಕ್ರಾಂತಿ

ಡಿಫೆನ್ಸ್ ಟೆಕ್ ಮತ್ತು ಡೀಪ್ ಟೆಕ್ ಸ್ಟಾರ್ಟಪ್‌ಗಳಿಗೆ 10,000 ಕೋಟಿ ರೂ ಫಂಡ್ ಆಫ್ ಫಂಡ್ಸ್ ಪ್ರಕಟಿಸಲಾಗಿದೆ. ಸ್ವಂತವಾಗಿ ಎಐ ಅಭಿವೃದ್ಧಿ ಮತ್ತು ಡಾಟಾ ಸೆಕ್ಯೂರಿಟಿಗೆ ಒತ್ತು ನೀಡಲಾಗಿದೆ.

ಕ್ರಿಟಿಕಲ್ ಮಿನರಲ್ಗಳ ಲಭ್ಯತೆ

ದೇಶೀಯವಾಗಿ ರೇರ್ ಅರ್ಥ್ ಮೈನಿಂಗ್ ಮತ್ತು ಪ್ರೋಸಸಿಂಗ್ಗೆ ಒತ್ತು ಕೊಡಲಾಗಿದೆ. ರೇರ್ ಅರ್ಥ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಲಿಥಿಯಂ, ಕೋಬಾಲ್ಟ್ ಭಾವಚಿತ್ರಗಳಿಗೆ ಆಮದು ಸುಂಕ ಕಡಿತಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ ಚೀನಾ ಮೇಲಿನ ಅವಲಂಬನೆ ತಪ್ಪಿಸುವ ಪ್ರಯತ್ನವಾಗಿದೆ.

ಎಂಎಸ್‌ಎಂಇಗಳಿಗೆ ಪುಷ್ಟಿ

ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗೆ ಕ್ರೆಡಿಟ್ ಗ್ಯಾರಂಟಿ ಮಿತಿಯನ್ನು 10 ಕೋಟಿ ರೂಗೆ ಏರಿಸಲಾಗಿದೆ. ಹಿಂದಿನ ಬಜೆಟ್‌ನಲ್ಲಿ ನೀಡಲಾಗಿದ್ದಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ನಗರ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್ ಅನ್ನು ಸ್ಥಾಪಿಸಲಾಗಿದೆ. ಪಾದರಕ್ಷೆ ಮತ್ತು ಲೆದರ್ ಸೆಕ್ಟರ್‌ನಲ್ಲಿ 22 ಲಕ್ಷ ಉದ್ಯೋಗಗಳ ಸೃಷ್ಟಿಯಾಗಲು ಸ್ಕೀಮ್ ರಚಿಸಲಾಗಿದೆ.

ಇದನ್ನೂ ಓದಿ: ಬಜೆಟ್ 2026: ಕೇಂದ್ರ ಬಜೆಟ್ 2026: ಯಾವುದು ಅಗ್ಗ, ಯಾವುದು ದುಬಾರಿ?

ವಿತ್ತೀಯ ಕೊರತೆ ಶೇ. 4.3ಕ್ಕೆ ಸೀಮಿತ

ಭಾರತದ ವಿತ್ತೀಯ ಕೊರತೆಯ ಗುರಿಯನ್ನು ಶೇ. 4.4 ರಿಂದ ಶೇ. 4.3ಕ್ಕೆ ಇಳಿಸಲಾಗಿದೆ. ಆರ್ಥಿಕ ಬೆಳವಣಿಗೆಯ ವೇಗ ಶೇ. 7.4 ಎಂದು ಅಂದಾಜಿಸಲಾಗಿದೆ.

ಜೊತೆಗೆ, ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0, ಡೀಸಸ್ ಮ್ಯಾನುಫ್ಯಾಕ್ಚರಿಂಗ್, ಬಯೋಫಾರ್ಮಾ, 20 ಹೊಸ ರಾಷ್ಟ್ರೀಯ ಜಲಮಾರ್ಗ ಇತ್ಯಾದಿ ಅನೇಕ ಘೋಷಣೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *