Headlines

ಅಚ್ಚರಿಯ ಬೆಳವಣಿಗೆ: ZUDIO ಶಾಪಿಂಗ್‌ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು!

ಅಚ್ಚರಿಯ ಬೆಳವಣಿಗೆ: ZUDIO ಶಾಪಿಂಗ್‌ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು!

ಅಚ್ಚರಿಯ ಬೆಳವಣಿಗೆ: ZUDIO ಶಾಪಿಂಗ್‌ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು!
ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳನ್ನು ನೀಡುತ್ತಿದ್ದ ಝುಡಿಯೋ, ಇದೀಗ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಒಂದೇ ರೀತಿಯ ಡಿಸೈನ್‌ಗಳಿಂದಾಗಿ ಗ್ರಾಹಕರು ಮುಜುಗರ ಅನುಭವಿಸುತ್ತಿದ್ದು, ಈ ಕಾರಣದಿಂದ ಝುಡಿಯೋದಿಂದ ದೂರ ಸರಿಯುತ್ತಿದ್ದಾರೆ.
ಮಧ್ಯಮ ವರ್ಗದ ಜನತೆಗೆ ಗುಣಮಟ್ಟದ ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡುವ ಉದ್ದೇಶದಿಂದ ಆರಂಭವಾದ ಮಳಿಗೆಯೇ ಝುಡಿಯೋ. ಇಲ್ಲಿ ಶಾಪಿಂಗ್ ಮಾಡೋದು ಸಹ ಒಂದು ಟ್ರೆಂಡ್ ಆಗಿ ಬದಲಾಗಿದೆ. ಆದ್ರೆ ಇತ್ತೀಚೆಗೆ ಜನರು ಝುಡಿಯೋದತ್ತ ಮುಖ ಮಾಡುತ್ತಿಲ್ಲ.

ಶಾಪಿಂಗ್ ಅಂದ್ರೆ ವಿಭಿನ್ನ ಮತ್ತು ಹೊಸ ಡಿಸೈನ್ ಬಟ್ಟೆ ಖರೀದಿಸಬೇಕು ಎಂದು ಹೋಗುತ್ತಾರೆ. ಹಾಗೆಯೇ ತಾನು ಧರಿಸುವ ಬಟ್ಟೆ ಬೇರೆಯವರಿಗಿಂತ ಭಿನ್ನವಾಗಿರಬೇಕು ಎಂದು ಎಲ್ಲರೂ ಯೋಚಿಸುತ್ತಾರೆ. ತನ್ನ ಡ್ರೆಸ್‌ನಿಂದ ಎಲ್ಲರೂ ತನ್ನನ್ನು ಗುರುತಿಸಬೇಕು ಎಂದು ವಿಶೇಷವಾಗಿ ಮಹಿಳೆಯರು ಬಯಸುತ್ತಾರೆ.

ಆದ್ರೆ ಇಂದು ಝುಡಿಯೋನಲ್ಲಿ ಸಿಗುವ ಬಟ್ಟೆಗಳು ಬಹುತೇಕರ ಬಳಿಯಲ್ಲಿರುತ್ತವೆ. ಯಾರೇ ಝುಡಿಯೋನ ಮೆಟಿರಿಯಲ್ ಧರಿಸಿದ್ರೆ ಇಂದು ಜನರು ಗುರುತಿಸುತ್ತಾರೆ. ಓ ಇದು ಝುಡಿಯೋ ಅಲ್ಲವಾ? ನನ್ನ ಬಳಿಯಲ್ಲಿಯೂ ಇದೆ ಅಂತಾರೆ. ಕೆಲವೊಮ್ಮೆ ಒಂದೇ ಡ್ರೆಸ್ ಧರಿಸಿ ಬಂದು ಮುಜುಗರಕ್ಕೊಳಗಾಗುವ ಸನ್ನಿವೇಶ ಸೃಷ್ಟಿಯಾಗುತ್ತವೆ.

ಈ ಕಾರಣದಿಂದ ಜನರು ಝುಡಿಯೋದತ್ತ ಮುಖ ಮಾಡುತ್ತಿಲ್ಲ. ಉತ್ತಮ ಗುಣಮಟ್ಟದ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ನೀಡುತ್ತಿದ್ರೂ ಝುಡಿಯೋ ಜನರಿಂದ ದೂರ ಸರಿಯುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಒಂದೇ ಡಿಸೈನ್ ಬಟ್ಟೆ/ಚಪ್ಪಲಿ/ಶೂ/ಬೆಲ್ಟ್/ಫ್ಯಾಶನ್ ಆಕ್ಸಸರಿಸ್ ಗಳು ಮಳಿಗೆಯಲ್ಲಿ ಕಾಣಸಿಗುತ್ತಿವೆ.

ಇದನ್ನೂ ಓದಿ: ಭಾರತದಲ್ಲಿನ ತನ್ನೆಲ್ಲಾ ವ್ಯವಹಾರ ಕ್ಲೋಸ್ ಮಾಡ್ತಿದೆ ಬ್ಯಾಂಕ್; ನಿಮ್ಮ ಅಕೌಂಟ್ ಇದ್ಯಾ?

ಈ ಎಲ್ಲ ಕಾರಣದಿಂದ ಝುಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಟ್ರೋಲ್ ಆಗುತ್ತಿದೆ. ಮುಂದಿನ ದಿನಗಳಲ್ಲಿ ಝಡಿಯೋಗೆ ಬದಲಾವಣೆ ಅಗತ್ಯವಾಗಿದೆ. ಒಂದು ವೇಳೆ ನೀವು ಸಹ ನಿಮ್ಮೂರಿನಲ್ಲಿ ಝುಡಿಯೋ ಔಟ್‌ಲೆಟ್ ಆರಂಭಿಸಬೇಕು ಅಂತ ಯೋಚಿಸುತ್ತಿದ್ರೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ನೀವೇ ಆರಂಭಿಸಬಹುದು TATA ZUDIO, ಬಂಡವಾಳ, ಲಾಭದ ಪ್ರಮಾಣ ಎಷ್ಟು?

Source link

Leave a Reply

Your email address will not be published. Required fields are marked *