Headlines

Budget 2026: 1 ಗಂಟೆ 26 ನಿಮಿಷಗಳ ಕಾಲ ಬಜೆಟ್​​ ಮಂಡಿಸಿದ ವಿತ್ತ ಸಚಿವೆ; ಆಯವ್ಯಯ ಮಂಡನೆಯಲ್ಲೂ ದಾಖಲೆ

Budget 2026: 1 ಗಂಟೆ 26 ನಿಮಿಷಗಳ ಕಾಲ ಬಜೆಟ್​​ ಮಂಡಿಸಿದ ವಿತ್ತ ಸಚಿವೆ; ಆಯವ್ಯಯ ಮಂಡನೆಯಲ್ಲೂ ದಾಖಲೆ


ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಚಿತ್ರದ ಕ್ರೆಡಿಟ್ ಮೂಲ: ಗೂಗಲ್

ಜನವರಿ, ಫೆ.01: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ಮಂಡಿಸಿ ಹೊಸ ದಾಖಲೆ ಬರೆದಿದ್ದಾರೆ. ಫೆಬ್ರವರಿ 2024 ರ ಮಧ್ಯಂತರ ಬಜೆಟ್ ಸೇರಿದಂತೆ ಒಟ್ಟು 9 ಆಯವ್ಯಯವನ್ನು ಅವರು ಮಂಡಿಸಿದ್ದಾರೆ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಸತತವಾಗಿ ಕೇಂದ್ರ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರವಾಗಿದೆ. ಪ್ರಸಕ್ತ ಸಾಲಿನಲ್ಲಿ ಅವರು ಮಂಡಿಸಿರುವ ಬಜೆಟ್ 53.47 ಲಕ್ಷ ಕೋಟಿ ಮೌಲ್ಯದ್ದಾಗಿದೆ.

ಇಂದು 1 ಗಂಟೆ 26 ನಿಮಿಷಗಳ ಕಾಲ ಬಜೆಟ್ ಮಂಡಿಸಿರುವ ವಿತ್ತ ಸಚಿವರು, ಹಲವು ಪ್ರಮುಖ ವಿಚಾರಗಳನ್ನು ಪ್ರಕಟಿಸಿದ್ದಾರೆ. ಹಿಂದಿನ ಬಜೆಟ್ ಮಂಡನೆಗಳಲ್ಲಿ ವಿತ್ತ ಸಚಿವರು ತೆಗೆದುಕೊಂಡ ಸಮಯದ ಮಾಹಿತಿ ಇಲ್ಲಿದೆ.

  • 2025-26 – 1 ಗಂಟೆ 14 ನಿಮಿಷ
  • 2024-25 – 1 ಗಂಟೆ 25 ನಿಮಿಷ
  • 2024 (ಮಧ್ಯಂತರ ಬಜೆಟ್) – 56 ನಿಮಿಷ
  • 2023-24- 1 ಗಂಟೆ 27 ನಿಮಿಷ
  • 2022-23 – 1 ಗಂಟೆ 32 ನಿಮಿಷ
  • 2021-22 – 1 ಗಂಟೆ ಮತ್ತು 40 ನಿಮಿಷ
  • 2020-21- 2 ಗಂಟೆ ಮತ್ತು 42 ನಿಮಿಷ

ಇದನ್ನೂ ಓದಿ: ಚುನಾವಣಾ ರಾಜ್ಯಗಳಿಗೆ ಬಜೆಟ್ ನಲ್ಲಿ ಭರ್ಜರಿ ಕೊಡುಗೆ, ಏನೇನು ಸಿಕ್ತು ನೋಡಿ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯಲ್ಲಿ ಅಂದರೆ 2019ರಲ್ಲಿ ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆಯಾಗಿದ್ದರು. 2024 ರಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಮೋದಿ ಸರ್ಕಾರದಲ್ಲಿಯೂ ಅವರಿಗೆ ಇದೆ ಇಲಾಖೆಯ ಜವಾಬ್ದಾರಿ ಸಿಕ್ಕಿತ್ತು. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ವಿವಿಧ ಅವಧಿಗಳಲ್ಲಿ ಒಟ್ಟು 10 ಬಜೆಟ್ ಮಂಡಿಸಿದ್ದಾರೆ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ 9 ಬಾರಿ ಬಜೆಟ್ ಮಂಡಿಸಿದ್ದರು. ಭಾರತದ ಹಣಕಾಸು ಸಚಿವರಾಗಿ ಪ್ರಣಬ್ ಮುಖರ್ಜಿ ಕೂಡ 8 ಬಾರಿ ಬಜೆಟ್ ಮಂಡಿಸಿದ್ದು, ನಿರ್ಮಲಾ ಸೀತಾರಾಮನ್ ಅವರು ಮೊರಾರ್ಜಿ ದೇಸಾಯಿ ಅವರ ದಾಖಲೆ ಬ್ರೇಕ್ ಮಾಡುವ ಸನಿಹದಲ್ಲಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 2:22 pm, ಭಾನುವಾರ, 1 ಫೆಬ್ರವರಿ 26



Source link

Leave a Reply

Your email address will not be published. Required fields are marked *