ಆತ್ಮಗೌರವ ಅಡವಿಟ್ಟು ಮಿತ್ರ ದೇಶಗಳ ಬಳಿ ಸಾಲ: ತಾವು ಬಿಕಾರಿಯಾಗಿದ್ದನ್ನು ಒಪ್ಪಿಕೊಂಡ ಪಾಕ್ ಪ್ರಧಾನಿ ಷರೀಫ್! | Pakistan Economic Crisis Shehbaz Sharif Admits Imf Loans Hurt National Respect

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ದೇಶದ ತೀವ್ರ ಆರ್ಥಿಕ ಸಂಕಷ್ಟವನ್ನು ಒಪ್ಪಿಕೊಂಡಿದ್ದಾರೆ. ಐಎಂಎಫ್ ಮತ್ತು ಮಿತ್ರ ದೇಶಗಳ ಮುಂದೆ ಸಾಲ ಕೇಳುವುದು ಆತ್ಮಗೌರವಕ್ಕೆ ಧಕ್ಕೆ ತಂದಂತೆ ಮತ್ತು ತಲೆಬಗ್ಗಿಸಿದಂತೆ ಎಂದು ಅವರು ತಮ್ಮ ಅಸಹಾಯಕತೆಯನ್ನು ಬಣ್ಣಿಸಿದ್ದಾರೆ.  

ಇಸ್ಲಾಮಾಬಾದ್‌: ‘ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ಮಿತ್ರ ದೇಶಗಳ ಮುಂದೆ ಸಾಲದ ನೆರವು ಕೇಳುವುದೆಂದರೆ ಅದು ಅವರ ಮುಂದೆ ನಾವು ತಲೆಬಗ್ಗಿಸಿದಂತೆ ಮತ್ತು ಆತ್ಮಗೌರವದ ಜೊತೆ ರಾಜೀ ಮಾಡಿಕೊಂಡಂತೆ. ನಮ್ಮ ಪರಿಸ್ಥಿತಿಯೂ ಅದೇ ಆಗಿತ್ತು’ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಅನುಭವಿಸಿದ್ದ ಭಾರೀ ಆರ್ಥಿಕ ಸಂಕಷ್ಟವನ್ನು ಒಪ್ಪಿಕೊಂಡಿದ್ದಾರೆ.

ಪಾಕ್ ದೇಶದ ಉದ್ಯಮಿಗಳನ್ನು ಸನ್ಮಾನಿಸಿ ಮಾತಾಡಿದ ಷರೀಫ್

ಇಲ್ಲಿ ದೇಶದ ಉದ್ಯಮಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಶೆಹಬಾಜ್‌, ‘ನಾವು ಅಧಿಕಾರ ವಹಿಸಿಕೊಂಡಾಗ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ನಾವು ದಿವಾಳಿಯ ಹಂತದಲ್ಲಿದ್ದೆವು. ಈ ಹಂತದಲ್ಲಿ ನಾನು ಮತ್ತು ಅಂದಿನ ಸೇನಾಪಡೆಗಳ ಮುಖ್ಯಸ್ಥರಾದ ಆಸಿಂ ಮುನೀರ್‌, ಐಎಂಎಫ್‌ ಮತ್ತು ಹಲವು ಮಿತ್ರ ದೇಶಗಳ ಮುಂದೆ ಸಾಲದ ನೆರವು ಯಾಚನೆ ಮಾಡಬೇಕಾಗಿ ಬಂತು’ ಎಂದರು.

‘ಈ ಹಂತದಲ್ಲಿ ನಮ್ಮ ಮಿತ್ರದೇಶಗಳು ಮತ್ತು ಹಣಕಾಸು ಸಂಸ್ಥೆಗಳು ನಮಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದವು. ಆದರೆ ನಾವು ಮಿತ್ರ ದೇಶಗಳ ಬಳಿ ಸಾಲ ಯಾಚಿಸಿದ ರೀತಿಯನ್ನು ನಾವು ನಿಮ್ಮ ಮುಂದೆ ಬಣ್ಣಿಸುವುದಾದರೂ ಹೇಗೆ? ಏಕೆಂದರೆ ಯಾರ ಬಳಿಯಾದರೂ ನೀವು ಸಾಲ ಕೇಳಲು ಹೋಗುತ್ತಿದ್ದೀರಿ ಎಂದರೆ ಅವರ ಮುಂದೆ ನೀವು ತಲೆ ಬಾಗಲೇಬೇಕು. ನಿಮ್ಮ ಆತ್ಮಗೌರವದ ಜೊತೆಗೆ ರಾಜಿ ಮಾಡಿಕೊಳ್ಳಲೇಬೇಕು. ಇಂಥ ವೇಳೆ ಕೆಲವೊಂದು ಅನಗತ್ಯ ಷರತ್ತುಗಳೂ ಮುಂದೆ ಬರುತ್ತವೆ. ಅವು ಅನಪೇಕ್ಷಿತವಾದರೂ ನಾವು ಒಪ್ಪಿಕೊಳ್ಳಲೇಬೇಕು’ ಎಂದು ತಾವು ಎದುರಿಸಿದ ಅಸಹಾಯಕ ಪರಿಸ್ಥಿತಿಯನ್ನು ಬಣ್ಣಿಸಿದರು.

ಹಣಕಾಸಿಗಾಗಿ ಚೀನಾ, ಸೌದಿ ಅರೇಬಿಯಾ ಅವಲಂಬಿಸಿರುವ ಪಾಕ್

ತನ್ನ ವಿದೇಶಿ ವಿನಿಮಯ ಸಂಗ್ರಹ ಮತ್ತು ಸಾಲ ನಿರ್ವಹಣೆಗೆ ಪಾಕಿಸ್ತಾನವು ಹಲವು ವರ್ಷಗಳಿಂದ ಚೀನಾ, ಸೌದಿ ಅರೇಬಿಯಾ, ಕತಾರ್‌, ಐಎಂಎಫ್‌ ಮೊದಲಾದವುಗಳ ಮೇಲೆ ಅವಲಂಬಿತವಾಗಿದೆ.

Source link

Leave a Reply

Your email address will not be published. Required fields are marked *