ಸಿನಿಮಾ (ಸಿನಿಮಾ) ಹಾಗೂ ರಾಜಕಾರಣ ಎರಡಕ್ಕೂ ಬಹಳ ಹತ್ತಿರದ ಸಂಬಂಧ. ಇತರ ರಾಜಕಾರಣಿಗಳು ಪಕ್ಷ ಅಥವಾ ವೈಯಕ್ತಿಕ ಲಾಭಕ್ಕಾಗಿ ಸಿನಿಮಾಗಳನ್ನು ಬಳಸಿಕೊಂಡೇ ಬರುತ್ತಿದ್ದಾರೆ. ಸಾಮಾನ್ಯರ ಮೇಲೆ ಅಪಾರ ಪ್ರಭಾವ ಬೀರಬಲ್ಲ ಸಿನಿಮಾದ ಶಕ್ತಿ ಅರಿತಿರುವ ರಾಜಕಾರಣಿಗಳು ಸಿನಿಮಾದವರೊಟ್ಟಿಗೆ ಉತ್ತಮ ಬಾಂಧವ್ಯವನ್ನೇ ಇರಿಸಿಕೊಂಡಿದ್ದಾರೆ. ರಾಜಕೀಯ ಪಕ್ಷದಲ್ಲಿದ್ದರೂ ಸಹ ಆರ್ ಎಸ್ ಎಸ್ ದೇಶದ ರಾಜಕೀಯದ ಮೇಲೆ ಪ್ರತ್ಯಕ್ಷ, ಪರೋಕ್ಷ ಪ್ರಭಾವ ಬೀರುತ್ತಲೇ ಇದೆ. ಇದೀಗ ರಾಷ್ಟ್ರ್ ಪ್ರಮುಖ್ ಆಗಿರುವ ಮೋಹನ್ ಭಾಗವತ್ ಅವರು ತೆಲುಗು ಚಿತ್ರರಂಗದ ಸ್ಟಾರ್ ನಟರು ಮತ್ತು ಕೆಲ ಪ್ರಮುಖ ನಿರ್ಮಾಪಕರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.
ಮೋಹನ್ ಭಾಗವತ್ ಅವರು ಎರಡು ದಿನಗಳ ಹೈದರಾಬಾದ್ ಪ್ರವಾಸದಲ್ಲಿದ್ದು ಸುಮಾರು 150 ಮಂದಿ ಮಾಜಿ ಮತ್ತು ಹಾಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಕಾರ್ಯಕ್ರಮ ಹೈದರಾಬಾದ್ ನ ಜಲ ವಿಹಾರದಲ್ಲಿ ಆಯೋಜನೆಯಾಗಿದೆ. ಕಾರ್ಯಕ್ರಮದ ನಂತರ ಸಂಜೆ ವೇಳೆಗೆ ತೆಲುಗು ಚಿತ್ರರಂಗದ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಹಲವಾರು ಮಂದಿ ತೆಲುಗು ನಟ-ನಟಿಯರು ಮತ್ತು ಸಿನಿಮಾ ನಿರ್ಮಾಪಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ವೆಂಕಟೇಶ್ ಅವರ ನಿವಾಸದಲ್ಲಿ ನಡೆದ ತೆಲುಗು ಸಿನಿಮಾ ರಂಗಕ್ಕೆ ಸುಮಾರು 140 ಮಂದಿ ಭಾಗಿ ಆಗಿದ್ದರು. ಈ ಕಾರ್ಯಕ್ರಮದ ಯೋಜನೆ ಮಾಡಿದ್ದು ಎಸ್ ಎಸ್ ರಾಜಮೌಳಿ ಅವರ ತಂದೆ, ರಾಜ್ಯಸಭಾ ಸದಸ್ಯರೂ ಆಗಿರುವ ಕತೆಗಾರ ವಿಜಯೇಂದ್ರ ಪ್ರಸಾದ್ ಅವರು.
ಇದನ್ನೂ ಓದಿ:ಒಟಿಟಿಗೆ ಬಂತು ಆಶಿಕಾ, ದುಷ್ಯಂತ್, ಸಿಂಪಲ್ ಸುನಿ ಸಿನಿಮಾ ‘ಗತವೈಭವ’
ಮೋಹನ್ ಭಾಗವತ್ ಅವರ ಕಾರ್ಯಕ್ರಮದಲ್ಲಿ ನಟರಾದ ವೆಂಕಟೇಶ್, ಅಕ್ಕಿನೇನಿ ನಾಗಾರ್ಜು, ತೇಜ್ ಸಜ್ಜಾ, ನಟ ನಾನಿ, ವರುಣ್ ತೇಜ್, ರಾಣಾ ದಗ್ಗುಬಾಟಿ, ರಾಮ್ ಪೋತಿನೇನಿ ಇನ್ನೂ ಕೆಲವು ಭಾಗಿ ಆಗಿದ್ದರು. ಮೂವಿ ಮೇಕರ್ಸ್ ನ ನಿರ್ಮಾಪಕರಾದ ಮೈತ್ರಿ ರವಿ, ಖ್ಯಾತ ನಿರ್ಮಾಪಕ ಸುರೇಶ್ ಬಾಬು ಈ ಮೈತ್ರಿಕೂಟದ ಭಾಗವಾಗಿದ್ದಾರೆ.
ವಿಜಯೇಂದ್ರ ಪ್ರಸಾದ್ ಅವರು ಈ ಹಿಂದೆ ತಾವು ಆರ್ ಎಸ್ ಎಸ್ ಎಸ್ ಬಗ್ಗೆ ಸಿನಿಮಾ ಮಾಡುವ ಆಶಯವನ್ನು ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ತೆಲುಗು ಚಿತ್ರರಂಗದ ಗಣ್ಯರು ಮೋಹನ್ ಭಾಗವತ ಅವರ ಭೇಟಿ ಆಗಿರುವುದು ಕುತೂಹಲ ಕೆರಳಿಸಿದೆ. ಆದರೆ ಸಭೆಯಲ್ಲಿ ಚರ್ಚೆ ಆದ ವಿಷಯಗಳ ಮಾಹಿತಿ ಬಹಿರಂಗವಾಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ