Headlines

57 ವಯಸ್ಸಿನಲ್ಲಿ Target ಶೂಟಿಂಗ್ ಸ್ಪರ್ಧೆಗೆ ಎಂಟ್ರಿ ಕೊಟ್ಟ Parimala Jaggesh, ಹೇಳಿದ್ರು Age is just a Number | Parimala Jaggesh Participating In Target Shooting Competition

57 ವಯಸ್ಸಿನಲ್ಲಿ Target ಶೂಟಿಂಗ್ ಸ್ಪರ್ಧೆಗೆ ಎಂಟ್ರಿ ಕೊಟ್ಟ Parimala Jaggesh, ಹೇಳಿದ್ರು Age is just a Number | Parimala Jaggesh Participating In Target Shooting Competition



57 ವಯಸ್ಸಿನಲ್ಲಿ Target ಶೂಟಿಂಗ್ ಸ್ಪರ್ಧೆಗೆ ಎಂಟ್ರಿ ಕೊಟ್ಟ Parimala Jaggesh, ಹೇಳಿದ್ರು Age is just a Number | Parimala Jaggesh Participating In Target Shooting Competition

Parimala Jaggesh: ನವರಸ ನಾಯಕ ಜಗ್ಗೇಶ್ ಪತ್ನಿ ಪರಿಮಳ ಇದೀಗ ತಮ್ಮ 57ನೇ ವಯಸ್ಸಿನಲ್ಲಿ ಟಾರ್ಗೆಟ್ ಶೂಟಿಂಗ್ ಕಲಿತು, ಸ್ಪರ್ಧೆಗೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ. 57ನೇ ವಯಸ್ಸಿನಲ್ಲೂ ಜೊತೆಗೆ ಡಯಾಬಿಟೀಕ್ ಆಗಿದ್ದರೂ ಸಹ ಹೊಸದನ್ನು ಕಲಿಯುವ ಆಸಕ್ತಿಯಿಂದ ಕಲಿಯುತ್ತಿದ್ದಾರೆ ಪರಿಮಳ. 

ಪರಿಮಳ ಜಗ್ಗೇಶ್ 57 ವಯಸ್ಸಿನಲ್ಲಿ ಸಾಧನೆ

ಜಗ್ಗೇಶ್ ಪತ್ನಿ ಪರಿಮಳ ಜಗ್ಗೇಶ್ ಕೇವಲ ಒಬ್ಬ ನಟನ ಪತ್ನಿಯಾಗಿ ಗುರುತಿಸಿಕೊಂಡಿಲ್ಲ, ಬದಲಾಗಿ, ಮದುವೆಯಾದ ಬಳಿಕ, ಸಂಸಾರ ಜೊತೆ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಹಲವು ಡಿಗ್ರಿಗಳನ್ನು ಪಡೆದಿದ್ದು, ಇದೀಗ ಡಯಟೀಶನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದ ಪರಿಮಳ ಅವರಿಗೆ ಸಕ್ಕರೆ ಕಾಯಿಲೆ ನಿಯಂತ್ರಣದ ಆಧುನಿಕ ಆವಿಷ್ಕಾರಕ್ಕೆ ಡಾಕ್ಟರೇಟ್ ಕೂಡ ಸಿಕ್ಕಿದ್ದು, ಇದೀಗ ಡಾ. ಪರಿಮಳ ಜಗ್ಗೇಶ್ ಆಗಿದ್ದಾರೆ. ಇದೀಗ ಶೂಟಿಂಗ್ ಕಲಿಯುವ ಮೂಲಕ ಯಾವುದೇ ವಿಷಯವನ್ನು ಕಲಿಯಲು ವಯಸ್ಸು ಅಡ್ಡ ಬರೋರಿಲ್ಲ. ಏಜ್ ಈಸ್ ಜಸ್ಟ್ ಎ ನಂಬರ್ ಎಂದಿದ್ದಾರೆ.

ಮದುವೆ ಬಳಿಕ ಓದು ಮುಂದುವರೆಸಿದ ಪರಿಮಳ

ಜಗ್ಗೇಶ್ ಜೊತೆ ಪರಿಮಳ ಮದುವೆಯಾದ ಅವರು 10ತರಗತಿಯಲ್ಲಿ ಓದುತ್ತಿದ್ದರು. ಪಿಯುಸಿಯಲ್ಲಿರುವಾ ಮೊದಲ ಮಗ, ಮೂರನೇ ವರ್ಷದ ಆರ್ಕಿಟೆಕ್ಟ್ ಓದುವಾಗ ಎರಡನೇ ಮಗ ಜನಿಸಿದ್ದ. ಬಳಿಕ ಇಂಟರ್ನ್ಯಾಷನಲ್ ಕೋಚಿಂಗ್ ಫೆಡರೇಶನ್ ಸಂಸ್ಥೆಯಲ್ಲಿ ಓದಿ ಸರ್ಟಿಫೈಡ್ ಕೋಚ್ ಆಗಿದ್ದಾರೆ. ಅಮೇರಿಕನ್ ಕೌನ್ಸಿಲ್ ಆನ್ ಎಕ್ಸರ್ಸೈನ್ ನಲ್ಲಿ ಕೋಚಿಂಗ್ ಪಡೆದು ತೂಕ ನಿಯಂತ್ರಣ ತಜ್ಞೆಯಾದರು. ಬಳಿಕ ನ್ಯಾಷನಲ್ ಅಕಾಡೆಮಿ ಆಫ್ ಸ್ಪೋರ್ಟ್ಸ್ ಮೆಡಿಸಿನ್ ನಲ್ಲಿ ಓದಿದ್ದಾರೆ. ಇವರು ಸರ್ಟಿಫೈಡ್ ಪಾಸಿಟಿವ್ ಸೈಕಾಲಜಿ ಕೋಚ್ ಕೂಡ ಹೌದು. ಡಾಕ್ಟರೇಟ್ ಪದವಿ ಬಳಿಕ Alamirap Nutrition & G.L.A.M ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ವೈಜ್ಞಾನಿಕವಾದ ಡಯಟ್ ಚಾಟ್ ಮೂಲಕ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತಿದ್ದಾರೆ, ಸದ್ಯ ಇವರು ಜನಪ್ರಿಯ ಡಯಟೀಶನ್ ಹೌದು. ಇವೆಲ್ಲವನ್ನೂ ಅವರು ಸಾಧನೆ ಮಾಡಿದ್ದು, ತಮ್ಮ 50ನೇ ವಯಸ್ಸಿನಲ್ಲಿ ಇದೀಗ 57ನೇ ವಯಸ್ಸಿನಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಈ ಕುರಿತು ಪರಿಮಳ ಜಗ್ಗೇಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Target ಶೂಟಿಂಗ್ ಸ್ಪರ್ಧೆ

57 ನೇ ವಯಸ್ಸಿನಲ್ಲಿ, ನಾನು ನನ್ನ ಮೊದಲ Target ಶೂಟಿಂಗ್ ಸ್ಪರ್ಧೆಯನ್ನು ಪ್ರವೇಶಿಸುತ್ತಿದ್ದೇನೆ ನಾನು ಕೆಲವೇ ತಿಂಗಳುಗಳ ಹಿಂದೆ, ಅಕ್ಟೋಬರ್‌ನಲ್ಲಿ ತರಬೇತಿಯನ್ನು ಪ್ರಾರಂಭಿಸಿದೆ, ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಯಾವುದೇ ಹಿಂದಿನ ಅನುಭವವಿಲ್ಲದೆ ಜೀವನವು ಅದನ್ನು ಸುಲಭಗೊಳಿಸಲಿಲ್ಲ: ನಾನು Diabetic since 1994 – lot of planning required for practice and recovery. ನಾನು ಒಂದು ಕಂಪನಿಯನ್ನು ನಡೆಸುತ್ತಿದ್ದೇನೆ. ನನಗೂ ನನ್ನ ಕುಟುಂಬದ ಜವಾಬ್ದಾರಿಗಳಿವೆ… to complete everything in just 24 hours – ಆರಂಭದಲ್ಲಿ ಅಸಾಧ್ಯ ಅನಿಸಿತು. ಹಾಗಾಗಿ ನಾನು ನನ್ನ ಮನಸ್ಥಿತಿಯನ್ನು ಬದಲಾಯಿಸಿದೆ. ನಾನು ಈಗ ಬೆಳಿಗ್ಗೆ 4 ಗಂಟೆಗೆ ಎಚ್ಚರಗೊಳ್ಳುತ್ತೇನೆ – to get to practice. ಈ ಎಲ್ಲಾ ಪ್ರಯತ್ನಗಳು ಕೇವಲ ಪದಕಗಳಿಗಾಗಿ ಅಲ್ಲ, ಆದರೆ 57 ನೇ ವಯಸ್ಸಿನಲ್ಲಿ… ಹೊಸದನ್ನು ಪ್ರಾರಂಭಿಸುವುದರ ಅರ್ಥವನ್ನು ಅರ್ಥಮಾಡಿಕೊಳ್ಳಲು. Target ಶೂಟಿಂಗ್ ನನಗೆ ಶಿಸ್ತು ಮತ್ತು ನಿಶ್ಚಲತೆ ಮೇಲೆ ಗಮನಹರಿಸಲು ಮತ್ತು ಒತ್ತಡದಲ್ಲಿ ಶಾಂತವಾಗಿರಲು ಕಲಿಸುತ್ತಿದೆ. ವಯಸ್ಸು ಕೇವಲ ಒಂದು ಸಂಖ್ಯೆ ಎಂದಿದ್ದಾರೆ ಪರಿಮಳ ಜಗ್ಗೇಶ್.



Source link

Leave a Reply

Your email address will not be published. Required fields are marked *