ಶ್ರೀಲೀಲಾ (Sreeleela) ಕನ್ನಡದ ನಟಿ ಆದರೆ ಇದೀಗ ಪರ ಭಾಷೆಯಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಕನ್ನಡದ ಬಳಿಕ ತೆಲುಗು ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ಶ್ರೀಲೀಲಾ ಅಲ್ಲಿ ಬಹು ಕಡಿಮೆ ಅವಧಿಯಲ್ಲೇ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ಬಳಿಕ ಬಹುಮಾನಕ್ಕೆ ಪದಾರ್ಪಣೆ ಮಾಡಿದ ಶ್ರೀಲೀಲಾಗೆ ಅಲ್ಲಿ ಅವರ ಮೊದಲ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಬಹಳ ಡಿಮ್ಯಾಂಡ್ ಏರ್ಪಟ್ಟಿದೆ. ಶ್ರೀಲೀಲಾ ಕೈಯಲ್ಲಿ ಮೂರು ಹಿಂದಿ ಸಿನಿಮಾಗಳಿವೆಯಂತೆ. ಇದೀಗ ತಮಿಳಿನಲ್ಲೂ ಸ್ಟಾರ್ ನಟಿ ಆಗುವತ್ತ ಹೆಜ್ಜೆ ಹಾಕಿದ್ದಾರೆ ಶ್ರೀಲೀಲಾ. ಇತ್ತೀಚೆಗಷ್ಟೇ ಶ್ರೀಲೀಲಾ ನಟನೆಯ ಮೊದಲ ತಮಿಳು ಸಿನಿಮಾ ಬಿಡುಗಡೆ ಆಗುತ್ತಿದೆ. ಇದೀಗ ಶ್ರೀಲೀಲಾಗೆ ತಮಿಳಿನ ಜನಪ್ರಿಯ ನಾಯಕನೊಟ್ಟಿಗೆ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿದೆ.
ಶ್ರೀಲೀಲಾ, ‘ಪರಾಶಕ್ತಿ’ ಹೆಸರಿನ ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಅದು ಅವರ ಮೊದಲ ತಮಿಳು ಸಿನಿಮಾ. ಸಿನಿಮಾ ಬಿಡುಗಡೆ ಕೆಲವೇ ದಿನಗಳಲ್ಲಿ ಶ್ರೀಲೀಲಾಗೆ ಮತ್ತೊಂದು ತಮಿಳು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಅದೂ ತಮಿಳಿನಲ್ಲಿ ಬಾಲಿವುಡ್ ನಲ್ಲೂ ಸಖತ್ ಹೆಸರು ಮಾಡಿರುವ ಸ್ಟಾರ್ ನಟನ ಎದುರು ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿದೆ.
ತಮಿಳಿನ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿದ್ದಾರೆ ಧನುಶ್ ಅವರ ಹೊಸ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ. ಇದು ಧನುಶ್ ಅವರ 55ನೇ ಸಿನಿಮಾ ಆಗಿದ್ದು, ಇತ್ತೀಚೆಗಷ್ಟೇ ಸಿನಿಮಾದ ಘೋಷಣೆಯಾಗಿದೆ. ಸಿನಿಮಾ ಘೋಷಣೆಯಾದಾಗ ಧನುಷ್ ಎದುರು ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ. ಆದರೆ ಇದೀಗ ಶ್ರೀಲೀಲಾ, ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ:ಮೂರು ಮಕ್ಕಳ ದತ್ತು ಪಡೆದಿದ್ದು ಏಕೆ? ಭಾವುಕ ವಿಷಯ ಹಂಚಿಕೊಂಡ ಶ್ರೀಲೀಲಾ
ಧನುಶ್ ಹಾಗೂ ಶ್ರೀಲೀಲಾ ನಟಿಸಲಿರುವ ಸಿನಿಮಾವನ್ನು ನಿರ್ದೇಶಕ ರಾಜ್ ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಲಿದ್ದಾರೆ. 2024ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ‘ಅಮರನ್’ ಸಿನಿಮಾವನ್ನು ನಿರ್ದೇಶಿಸಿದ್ದು ಇವರೇ. ಇದೀಗ ಧನುಶ್ ಅವರಿಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ಶ್ರೀಲೀಲಾ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಗಬ್ಬರ್ ಸಿಂಗ್’ ರವಿತೇಜ ನಟಿಸಲಿರುವ ಹೊಸ ಸಿನಿಮಾ, ಹಿಂದಿಯಲ್ಲಿ ‘ಆಶಿಖಿ 3’, ಸೈಫ್ ಅಲಿ ಖಾನ್ ಪುತ್ರನ ಜೊತೆಗೊಂದು ಸಿನಿಮಾ. ರಣ್ವೀರ್ ಸಿಂಗ್ ನಟಿಸಲಿರುವ ಹೊಸ ಸಿನಿಮಾಗಳಲ್ಲಿಯೂ ಶ್ರೀಲೀಲಾ ನಟಿಸುತ್ತಿದ್ದಾರೆ. ಇದೀಗ ಧನುಶ್ ಸಿನಿಮಾ ಅವಕಾಶವೂ ಅವರಿಗೆ ಲಭಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ