ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ) ಅಧ್ಯಕ್ಷ ಸೇರಿದಂತೆ ಇನ್ನೂ ಕೆಲವು ಸ್ಥಾನಗಳಿಗೆ ನಿನ್ನೆ (ಜನವರಿ 31) ಮತದಾನ ನಡೆದಿದ್ದು, ಹಿರಿಯ ನಟಿ ಜಯಮಾಲ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಯಮಾಲ ಅವರು ಫಿಲಂ ಚೇಂಬರ್ನ ಮೊದಲ ಮಹಿಳಾ ಅಧ್ಯಕ್ಷೆ ಆಗಿದ್ದು, ಎರಡನೇ ಬಾರಿ ಅವರು ಫಿಲಂ ಚೇಂಬರ್ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಇಂದು ಪದಗ್ರಹಣ ಮಾಡಿದ ಜಯಮಾಲ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ತಮ್ಮ ಮುಂದಿನ ಯೋಜನೆಗಳು, ತರಲಿರುವ ಬದಲಾವಣೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ