7 ವರ್ಷದಿಂದ ಜೊತೆಗಿರುವ Ranbir Kapoor, Alia Bhatt ದಾಂಪತ್ಯದಲ್ಲಿ ಬಿರುಗಾಳಿಯೇ? ಸತ್ಯ ಏನು?

7 ವರ್ಷದಿಂದ ಜೊತೆಗಿರುವ Ranbir Kapoor, Alia Bhatt ದಾಂಪತ್ಯದಲ್ಲಿ ಬಿರುಗಾಳಿಯೇ? ಸತ್ಯ ಏನು?

7 ವರ್ಷದಿಂದ ಜೊತೆಗಿರುವ Ranbir Kapoor, Alia Bhatt ದಾಂಪತ್ಯದಲ್ಲಿ ಬಿರುಗಾಳಿಯೇ? ಸತ್ಯ ಏನು?

Alia Bhatt On Ranbir Kapoor: ಬಾಲಿವುಡ್‌ ಸೂಪರ್‌ಸ್ಟಾರ್‌ಗಳಾದ ರಣಬೀರ್ ಕಪೂರ್, ಆಲಿಯಾ ಭಟ್ ಅವರ ದಾಂಪತ್ಯ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಗಾಸಿಪ್‌ಗಳು ಹರಿದಾಡುತ್ತಿರುತ್ತವೆ. ಈ ಬಗ್ಗೆ ಆಲಿಯಾ ಭಟ್‌ ಪ್ರತಿಕ್ರಿಯೆ ನೀಡಿದ್ದಾರೆ.

’ಲವ್ ಅಂಡ್ ವಾರ್’ ಮತ್ತು ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ರಣಬೀರ್ ಅವರ ಮುಂದಿನ ಸಿನಿಮಾಗಳಾಗಿವೆ. ರಾಮಾಯಣ ಸಿನಿಮಾದಲ್ಲಿ ರಣಬೀರ್ ಅವರು ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಪಲ್ಲವಿ ಈ ಚಿತ್ರದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಯಶ್ ರಾವಣನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ದೊಡ್ಡ ತಾರಾಗಣವೇ ಇದೆ. ಭಾರೀ ಬಜೆಟ್‌ನಲ್ಲಿ ತಯಾರಾಗುತ್ತಿರುವ ರಾಮಾಯಣ ಮುಂದಿನ ವರ್ಷ ತೆರೆಗೆ ಬರಲಿದೆ ಎಂದು ವರದಿಯಾಗಿದೆ.

’ಲವ್ ಅಂಡ್ ವಾರ್’ ಚಿತ್ರದಲ್ಲಿ ಆಲಿಯಾ ಭಟ್ ರಣಬೀರ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಸ್ಪೈ ಯೂನಿವರ್ಸ್ ಚಿತ್ರ ‘ಆಲ್ಫಾ’ ಆಲಿಯಾ ಅವರ ಇನ್ನೊಂದು ಪ್ರಮುಖ ಚಿತ್ರವಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಈ ಚಿತ್ರ ತೆರೆಗೆ ಬರಲಿದೆ ಎಂದು ವರದಿಯಾಗಿದೆ.

ರಣಬೀರ್‌ ಕಪೂರ್‌, ಆಲಿಯಾ ಭಟ್‌ ಇಬ್ಬರೂ ಬೇರೆಯಾಗುತ್ತಿದ್ದಾರೆ, ದೂರವಾಗಿದ್ದಾರೆ ಎಂಬಿತ್ಯಾದಿ ಹಲವು ಸುಳ್ಳು ಸುದ್ದಿಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅಂತಹದ್ದೇ ಒಂದು ವಿಡಿಯೋ ಬಗ್ಗೆ ಆಲಿಯಾ ಭಟ್ ಮಾತನಾಡಿದ್ದಾರೆ.

"ಸೋಶಿಯಲ್ ಮೀಡಿಯಾದಲ್ಲಿ ಕಾಣುವ ಯಾವುದೇ ಗದ್ದಲಗಳು ನನಗಾಗಲಿ, ರಣಬೀರ್‌ಗಾಗಲಿ ತಟ್ಟುವುದಿಲ್ಲ. ಯಾಕಂದ್ರೆ ಅದ್ಯಾವುದೂ ಸತ್ಯವಲ್ಲ. ಮೂರೂವರೆ ಸೆಕೆಂಡ್, ಏಳು ಸೆಕೆಂಡ್ ವಿಡಿಯೋಗಳ ಕೆಳಗೆ ಹಲವರು ಈ ರೀತಿ ಪ್ರತಿಕ್ರಿಯಿಸುತ್ತಾರೆ. ನಾವು ಏಳು ವರ್ಷಗಳಿಂದ ಒಟ್ಟಿಗೆ ಇದ್ದೇವೆ" ಎಂದು ಆಲಿಯಾ ಹೇಳಿದ್ದಾರೆ.

ಬಹಳ ದಿನಗಳ ಪ್ರೀತಿಗೆ ಅಂತ್ಯ ಹಾಡಿ 2022ರಲ್ಲಿ ಇವರಿಬ್ಬರು ಮದುವೆಯಾದರು. ಅದೇ ವರ್ಷ ನವೆಂಬರ್‌ನಲ್ಲಿ ಇವರಿಗೆ ರಹಾ ಎಂಬ ಹೆಣ್ಣು ಮಗು ಜನಿಸಿತು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದರು.

Source link

Leave a Reply

Your email address will not be published. Required fields are marked *