Foods to avoid kidney stones: ಕಿಡ್ನಿಯಲ್ಲಿ ಕಲ್ಲು ಉಂಟಾಗಲು ಹಲವು ಕಾರಣಗಳಿರಬಹುದು. ಉದಾಹರಣೆಗೆ ಆಹಾರ ಪದ್ಧತಿ, ಅಧಿಕ ದೇಹದ ತೂಕ ಅಥವಾ ಕೆಲವು ಔಷಧಿಗಳು. ಆದರೆ ಕಿಡ್ನಿ ಸ್ಟೋನ್ ಇರುವವರು ಕೆಲವು ಆಹಾರಗಳನ್ನು ದೂರವಿಡಲು ವೈದ್ಯರು ಸಲಹೆ ನೀಡುತ್ತಾರೆ.

ಕಿಡ್ನಿಯಲ್ಲಿ ಸ್ಟೋನ್ ಆಗಬಾರದೆಂದ್ರೆ ಕೆಲವು ಆಹಾರದಿಂದ ದೂರವಿರಲು ವೈದ್ಯರು ಸಲಹೆ ನೀಡುತ್ತಾರೆ. ಅವು ಯಾವುವು ಎಂದು ನೋಡೋಣ.

ಕೆಲವು ಆಹಾರಗಳಲ್ಲಿ ಆಕ್ಸಲೇಟ್ ಮತ್ತು ಕ್ಯಾಲ್ಸಿಯಂ ಅಧಿಕವಾಗಿದ್ದು, ಇದು ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತದೆ. ಸಿಹಿ ಗೆಣಸು, ಬೆಂಡೆಕಾಯಿ, ಸೋಯಾ ಉತ್ಪನ್ನಗಳನ್ನು ಸೇವಿಸುವುದನ್ನು ತಪ್ಪಿಸಿ.

ಸಂಸ್ಕರಿಸಿದ ಆಹಾರ, ಉಪ್ಪಿನಕಾಯಿ, ಪ್ಯಾಕ್ ಮಾಡಿದ ತಿಂಡಿಗಳು, ಚಿಪ್ಸ್, ಉಪ್ಪು ಹಾಕಿದ ನಟ್ಸ್ ಮತ್ತು ಫಾಸ್ಟ್ ಫುಡ್‌ಗಳಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಕಿಡ್ನಿ ಸ್ಟೋನ್ ಇದ್ದರೆ ಅಥವಾ ಆಗಬಾರದೆಂದ್ರೆ ಇವುಗಳನ್ನು ಬಿಡಿ.

ಅಧಿಕ ಪ್ರೊಟೀನ್ ಆಹಾರವು ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕಿಡ್ನಿ ಸ್ಟೋನ್‌ಗೆ ಕಾರಣವಾಗಬಹುದು. ಆದ್ದರಿಂದ, ರೆಡ್ ಮೀಟ್‌ನಂತಹ ಅಧಿಕ ಪ್ರೊಟೀನ್ ಆಹಾರಗಳನ್ನು ತಪ್ಪಿಸಿ.

ಸಕ್ಕರೆ ಅಂಶವಿರುವ ಪಾನೀಯಗಳ ಅತಿಯಾದ ಸೇವನೆಯು ಕಿಡ್ನಿ ಸ್ಟೋನ್ ಉಂಟಾಗಲು ಕಾರಣವಾಗಬಹುದು.

ಕೆಫೀನ್‌ನ ಅತಿಯಾದ ಬಳಕೆಯು ಕಿಡ್ನಿ ಸ್ಟೋನ್‌ಗೆ ಕಾರಣವಾಗಬಹುದು.

ಹಾಲಿನ ಉತ್ಪನ್ನಗಳ ಅತಿಯಾದ ಬಳಕೆಯು ಕಿಡ್ನಿ ಸ್ಟೋನ್ ಉಂಟಾಗಲು ಕಾರಣವಾಗಬಹುದು.

ಆರೋಗ್ಯ ತಜ್ಞರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರವೇ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿ.

Source link
ಕಿಡ್ನಿ ಸ್ಟೋನ್‌ಗೆ ಕಾರಣವಾಗುವ ಆಹಾರಗಳಿವು.. ಇಂದೇ ಇವುಗಳನ್ನ ಎತ್ತಿಡಿ