MNREGA ಹೆಸರು ಬದಲಾವಣೆ: ಕೇಂದ್ರದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್, ಸಚಿವ ಮಹದೇವಪ್ಪ ಆಕ್ರೋಶ | Union Budget 2026 | Mgnrega Name Change Congress Protests Hc Mahadevappa Leads Stir In Mysuru

MNREGA ಹೆಸರು ಬದಲಾವಣೆ: ಕೇಂದ್ರದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್, ಸಚಿವ ಮಹದೇವಪ್ಪ ಆಕ್ರೋಶ | Union Budget 2026 | Mgnrega Name Change Congress Protests Hc Mahadevappa Leads Stir In Mysuru



MNREGA ಹೆಸರು ಬದಲಾವಣೆ: ಕೇಂದ್ರದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್, ಸಚಿವ ಮಹದೇವಪ್ಪ ಆಕ್ರೋಶ | Union Budget 2026 | Mgnrega Name Change Congress Protests Hc Mahadevappa Leads Stir In Mysuru

ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಹೆಸರು ಬದಲಾಯಿಸಿದ್ದನ್ನು ವಿರೋಧಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದೆ. ಸಚಿವ ಹೆಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಕೇಂದ್ರದ ಕ್ರಮವನ್ನು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು (ಫೆ. 1): ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (Mahatma Gandhi NREGA) ಹೆಸರನ್ನು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಘಟಕಗಳ ವತಿಯಿಂದ ಟೌನ್ ಹಾಲ್ ಮುಂಭಾಗ ಅಹೋರಾತ್ರಿ ಧರಣಿ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಧರಣಿಗೆ ಚಾಲನೆ ನೀಡಿದರು. ಈ ವೇಳೆ ಮಾಜಿ ಸಂಸದ ಉಗ್ರಪ್ಪ, ಮಾಜಿ ಶಾಸಕ ನಂಜುಂಡಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ: ಕೇಂದ್ರದ ವಿರುದ್ಧ ಸಚಿವ ಮಹದೇವಪ್ಪ ಆಕ್ರೋಶ

ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಮಹದೇವಪ್ಪ, ಕೇಂದ್ರ ಸರ್ಕಾರ ಕೇವಲ ಹೆಸರನ್ನು ಬದಲಿಸಿಲ್ಲ, ಬದಲಾಗಿ ದೇಶದ ಜನರ ದುಡಿಯುವ ಹಕ್ಕನ್ನೇ ಕಿತ್ತುಕೊಂಡಿದೆ. ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಎಂದು ಕಿಡಿಕಾರಿದರು. ಕೋವಿಡ್ ಸಂಕಷ್ಟದ ಸಮಯದಲ್ಲಿ 15 ಕೋಟಿ ಜನರಿಗೆ ಆಸರೆಯಾಗಿದ್ದ ಯೋಜನೆಯ ಅನುದಾನ ಹಂಚಿಕೆಯಲ್ಲಿ ಈಗ ಕೇಂದ್ರವು ಶೇ. 60ರಷ್ಟು ಮಾತ್ರ ನೀಡುತ್ತಿದ್ದು, ಉಳಿದ ಶೇ. 40ರಷ್ಟನ್ನು ರಾಜ್ಯಗಳ ಮೇಲೆ ಹೇರಿದೆ. ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಬಜೆಟ್‌ನಲ್ಲಿ ಬೆಂಗಳೂರಿಗೆ ಅನ್ಯಾಯ: ನಿರಾಸಾದಾಯಕ ಎಂದ ಸಚಿವ

ಇದೇ ವೇಳೆ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇದೊಂದು ಸಂಪೂರ್ಣ ನಿರಾಸಾದಾಯಕ ಬಜೆಟ್ ಎಂದು ಬಣ್ಣಿಸಿದರು. ‘ನಾನು ಕೇವಲ ವಿರೋಧ ಪಕ್ಷದವನೆಂದು ಟೀಕಿಸುತ್ತಿಲ್ಲ, ಈ ಬಜೆಟ್ ಮೇಲೆ ದೇಶಕ್ಕೆ ಬಹಳ ನಿರೀಕ್ಷೆ ಇತ್ತು. ಆದರೆ ಬಜೆಟ್ ಆ ನಿರೀಕ್ಷೆಗಳನ್ನೆಲ್ಲಾ ಹುಸಿಯಾಗಿಸಿದೆ. ಬೆಂಗಳೂರಿನ ಟ್ರಾಫಿಕ್ ದಟ್ಟಣೆ ನಿವಾರಣೆಗೆ ವರದಿ ನೀಡಿದ್ದರೂ ಕೇಂದ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಹಲವು ಯೋಜನೆಗಳನ್ನು ಘೋಷಿಸಲಾಗಿದೆಯೇ ಹೊರತು ಅದರಲ್ಲಿ ವಿಶೇಷತೆ ಏನೂ ಇಲ್ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲಿತರು ಮತ್ತು ಹಿಂದುಳಿದ ವರ್ಗಗಳ ಕಡೆಗಣನೆ

ಕೇಂದ್ರದ ಬಜೆಟ್‌ನಲ್ಲಿ ಸಾಮಾಜಿಕ ನ್ಯಾಯಕ್ಕೆ ಬೆಲೆಯಿಲ್ಲ ಎಂದು ಆರೋಪಿಸಿದ ಮಹದೇವಪ್ಪ, ಈ ಬಾರಿಯ ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಬಗ್ಗೆ ತೀವ್ರ ತಾರತಮ್ಯ ಎಸಗಲಾಗಿದೆ. ಬಡವರು ಮತ್ತು ಶೋಷಿತ ವರ್ಗಗಳನ್ನು ಕಡೆಗಣಿಸಿರುವ ಈ ಬಜೆಟ್‌ನಿಂದ ಜನಸಾಮಾನ್ಯರಿಗೆ ಯಾವುದೇ ಲಾಭವಿಲ್ಲ” ಎಂದು ಮೈಸೂರಿನಲ್ಲಿ ತಮ್ಮ ಆಕ್ರೋಶ ಹೊರಹಾಕಿದರು.



Source link

Leave a Reply

Your email address will not be published. Required fields are marked *