Naa Ninna Bidalaare ಕ್ಯೂಟ್​ ದೆವ್ವಕ್ಕೆ ಹುಟ್ಟುಹಬ್ಬವಿಂದು: ‘ಅಂಬಿಕಾ’ ಕುರಿತ ಇಂಟರೆಸ್ಟಿಂಗ್​ ಸ್ಟೋರಿ | Naa Ninna Bidalaare Ambika Urf Neetha Ashok Celebrating Birthday Suc

Naa Ninna Bidalaare ಕ್ಯೂಟ್​ ದೆವ್ವಕ್ಕೆ ಹುಟ್ಟುಹಬ್ಬವಿಂದು: ‘ಅಂಬಿಕಾ’ ಕುರಿತ ಇಂಟರೆಸ್ಟಿಂಗ್​ ಸ್ಟೋರಿ | Naa Ninna Bidalaare Ambika Urf Neetha Ashok Celebrating Birthday Suc



Naa Ninna Bidalaare ಕ್ಯೂಟ್​ ದೆವ್ವಕ್ಕೆ ಹುಟ್ಟುಹಬ್ಬವಿಂದು: ‘ಅಂಬಿಕಾ’ ಕುರಿತ ಇಂಟರೆಸ್ಟಿಂಗ್​ ಸ್ಟೋರಿ | Naa Ninna Bidalaare Ambika Urf Neetha Ashok Celebrating Birthday Suc

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಕ್ಯೂಟ್ ದೆವ್ವ ಅಂಬಿಕಾ ಪಾತ್ರದಿಂದ ಖ್ಯಾತರಾದ ನಟಿ ನೀತಾ ಅಶೋಕ್ ಅವರ ಹುಟ್ಟುಹಬ್ಬದ ಸಂಭ್ರಮದ ಕುರಿತು ಈ ಲೇಖನ ತಿಳಿಸುತ್ತದೆ. ‘ವಿಕ್ರಾಂತ್ ರೋಣ’ ಚಿತ್ರದಲ್ಲೂ ನಟಿಸಿರುವ ಅವರ ವೃತ್ತಿ ಹಾಗೂ ವೈಯಕ್ತಿಕ ಜೀವನ, ಮದುವೆಯ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ದೆವ್ವ, ಭೂತ, ಪಿಶಾಚಿ ಎಂದರೆ ಸಾಮಾನ್ಯವಾಗಿ ಎಲ್ಲರೂ ಹೆದರುವವರೇ. ಇವು ಅಸ್ತಿತ್ವದಲ್ಲಿ ಇಲ್ಲಾ ಎಂದು ಹೇಳುವವವರು ಕೂಡ ಅಂಥ ಸನ್ನಿವೇಶ ಬಂದರೆ ಹೆದರುವುದು ಉಂಟು. ಆದರೆ ಕ್ಯೂಟ್​ ದೆವ್ವ ಎಂದು ಸೀರಿಯಲ್​ ಪ್ರಿಯರಿಗೆ ಕೇಳಿದ್ರೆ ಅವರೆಲ್ಲಾ ಖುಷಿ ಪಡುವ ದೆವ್ವ ಒಂದೇ. ಅದು ನಾ ನಿನ್ನ ಬಿಡಲಾರೆ ಸೀರಿಯಲ್​ನ ಅಂಬಿಕಾ. ಮೋಸದಿಂದ ಸತ್ತು ಹೋದ ಈ ಕ್ಯೂಟ್​ ದೆವ್ವ ಅಂಬಿಕಾ ಎಂದರೆ ಸೀರಿಯಲ್​ ಪ್ರಿಯರಿಗೆ ತುಂಬಾ ಖುಷಿ. ತನ್ನ ತಂಗಿ ಮತ್ತು ಗಂಡನನ್ನು ಒಂದು ಮಾಡಲು ಈ ದೆವ್ವ ಸಾಕಷ್ಟು ಪ್ರಯತ್ನ ಮಾಡುತ್ತಲೇ ಇದೆ. ತಂಗಿಗೆ ಮಾತ್ರ ಕಾಣಿಸಿಕೊಳ್ಳುವ ಈ ಭೂತ ಕಂಡರೆ ವೀಕ್ಷಕರಿಗೆ ಇಷ್ಟವೋ ಇಷ್ಟ. ಅಂದಹಾಗೆ ಈ ದೆವ್ವದ ರಿಯಲ್​ ಹೆಸರು ನೀತಾ ಅಶೋಕ್​. ಇಂದು ಅರ್ಥಾತ್​ ಫೆಬ್ರುವರಿ 1, ನೀತಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿ ನಾ ನಿನ್ನ ಬಿಡಲಾರೆ (Naa Ninna Bidalaare Serial) ಗಂಡ ಮತ್ತು ಮಗಳ ಜೊತೆಗಿನ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದೆ.

ನೀತಾ ಅಶೋಕ್​ ಕುರಿತು

ಇನ್ನು, ನಟಿ ನೀತಾ ಅಶೋಕ್ ಕುರಿತು ಹೇಳುವುದಾದರೆ, ಇವರು ಅನೂಪ್‌ ಭಂಡಾರಿ (Anoop Bandhari) ನಿರ್ದೇಶನದ ‘ವಿಕ್ರಾಂತ್‌ ರೋಣ’ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಅಪರ್ಣಾ ಬಲ್ಲಾಳ್‌ (ಪನ್ನಾ) ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ನಟಿಸಿರುವುದು ಒಂದೇ ಸಿನಿಮಾದಲ್ಲಿ ಆದರೂ ಅವರ ಫ್ಯಾನ್ಸ್​ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇದೆ. ಕ್ರಾಂತ್​ ರೋಣದಲ್ಲಿ ನಟಿಸುವ ಮುನ್ನ ಅಂದರೆ 2019ರಲ್ಲಿ ತುಳು ಚಲನಚಿತ್ರ ಜಬರ್ದಸ್ತ್ ಶಂಕರದಲ್ಲಿ ನೀತಾ ನಟಿಸಿದ್ದರು. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಯಶೋದಾ’ ಧಾರಾವಾಹಿಯ ಮೂಲಕವು ಹೆಸರು ಮಾಡಿದ್ದಾರೆ ನೀತಾ ಅಶೋಕ್​. ಇದರಲ್ಲದೇ ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ದೂರದರ್ಶನದಲ್ಲಿ ಹಿಂದಿ ಧಾರಾವಾಹಿಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ ಮದುವೆ

2023ರಂದು ನೀತಾ ಅಶೋಕ್​ ಅವರು ಸತೀಶ್​ ಎನ್ನುವವರನ್ನು ಮದುವೆಯಾಗಿದ್ದಾರೆ. ಕಾಲೇಜಿನಿಂದಲೇ ಇವರಿಬ್ಬರು ಸ್ನೇಹಿತರಾಗಿದ್ದು, ಆಮೇಲೆ ಪ್ರೀತಿ ಹುಟ್ಟಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಅಂದಹಾಗೆ ಸತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ನೀತಾ ಅವರು ಮೂಲತಃ ಉಡುಪಿಯವರು.

ರೀಲ್​ ಅಮ್ಮ

ರಿಯಲ್​ ಲೈಫ್​ನಲ್ಲಿ ನೀತಾ ಅಶೋಕ್ ಅವರು ಇನ್ನೂ ತಾಯಿಯಾಗಿಲ್ಲ. ಆದರೆ ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್​ನಲ್ಲಿ ಹಿತಾ ಎನ್ನುವ ಮಗಳ ತಾಯಿ. ನಿಜಕ್ಕೂ ಇವಳು ನನ್ನ ಮಗಳೇ ಎನ್ನಿಸುತ್ತದೆ. ಇದ್ದರೆ ಇಂಥದ್ದೇ ಮಗಳು ಇರಬೇಕು ಎಂದು ಜೀ ಅವಾರ್ಡ್​ ವೇದಿಕೆಯಲ್ಲಿ ನೀತಾ ಹೇಳಿದ್ದರು.



Source link

Leave a Reply

Your email address will not be published. Required fields are marked *