Headlines

ಟ್ರಂಪ್ ಬೆದರಿಕೆಗೆ ಜಗ್ಗದ ಖಮೇನಿ:’ನಮ್ಮ ಬೆರಳು ಟ್ರಿಗರ್ ಮೇಲಿದೆ’ ಎಂದ ಇರಾನ್! | Iran US conflict updates | Iran To Trump God Willing We Will End Us Tyranny Khamenei Warning

ಟ್ರಂಪ್ ಬೆದರಿಕೆಗೆ ಜಗ್ಗದ ಖಮೇನಿ:’ನಮ್ಮ ಬೆರಳು ಟ್ರಿಗರ್ ಮೇಲಿದೆ’ ಎಂದ ಇರಾನ್! | Iran US conflict updates | Iran To Trump God Willing We Will End Us Tyranny Khamenei Warning



ಟ್ರಂಪ್ ಬೆದರಿಕೆಗೆ ಜಗ್ಗದ ಖಮೇನಿ:’ನಮ್ಮ ಬೆರಳು ಟ್ರಿಗರ್ ಮೇಲಿದೆ’ ಎಂದ ಇರಾನ್! | Iran US conflict updates | Iran To Trump God Willing We Will End Us Tyranny Khamenei Warning

ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಗಳಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ. ಅಮೆರಿಕ ದಾಳಿ ನಡೆಸಿದರೆ ಅದು ಪ್ರಾದೇಶಿಕ ಯುದ್ಧಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದು, ಇರಾನ್ ಸೇನೆಯು ಯಾವುದೇ ಪರಿಸ್ಥಿತಿ  ಎದುರಿಸಲು ಸನ್ನದ್ಧ!.

ಟೆಹ್ರಾನ್ (ಫೆ.1): ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ದಟ್ಟವಾಗುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರಣಿ ಬೆದರಿಕೆಗಳಿಗೆ ಇಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಪ್ರಬಲ ಪ್ರತ್ಯುತ್ತರ ನೀಡಿದ್ದಾರೆ. ‘ಅಲ್ಲಾಹ ಬಯಸಿದರೆ ನಾವು ಅಮೆರಿಕದ ಕಿಡಿಗೇಡಿತನ ಮತ್ತು ದಬ್ಬಾಳಿಕೆಯನ್ನು ಕೊನೆಗೊಳಿಸುತ್ತೇವೆ’ ಎಂದು ಗುಡುಗಿರುವ ಖಮೇನಿ, ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರೆ ಅದು ಕೇವಲ ಎರಡು ದೇಶಗಳ ನಡುವಿನ ಸಂಘರ್ಷವಾಗಿ ಉಳಿಯುವುದಿಲ್ಲ, ಬದಲಿಗೆ ಇಡೀ ಪ್ರಾದೇಶಿಕ ಯುದ್ಧಕ್ಕೆ ನಾಂದಿ ಹಾಡಲಿದೆ ಎಂದು ಎಚ್ಚರಿಸಿದ್ದಾರೆ.

ಟ್ರಂಪ್ ಅವರ ‘ಮಾತುಕತೆ ಮತ್ತು ಬೆದರಿಕೆ’ ತಂತ್ರಕ್ಕೆ ಇರಾನ್ ತಿರುಗೇಟು

ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದರೂ, ಮತ್ತೊಂದೆಡೆ ಇರಾನ್ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡುತ್ತಿದ್ದಾರೆ. ಈ ಇಬ್ಬಂದಿ ನೀತಿಗೆ ಪ್ರತಿಕ್ರಿಯಿಸಿದ ಇರಾನ್, ‘ನಾವು ಯುದ್ಧ ಪ್ರಚೋದಕರಲ್ಲ ಅಥವಾ ಅತಿಕ್ರಮಣಕಾರರಲ್ಲ. ಆದರೆ ಇರಾನ್ ಮೇಲೆ ದಾಳಿ ಮಾಡಲ ಬರುವವರಿಗೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡುವುದಂತೂ ಖಚಿತ. ಈ ಬಾರಿ ಯುದ್ಧ ಆರಂಭವಾದರೆ ಅದು ಸುಲಭವಾಗಿ ಕೊನೆಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

‘ನಮ್ಮ ಬೆರಳು ಟ್ರಿಗರ್ ಮೇಲಿದೆ’: ಸನ್ನದ್ಧ ಸ್ಥಿತಿಯಲ್ಲಿ ಇರಾನ್ ಸೇನೆ

ಕಳೆದ 24 ಗಂಟೆಗಳಲ್ಲಿ ಇರಾನ್‌ನಾದ್ಯಂತ ಸೇನಾ ಚಟುವಟಿಕೆಗಳು ಹೆಚ್ಚುತ್ತಿವೆ. ಈ ಕುರಿತು ರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥ ಅಮೀರ್ ಹತಾಮಿ, ‘ಶತ್ರುಗಳ ಪ್ರತಿಯೊಂದು ಚಲನವಲನದ ಮೇಲೆ ನಾವು ಹದ್ದಿನ ಕಣ್ಣಿಟ್ಟಿದ್ದೇವೆ. ನಮ್ಮ ಸೇನೆಯ ಬೆರಳು ಈಗ ಟ್ರಿಗರ್ ಮೇಲಿದೆ. ಅಮೆರಿಕ ಏನಾದರೂ ತಪ್ಪು ಹೆಜ್ಜೆ ಇಟ್ಟರೆ, ಅದು ಕೇವಲ ಅಮೆರಿಕಕ್ಕೆ ಮಾತ್ರವಲ್ಲ, ಇಡೀ ಪ್ರಾದೇಶಿಕ ಭದ್ರತೆ ಹಾಗೂ ಇಸ್ರೇಲ್‌ನ ಅಸ್ತಿತ್ವಕ್ಕೆ ಆಪತ್ತು ತರಲಿದೆ’ ಎಂದು ಪರೋಕ್ಷವಾಗಿ ಇಸ್ರೇಲ್ ಮೇಲಿನ ದಾಳಿಯ ಸುಳಿವು ನೀಡಿದ್ದಾರೆ.

Scroll to load tweet…

ಜಾಗತಿಕ ಮಟ್ಟದಲ್ಲಿ ಹೆಚ್ಚಿದ ಆತಂಕ

ಕಳೆದ 12 ಗಂಟೆಗಳಲ್ಲಿ ಖಮೇನಿ ನೀಡುತ್ತಿರುವ ಎರಡನೇ ಎಚ್ಚರಿಕೆ ಇದಾಗಿದ್ದು, ಇದು ಅಮೆರಿಕದ ಮಿಲಿಟರಿ ತಂತ್ರಗಾರಿಕೆಗೆ ಸವಾಲಾಗಿದೆ. ಇರಾನ್‌ನ ಈ ಆಕ್ರಮಣಕಾರಿ ನಿಲುವು ತೈಲ ಮಾರುಕಟ್ಟೆ ಹಾಗೂ ಅಂತರರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಸಂಚಲನ ಮೂಡಿಸಿದ್ದು, ಜಾಗತಿಕ ಸಮುದಾಯವು ಉದ್ವಿಗ್ನತೆ ಶಮನಕ್ಕೆ ಮನವಿ ಮಾಡುತ್ತಿದೆ. ಆದರೆ ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಈ ಶೀತಲ ಸಮರ ಈಗ ಸ್ಫೋಟಕ ಹಂತ ತಲುಪಿದೆ.



Source link

Leave a Reply

Your email address will not be published. Required fields are marked *