
ಈ ದಿನ ಮನೆಯಿಂದ ಹೊರಡುವ ಮುನ್ನ ಶಿವಾಷ್ಟಕವನ್ನು ಕೇಳಿಸಿಕೊಳ್ಳಿ. ಅದಕ್ಕೆ ಮುಂಚೆ ಈಶ್ವರನ ಪಟದ ಮುಂದೆ ದೀಪವನ್ನು ಹಚ್ಚಿಟ್ಟು, ಇದನ್ನು ಕೇಳಿಸಿಕೊಳ್ಳಿ. ಇನ್ನು ಮನೆಯಿಂದ ಹೊರಡುವ ವೇಳೆಗೆ ಹಸಿ ಹಾಲಿಗೆ (ಬಿಸಿ ಮಾಡಬಾರದು) ಸ್ವಲ್ಪ ಸಕ್ಕರೆ ಮತ್ತು ಅರಿಶಿನ ಹಾಕಿಕೊಂಡು, ಕುಡಿದು ಆ ನಂತರ ಹೊರಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಹಲವು ಶುಭ ಫಲಗಳು ಅನುಭವ ಬರಲಿವೆ. ದೈವಿಕವಾದ ಅನುಗ್ರಹ ನಿಮ್ಮ ಮೇಲಿದೆ ಎಂಬ ಭಾವನೆ ಗಟ್ಟಿಯಾಗಲಿದೆ. ಪ್ರೇಮಿಗಳಿಗೆ, ನವ ವಿವಾಹಿತರಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಅವಕಾಶ ದೊರೆಯಲಿದೆ. ನಿಮ್ಮಲ್ಲಿ ಯಾರು ಬಾಡಿಗೆ ಆದಾಯದಂಥದ್ದನ್ನು ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಅಂಥವರಿಗೆ ನಿರೀಕ್ಷೆಯಂತೆ ಇರುವ ಆಸ್ತಿಗಳು ಖರೀದಿಗೆ ದೊರೆಯಲಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ನಿಮ್ಮ ಖರ್ಚಿನ ರೀತಿಯಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ಅಳವಡಿಸಿಕೊಳ್ಳಲು ಈ ದಿನ ತೀರ್ಮಾನ ಮಾಡಲಾಗಿದೆ. ಸೈಟು ಖರೀದಿಯೋ ಅಥವಾ ಮನೆ ನಿರ್ಮಾಣವೋ ಅಥವಾ ಇರುವ ಮನೆ ನವೀಕರಣ ಮಾಡಿಸಬೇಕೋ ಇಂಥ ವಿಚಾರದ ಬಗ್ಗೆ ತಂದೆಯ ಜೊತೆ ಅಥವಾ ಪಿತೃ ಸಮಾನರಾದವರ ಜೊತೆಗೆ ಚರ್ಚೆ ನಡೆಸಲಾಗಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಉದ್ಯೋಗದಲ್ಲಿರುವ ನೀವು ಉದ್ಯೋಗದಲ್ಲಿರುವ ಸಂಸ್ಥೆಯಲ್ಲಿ ದೊಡ್ಡ ಜನರಲ್ಲಿ ಕೆಲಸ ಮಾಡಲಿದ್ದಾರೆ ಅಂತಲೋ ನೀವು ಹೂಡಿಕೆ ಮಾಡಿರುವ ರಿಯಲ್ ಎಸ್ಟೇಟ್ ಅಥವಾ ಮಾರುಕಟ್ಟೆಯ ಹಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಅಂತಲೋ ಹೀಗೆ- ಇಂಥವೇ ಮಾತುಗಳು ಕಿವಿ ಮೇಲೆ ಬೀಳುವುದರಿಂದ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ.
ಲೇಖನ- ಸ್ವಾತಿ ಎನ್.ಕೆ.