ನಿರ್ಮಲಾ ಬಜೆಟ್‌ನಲ್ಲಿ 2047ರತ್ತ ನೂರು ನೋಟ- ಇಳಿಕೆ – ಏರಿಕೆ ಯಾವುದು ?

ನಿರ್ಮಲಾ ಬಜೆಟ್‌ನಲ್ಲಿ 2047ರತ್ತ  ನೂರು ನೋಟ- ಇಳಿಕೆ – ಏರಿಕೆ ಯಾವುದು ?

ನಿರ್ಮಲಾ ಬಜೆಟ್‌ನಲ್ಲಿ 2047ರತ್ತ  ನೂರು ನೋಟ- ಇಳಿಕೆ – ಏರಿಕೆ ಯಾವುದು ?

ನವದೆಹಲಿ :   ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭಾನುವಾರ ಮಂಡಿಸಿದ ಬಜೆಟ್‌ನ ಒಟ್ಟು ಗಾತ್ರ 53.47 ಲಕ್ಷ ಕೋಟಿ. ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಬಜೆಟ್‌ನ ಗಾತ್ರ ₹50 ಲಕ್ಷ ಕೋಟಿ ಬೃಹತ್‌ ಗಡಿಯನ್ನು ದಾಟಿದಂತಾಗಿದೆ.

2024-25ರ ಬಜೆಟ್‌ನ ಗಾತ್ರ 46.52 ಲಕ್ಷ ಕೋಟಿ ರು.ನಷ್ಟಿತ್ತು. ಬಳಿಕ ವರ್ಷಾಂತ್ಯದಲ್ಲಿ ವೆಚ್ಚ ಹೆಚ್ಚಿದ ಕಾರಣ ಬಜೆಟ್‌ನ ಗಾತ್ರ 50 ಲಕ್ಷ ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪರಿಷ್ಕೃತ ಅಂದಾಜಿನಲ್ಲಿ ಕಳೆದ ವರ್ಷದ ಬಜೆಟ್‌ ಗಾತ್ರ 49.64 ಲಕ್ಷ ಕೋಟಿ ರು.ಗೆ ಸೀಮಿತವಾಗಬಹುದು ಎಂದು ಸರ್ಕಾರ ಹೇಳಿದೆ.

ಬೆಂಗಳೂರಿಗೆ ಹೈದ್ರಾಬಾದ್‌, ಚೆನ್ನೈನಿಂದ ಹೈಸ್ಪೀಡ್‌ ರೈಲು

ಬೆಂಗಳೂರು ಆರ್ಥಿಕ ವಲಯಕ್ಕೆ 5000 ಕೋಟಿ ರು. ಘೋಷಣೆ

ಫ್ಯೂಚರ್ಸ್‌ ಅಂಡ್‌ ಆಪ್ಷನ್‌ಗೆ ಷೇರುಗಳಿಗೆ ತೆರಿಗೆ ಹೊಡೆತ

ಆಯುರ್ವೇದ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಬಂಪರ್‌

ಆಯುರ್ವೇದ ಕ್ಷೇತ್ರದಲ್ಲಿ ಸಂಶೋಧನೆಗೆ ಶಕ್ತಿ ತುಂಬಲು ಮೂರು ಅಖಿಲ ಭಾರತ ಆಯುರ್ವೇದ ಮಹಾವಿದ್ಯಾಲಯಗಳ ಸ್ಥಾಪನೆ. ಉತ್ಕೃಷ್ಟ ಗುಣಮಟ್ಟದ ಪ್ರಮಾಣೀಕರಣಕ್ಕಾಗಿ ಆಯುರ್ವೇದ ಔಷಧ ಟೆಸ್ಟಿಂಗ್‌ ಲ್ಯಾಬ್‌ ಸೃಷ್ಟಿ. ಆಯುಷ್‌ ಫಾರ್ಮಸಿಗಳು ಮೇಲ್ದರ್ಜೆಗೆ. ಇದರ ಜತೆಗೆ ಆಯುಷ್‌ ಕೇಂದ್ರಗಳನ್ನು ಹೊಂದಿರುವ ಐದು ಪ್ರಾದೇಶಿಕ ಮೆಡಿಕಲ್‌ ಹಬ್‌ಗಳ ಸ್ಥಾಪನೆ. ಕೋವಿಡ್‌ ನಂತರ ಆಯುರ್ವೇದ ಕೂಡ ಯೋಗದ ರೀತಿ ಜಾಗತಿಕ ಮನ್ನಣೆ ಗಳಿಸಿದೆ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌.

ಆದಾಯ ತೆರಿಗೆದಾರರಿಗೆ ಹೊಸ ವಿನಾಯಿತಿ ಇಲ್ಲ

ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ವರ್ಷ 12 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇತ್ತು. ಈ ಬಾರಿ ಹೊಸ ತೆರಿಗೆ ಕಾಯ್ದೆ ಜಾರಿ ಬಗ್ಗೆ ಘೋಷಣೆ ಬಿಟ್ಟು, ತೆರಿಗೆ ಸ್ತರದಲ್ಲಿ ಪರಿಷ್ಕರಿಸಿಲ್ಲ

ಡೇಟಾ ಸೆಂಟರ್‌ಗಳಿಗೆ 21 ವರ್ಷ ತೆರಿಗೆ ರಜೆ

ವಿಶ್ವಕ್ಕೆ ಕ್ಲೌಡ್‌ ಸೇವೆ ಒದಗಿಸಲು ಭಾರತದಲ್ಲಿ ಡೇಟಾ ಸೆಂಟರ್‌ ತೆರೆಯುವ ವಿದೇಶಿ ಕಂಪನಿಗಳಿಗೆ ರತ್ನಗಂಬಳಿ. 2047ರವರೆಗೂ ತೆರಿಗೆ ರಜೆ ಘೋಷಣೆ. ಐಟಿಗೆ ಹೆಸರಾಗಿರುವ ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರು, ಮಂಗಳೂರಿಗೆ ಇದೆ ಅವಕಾಶ

ಚೀನಾದ ಕಂಟೇನರ್‌ ಪ್ರಾಬಲ್ಯಕ್ಕೆ ದೇಶ ಸಡ್ಡು

ಜಾಗತಿಕವಾಗಿ ಸ್ಪರ್ಧಾತ್ಮಕ ಕಂಟೇನರ್‌ ಉತ್ಪಾದನೆಗಾಗಿ ಬಜೆಟ್‌ನಲ್ಲಿ ಸ್ಕೀಂ. 5 ವರ್ಷ ಅವಧಿಗೆ 10 ಸಾವಿರ ಕೋಟಿ ರು. ಮೀಸಲು. ಸದ್ಯ ಭಾರತದಲ್ಲಿ ವರ್ಷಕ್ಕೆ 30 ಸಾವಿರ ಕಂಟೇನರ್‌ ಉತ್ಪಾದನೆ. 5 ಲಕ್ಷ ಕಂಟೇನರ್‌ ಉತ್ಪಾದಿಸುವ ಚೀನಾಕ್ಕೆ ಸಡ್ಡು ಹೊಡೆಯಲು ಪ್ಲಾನ್‌

ಅಪಘಾತ ವಿಮೆ ಬಡ್ಡಿ ಮೇಲೆ ತೆರಿಗೆ ಇಲ್ಲ

ಅಪಘಾತ ವಿಮೆ ನ್ಯಾಯಾಧಿಕರಣ ನಿರ್ಧರಿಸುವ ಪರಿಹಾರ ಮೊತ್ತದ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ. ಟಿಡಿಎಸ್‌ ಕೂಡ ಹೇರಿಕೆ ಇಲ್ಲ. ಏ.1ರಿಂದ ಹೊಸ ನಿಯಮ ಜಾರಿಗೆ

ವಿದೇಶ ಪ್ರವಾಸಕ್ಕೆ ಇನ್ನು ಕಡಿಮೆ ತೆರಿಗೆ

ಟೂರ್‌ ಪ್ಯಾಕೇಜ್‌ ಮೂಲಕ ವಿದೇಶಕ್ಕೆ ತೆರಳುವವರಿಗೆ ಇನ್ನು ಕಡಿಮೆ ತೆರಿಗೆ. ಅಂಥವರಿಗೆ ವಿಧಿಸುತ್ತಿದ್ದ ಟಿಸಿಎಸ್‌ ಮೊತ್ತ ಶೇ.5-ಶೇ.20ರಿಂದ ಈಗ ಶೇ.2ಕ್ಕೆ ಇಳಿಕೆ. ವಿದೇಶಕ್ಕೆ ಪ್ರವಾಸ ಹೋಗುವವರಿಗೆ ಇದರಿಂದ ಭಾರಿ ಅನುಕೂಲ

ರಕ್ಷಣಾ ಬಜೆಟ್‌ ಗಾತ್ರ ₹1 ಲಕ್ಷ ಕೋಟಿ ಹೆಚ್ಚಳ

ಆಪರೇಷನ್‌ ಸಿಂದೂರ ಬೆನ್ನಲ್ಲೇ ರಕ್ಷಣೆಗೆ ಭಾರತ ಒತ್ತು. ಜಾಗತಿಕ ಸಂಘರ್ಷ, ಬಾಂಗ್ಲಾದೇಶ, ನೇಪಾಳ ಸೇರಿ ದೇಶಗಳ ಅಸ್ಥಿರತೆಗಳ ನಡುವೆ ರಕ್ಷಣಾ ಬಜೆಟ್‌ ಗಾತ್ರ 7,78,978 ಲಕ್ಷ ಕೋಟಿ ರು.ಗೆ ಏರಿಕೆ. ಕಳೆದ ಸಲಕ್ಕಿಂತ 1 ಲಕ್ಷ ಕೋಟಿ ರು. ಹೆಚ್ಚಳ

ಬಜೆಟ್‌ ಬಳಿಕ ಸೆನ್ಸೆಕ್ಸ್‌ 1546 ಅಂಕ ಕುಸಿತ

ನಿರ್ಮಲಾ ಬಜೆಟ್‌ನಿಂದ ಷೇರುಪೇಟೆಗೆ ಶಾಕ್‌. ಸೆಕ್ಯುರಿಟೀಟ್‌ ಟ್ರಾನ್ಸಾಕ್ಷನ್‌ ಟ್ಯಾಕ್ಸ್‌ ಹೆಚ್ಚಳ ಸುದ್ದಿಗೆ ಬೆದರಿದ ಸೆನ್ಸೆಕ್ಸ್‌. 1546 ಅಂಕ ಕುಸಿತ. 80722ರಲ್ಲಿ ವಹಿವಾಟು ಅಂತ್ಯ. ಒಂದು ಹಂತದಲ್ಲಿ 2370 ಅಂಕ ಕುಸಿದಿದ್ದ ಸೂಚ್ಯಂಕ

53.5 ಲಕ್ಷ ಕೋಟಿ ರುಪಾಯಿ ಬಜೆಟ್‌

20250-26ರಲ್ಲಿ ಮಂಡನೆಯಾಗಿದ್ದು 50.65 ಲಕ್ಷ ಕೋಟಿ ಬಜೆಟ್‌. ಆದರೆ ಪರಿಷ್ಕೃತ ಅಂದಾಜಿನಲ್ಲಿ ಅದರ ಗಾತ್ರ 49.64 ಲಕ್ಷ ಕೋಟಿ ರು.ಗೆ ಇಳಿಕೆ. ಹೀಗಾಗಿ ಈ ಬಾರಿಯದ್ದು 50 ಲಕ್ಷ ಕೋಟಿ ರು. ಗಡಿ ದಾಟಿದ ಮೊದಲ ಬಜೆಟ್‌.

ಎಫ್‌ ಅಂಡ್‌ ಓ ಷೇರು ವಹಿವಾಟಿಗೆ ತೆರಿಗೆ ಬರೆ

ಷೇರುಪೇಟೆಯ ಫ್ಯೂಚರ್ಸ್‌ ಅಂಡ್‌ ಆಪ್ಷನ್ಸ್ ವಹಿವಾಟಿಗೆ ತೆರಿಗೆ ಬರೆ. ಫ್ಯೂಚರ್ಸ್‌ ವಹಿವಾಟಿನ ತೆರಿಗೆ ಶೇ.150, ಆಪ್ಷನ್ಸ್‌ ವಹಿವಾಟು ತೆರಿಗೆ ಶೇ.50 ಹೆಚ್ಚಳ. ಯುವಕರು ಅಪಾರ ಹಣ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿರ್ಧಾರ

17 ಕ್ಯಾನ್ಸರ್ ಔಷಧಿ ಮೇಲೆ ಸುಂಕ ರದ್ದು

17 ಕ್ಯಾನ್ಸರ್‌ ಔಷಧಗಳ ಮೇಲಿನ ಕನಿಷ್ಠ ಸೀಮಾ ಸುಂಕ ರದ್ದು. ಕೊನೆ ಹಂತದ ಕಾಯಿಲೆಯ ಚಿಕಿತ್ಸೆಗೆ ವಿದೇಶ ಮೂಲದ ದುಬಾರಿ ಔಷಧಗಳ ಮೇಲೆ ಅವಲಂಬನೆಯಾಗಿರುವ ಕ್ಯಾನ್ಸರ್‌ ರೋಗಿಗಳು ಹಾಗೂ ಅವರ ಆರೈಕೆದಾರರಿಗೆ ಹಣ ಉಳಿತಾಯ

ರಹಸ್ಯ ವಿದೇಶಿ ಆಸ್ತಿ ಘೋಷಣೆಗೆ ಚಾನ್ಸ್‌

ವಿದೇಶಿ ಆದಾಯ ಬರುತ್ತಿದ್ದರೂ ಅಥವಾ ಅಲ್ಲಿ ಆಸ್ತಿ ಮಾಡಿದ್ದರೂ ತೆರಿಗೆ ಇಲಾಖೆಗೆ ತಿಳಿಸದವರಿಗೆ ಸ್ವಯಂ ಘೋಷಿಸಿಕೊಂಡು ತೆರಿಗೆ ವಿಚಾರಣೆಯಿಂದ ಬಚಾವಾಗಲು ಅವಕಾಶ. ಇದಕ್ಕೆ ಆರು ತಿಂಗಳ ಟೈಮ್‌.

ಕೇಂದ್ರದಿಂದ ಗಾಂಧಿ ಹೆಸರಿನ ಹೊಸ ಯೋಜನೆ

ನರೇಗಾದಿಂದ ಗಾಂಧಿ ಹೆಸರು ಕೈಬಿಟ್ಟಿದ್ದನ್ನು ಕಾಂಗ್ರೆಸ್ ವಿವಾದವಾಗಿಸಿದ ಬೆನ್ನಲ್ಲೇ ಕೇಂದ್ರದಿಂದ ಗಾಂಧಿ ಹೆಸರಿನ ಯೋಜನೆ ಘೋಷಣೆ. ಖಾದಿ, ಕೈಮಗ್ಗ, ಕರಕುಶಲ ವಸ್ತುಗಳಿಗೆ ಶಕ್ತಿ ತುಂಬಲು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್‌ ಹೆಸರಲ್ಲಿ ಕಾರ್ಯಕ್ರಮ

ಕರ್ನಾಟಕಕ್ಕೆ ಸಿಕ್ಕಿದ್ದೇನು?

1. ಬೆಂಗಳೂರಿಗೆ 2 ಹೈಸ್ಪೀಡ್‌ ರೈಲು

ದೇಶದಲ್ಲಿ 7 ಹೈಸ್ಪೀಡ್‌ ರೈಲು ಕಾರಿಡಾರ್‌ ನಿರ್ಮಾಣ. ಪರಿಸರ, ಸುಸ್ಥಿರ ಪ್ರಯಾಣಿಕ ವ್ಯವಸ್ಥೆ ಉತ್ತೇಜನಕ್ಕೆ ಹೈದರಾಬಾದ್- ಬೆಂಗಳೂರು ಹಾಗೂ ಚೆನ್ನೈ- ಬೆಂಗಳೂರು ಮಾರ್ಗದಲ್ಲೂ ತಲೆ ಎತ್ತಲಿದೆ ಈ ರೈಲು ಕಾರಿಡಾರ್‌

2. ಬೆಂಗಳೂರಿಗೆ 5000 ಕೋಟಿ ರು.

ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪ್ರಮುಖ ನಗರಗಳ ಅಭಿವೃದ್ಧಿ. ಇದಕ್ಕಾಗಿ ನಗರ ಆರ್ಥಿಕ ವಲಯ ಯೋಜನೆ. ದೇಶದ ಐಟಿ ರಾಜಧಾನಿ ಬೆಂಗಳೂರು ಕೂಡ ಸೇರ್ಪಡೆ. ಐದು ವರ್ಷದಲ್ಲಿ 5000 ಕೋಟಿ ರು. ಹಂಚಿಕೆ

3. ತೆಂಗು, ರೇಷ್ಮೆ, ಶ್ರೀಗಂಧಕ್ಕೆ ಒತ್ತು

ತೆಂಗು, ಶ್ರೀಗಂಧ, ರೇಷ್ಮೆ ಬೆಳೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನದಲ್ಲಿದೆ. ಗೋಡಂಬಿ ಉತ್ಪಾದನೆಯಲ್ಲಿ ಟಾಪ್‌ 5ರಲ್ಲಿದೆ. ಈ ಬೆಳೆಗಳನ್ನು ಗಮನದಲ್ಲಿರಿಸಿಕೊಂಡು ರೇಷ್ಮೆಗೆ ರಾಷ್ಟ್ರೀಯ ಫೈಬರ್‌ ಸ್ಕೀಂ, ಫಲ ಬಿಡದ ತೆಂಗು ತೆಗೆದು ಹೊಸ ಸಸಿ ನೆಡಲು ನೆರವು, ಶ್ರೀಗಂಧ ವೈಭವ ಮರಳಿಸಲು ಕ್ರಮ, ಗೋಡಂಬಿಯನ್ನು ಪ್ರತಿಷ್ಠಿತ ಜಾಗತಿಕ ಬ್ರ್ಯಾಂಡ್‌ ಮಾಡಲು ಒತ್ತು ನೀಡುವುದಾಗಿ ಘೋಷಣೆ

4. ಕರ್ನಾಟಕದ ಆಮೆ ಪಥ ಅಭಿವೃದ್ಧಿ

ಕರ್ನಾಟಕ, ಒಡಿಶಾ, ಕೇರಳದಲ್ಲಿರುವ ಪ್ರಮುಖ ಆಮೆಗಳ ಸಂತಾನೋತ್ಪತ್ತಿ ನೆಲೆ ಮತ್ತು ಆಮೆಗಳ ಪಥವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮಂಗಳೂರಿನಿಂದ ಹೊನ್ನಾವರದವರೆಗೆ ಕರ್ನಾಟಕ ಕರಾವಳಿಯು ಅಪರೂಪದ ಆಮೆಗಳ ಸಂತತಿಯ ಆವಾಸಸ್ಥಾನವಾಗಿದೆ

ಇಳಿಕೆ

* ಸ್ಮಾರ್ಟ್‌ಫೋನ್‌, ಚಾರ್ಜರ್‌

* ಮೈಕ್ರೋವೇವ್ ಓವನ್‌

* ಪಾದರಕ್ಷೆ ಮತ್ತು ಚರ್ಮದ ಉತ್ಪನ್ನ

* ವಿದೇಶಿ ಶಿಕ್ಷಣ

* ಫಾರಿನ್‌ ಟೂರ್‌

* ಕ್ಯಾನ್ಸರ್, ಮಧುಮೇಹ ಔಷಧ

* ಸೀಫುಡ್‌

* ಕ್ಯಾಮೆರಾ

* ಟಿವಿ ಉಪಕರಣ

* ಕ್ರೀಡಾ ಸಾಮಗ್ರಿ

* ಲೀಥಿಯಂ ಬ್ಯಾಟರಿಗಳು

* ಸೌರಶಕ್ತಿ ಸಾಧನ

ಏರಿಕೆ?

* ಮದ್ಯ

*ಸಿಗರೆಟ್ ಮತ್ತು ಇತರ ತಂಬಾಕು ಉತ್ಪನ್ನ

* ಕಾಫಿ ಮತ್ತು ಮಾರಾಟ ಯಂತ್ರ

* ಐಷಾರಾಮಿ ಕೈಗಡಿಯಾರ

3. ಐದೇ ತಿಂಗಳಿನಲ್ಲಿ

350 ಸುಧಾರಣೆ ಜಾರಿ

ಉದ್ಯೋಗ ಸೃಷ್ಟಿ, ಉತ್ಪಾದಕತೆ ಹೆಚ್ಚಳ, ಪ್ರಗತಿಗೆ ವೇಗ ನೀಡಲು ಕೇಂದ್ರದಿಂದ ಸಮಗ್ರ ಸುಧಾರಣೆ. 2025ರ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಭಾಷಣದ ಬಳಿಕ 350 ಸುಧಾರಣೆಗಳು ಜಾರಿ

ಔಷಧ ಹಬ್‌ ಮಾಡಲು

ಬಯೋಫಾರ್ಮಾ ಶಕ್ತಿ

ಭಾರತವನ್ನು ಜಾಗತಿಕ ಬಯೋಫಾರ್ಮಾ ಉತ್ಪಾದನಾ ಹಬ್‌ ಆಗಿ ಅಭಿವೃದ್ಧಿಪಡಿಸಲು ‘ಬಯೋಫಾರ್ಮಾ ಶಕ್ತಿ’ ಯೋಜನೆ. ಮುಂದಿನ ಐದು ವರ್ಷಗಳಲ್ಲಿ ಇದಕ್ಕಾಗಿ 10 ಸಾವಿರ ಕೋಟಿ ರು. ಮೀಸಲು

60 ವರ್ಷ ಬಳಿಕ ಹೊಸ ತೆರಿಗೆ ಕಾಯ್ದೆ ಏ.1ರಿಂದ

1961ರ ಆದಾಯ ತೆರಿಗೆ ಕಾಯ್ದೆ ಇತಿಹಾಸದ ಪುಟಕ್ಕೆ. ಅತ್ಯಂತ ಸರಳ ತೆರಿಗೆ ನಿಯಮ ಹೊಂದಿರುವ ಹೊಸ ಆದಾಯ ತೆರಿಗೆ ಕಾಯ್ದೆ ಏ.1ರಿಂದ ಜಾರಿ. ಅತ್ಯಂತ ಸುಲಭ ತೆರಿಗೆ ರಿಟರ್ನ್‌ ಫಾರ್ಮ್‌ಗಳು ಶೀಘ್ರದಲ್ಲೇ ಬಿಡುಗಡೆ.

ಎನ್‌ಆರ್‌ಐಗಳ ಆಸ್ತಿ ಕೊಳ್ಳಲು ಟ್ಯಾನ್‌ ಬೇಡ

ಅನಿವಾಸಿ ಭಾರತೀಯರ ಆಸ್ತಿಯನ್ನು ಭಾರತೀಯರು ಖರೀದಿಸಲು ಇನ್ನು ಪರದಾಟವಿಲ್ಲ. ‘ಟ್ಯಾನ್‌’ ಬದಲಿಗೆ ‘ಪ್ಯಾನ್‌’ ಸಂಖ್ಯೆ ನೀಡಿ ತೆರಿಗೆ ಪಾವತಿಸಲು ಅವಕಾಶ. ಅ.1ರಿಂದಲೇ ಹೊಸ ನಿಯಮ ಜಾರಿಗೆ.

ಪರಿಷ್ಕೃತ ರಿಟರ್ನ್‌ಗೆ 3 ತಿಂಗಳು ಅವಕಾಶ

ಪರಿಷ್ಕೃತ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಮಾಡಲು ಸದ್ಯ ಡಿಸೆಂಬರ್‌ 31ರವರೆಗೆ ಅವಕಾಶವಿದೆ. ಒಂದಷ್ಟು ಶುಲ್ಕ ಪಾವತಿಸುವ ಮೂಲಕ ಮಾರ್ಚ್‌ 31ರವರೆಗೂ ಇನ್ನು ಪರಿಷ್ಕೃತ ತೆರಿಗೆ ರಿಟರ್ನ್‌ ಸಲ್ಲಿಕೆ ಮಾಡಬಹುದು

ಟ್ರಂಪ್‌ ತೆರಿಗೆ ದಾಳಿಗೆ ಭಾರತದ ಪ್ರತಿ ತಂತ್ರ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತೆರಿಗೆ ದಾಳಿಯಿಂದ ಭಾರತೀಯ ಉದ್ಯಮಿ ರಕ್ಷಿಸಲು ಬಜೆಟ್‌ನಲ್ಲಿ ಒತ್ತು. ಸೆಮಿಕಂಡಕ್ಟರ್‌, ಬಯೋಫಾರ್ಮಾ, ಜವಳಿ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ), ನಗರಾಭಿವೃದ್ಧಿಗೆ ಕ್ರಮ

ಕೈಗಾರಿಕಾ ಕಾರಿಡಾರ್‌ ಪಕ್ಕ 5 ವಿವಿ ಟೌನ್‌ಶಿಪ್‌

ಬೃಹತ್‌ ಕೈಗಾರಿಕಾ ಹಾಗೂ ಸರಕು ಸಾಗಣೆ ಕಾರಿಡಾರ್‌ ಬಳಿ ಐದು ವಿಶ್ವವಿದ್ಯಾಲಯ ಟೌನ್‌ಶಿಪ್‌ ಸ್ಥಾಪನೆಗೆ ರಾಜ್ಯಗಳಿಗೆ ನೆರವು. ಇದರಲ್ಲಿ ಕಾಲೇಜು, ಸಂಶೋಧನಾ ಕೇಂದ್ರ, ಕೌಶಲ್ಯಾಭಿವೃದ್ಧಿ ಕೇಂದ್ರ ಹಾಗೂ ವಸತಿ ಸೌಕರ್ಯ ಕೂಡ ಲಭ್ಯ

ದೇಶದ ಎಲ್ಲ ಜಿಲ್ಲೆಯಲ್ಲಿ ಬಾಲಕಿಯರ ಹಾಸ್ಟೆಲ್‌

ದೇಶದ ಪ್ರತಿ ಜಿಲ್ಲೆಯಲ್ಲೂ ಒಂದು ಬಾಲಕಿಯರ ಹಾಸ್ಟೆಲ್‌ ಸ್ಥಾಪನೆ. ದೀರ್ಘಾವಧಿ ಅಧ್ಯಯನ ಹಾಗೂ ಪ್ರಯೋಗಾಲಯ ಅವಧಿಯಿಂದ ಬಾಲಕಿಯರಿಗೆ ಎದುರಾಗುವ ಸವಾಲು ಇದರಿಂದ ನಿವಾರಣೆ. ದೇಶದಲ್ಲಿ 700 ಜಿಲ್ಲೆ. ಹೀಗಾಗಿ 700 ಹಾಸ್ಟೆಲ್‌ ನಿರ್ಮಾಣ

ಯುವಶಕ್ತಿ ಚಾಲಿತ ಬಜೆಟಲ್ಲಿ 3 ಕರ್ತವ್ಯ

ತಮ್ಮದು ಯುವಶಕ್ತಿಚಾಲಿತ ವಿಶಿಷ್ಟ ಬಜೆಟ್‌ ಎಂದು ನಿರ್ಮಲಾ ಬಣ್ಣನೆ. ಕರ್ತವ್ಯ ಭವನದಲ್ಲಿ ತಯಾರಾದ ಮೊದಲ ಬಜೆಟ್‌ನಲ್ಲಿ 3 ಕರ್ತವ್ಯಗಳ ಕುರಿತು ಉಲ್ಲೇಖ

Source link

Leave a Reply

Your email address will not be published. Required fields are marked *