‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ (ಗಿಲ್ಲಿ ನಾಟಾ) ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಾಗಿ ಬೆಳೆದಿದೆ. ಅವರ ಫೋಟೋನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡವರೂ ಇದ್ದಾರೆ. ಈಗ ಅದೇ ವ್ಯಕ್ತಿ ಗಿಲ್ಲಿ ನಟನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ. ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದಾರೆ, ವಾಗ್ದಾಳಿ ಮುಂದುವರಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಸಾಕಷ್ಟು ಹಾಸ್ಯ ಮಾಡಿದರು. ಅಗತ್ಯ ಇದ್ದಾಗ ತಿರುಗೇಟು. ಇದರಿಂದ ಅವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಪ್ರತಿ ಬಾರಿ ಬಿಗ್ ಬಾಸ್ ಶುರುವಾದಾಗಲೂ ಸ್ಪರ್ಧಿಗೆ ಸಾಕಷ್ಟು ಫ್ಯಾನ್ಸ್ ಸಿಗೋದು ಸಾಮಾನ್ಯ. ಆದರೆ, ಗಿಲ್ಲಿಗೆ ಸಿಕ್ಕಷ್ಟು ದೊಡ್ಡ ಅಭಿಮಾನಿ ಬಳಗ ಇನ್ಯಾರಿಗೂ ಸಿಕ್ಕಿರಲಿಲ್ಲ. ಆದರೆ, ಅಭಿಮಾನಿಗಳನ್ನು ಗಿಲ್ಲಿ ಗೌರವಿಸುತ್ತಿಲ್ಲ ಎಂಬುದು ಅಭಿಮಾನಿಗಳ ಆರೋಪ.
ಬಾಸ್ ಟಿವಿ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರೋ ಟ್ಯಾಟೂ ಅಭಿಮಾನಿ, ‘ಅವರಲ್ಲಿ ಟ್ಯಾಲೆಂಟ್ ಇತ್ತು. ಅದನ್ನು ನಾವು ಹೊರಗೆ ತಂದಿದ್ದೀವಿ. ಅವರು ಅಭಿಮಾನಿಗಳನ್ನು ಭೇಟಿ ಮಾಡಬೇಕಿತ್ತು, ಮಾಡುತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿದ್ದಾಗ ನನ್ನನ್ನು ಹೊರ ಹೋದ ತಕ್ಷಣ ಭೇಟಿ ಮಾಡ್ತೀನಿ ಎಂದಿದ್ರು, ಆದರೆ ಭೇಟಿ ಮಾಡಿಲ್ಲ’ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ; ಶಾಕ್ ಆದ ಆಯಂಕರ್
ಗಿಲ್ಲಿ ನಟ ಅವರು ಇನ್ಸ್ಟಾಗ್ರಾಮ್ನಲ್ಲಿ 20 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿ ವರ್ಗ ಸಿಕ್ಕಿದ್ದು ಇದೇ ಮೊದಲು. ಆದರೆ, ಈಗ ಅವರಿಗೆ ಅಭಿಮಾನವೇ ಮುಳವಾಯಿತೇ ಎಂಬ ಪ್ರಶ್ನೆ ಮೂಡಿದೆ. ಕೆಲ ನಿಜವಾದ ಫ್ಯಾನ್ಸ್, ‘ನಿನ್ನನ್ನು ಗಿಲ್ಲಿ ಭೇಟಿ ಮಾಡಲೇಬಾರದು’ ವಾತಾವರಣ. ಗಿಲ್ಲಿ ಅವರು ಸದ್ಯ ನಿರ್ದೇಶನ ಮಾಡುವ ಸೂಚನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.