ಯಾವುದೇ ಆದರೂ ಅದು ಅತಿಯಾದರೆ ವಿಷವೇ. ಅದರಲ್ಲೂ ಅಭಿಮಾನ ಅತಿಯಾದರೆ ಅದು ಕಾರ್ಕೋಟಕ ವಿಷವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಸಿಕ್ಕಿದೆ. ಗಿಲ್ಲಿಗೆ (ಗಿಲ್ಲಿ ನಾಟಾ) ಉಘೇ ಉಘೇ ಎಂದು, ಅದಕ್ಕೆ ಪ್ರತಿಯಾಗಿ ಏನೂ ಸಿಕ್ಕಿಲ್ಲ ಎಂದಾಗ ಅವರ ವಿರುದ್ಧವೇ ಅಪಪ್ರಚಾರ ಮಾಡುವ ಕೆಲಸ ಆಗುತ್ತಿದೆ. ಅಭಿಮಾನ ಅತಿಯಾದರೆ ಏನಾಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಿದೆ.
ಗಿಲ್ಲಿ ನಟ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್. ಈ ಶೋನಲ್ಲಿ ಅವರಿಗೆ ದೊಡ್ಡ ಅಭಿಮಾನ ಬಳಗ ಸೃಷ್ಟಿಯಾಯಿತು. ಗಿಲ್ಲಿ ಮೇಲೆ ಜನರು ಎಷ್ಟು ಪ್ರೀತಿ ತೋರಿದರು ಎಂದರೆ ಕೆಲವರು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. ಈ ರೀತಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಗಿಲ್ಲಿಯಿಂದ ಬೆಟ್ಟದಷ್ಟು ನಿರೀಕ್ಷೆ ಇದೆ.
ಬಿಗ್ ಬಾಸ್ ಮನೆಗೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಬಂದಿದ್ದರು. ಈ ವೇಳೆ ಮಾತನಾಡಿದ್ದ ಗಿಲ್ಲಿ, ‘ಬಿಗ್ ಬಾಸ್’ ಮನೆಯಿಂದ ಹೊರ ಹೋದ ಬಳಿಕ ಆ ವ್ಯಕ್ತಿಯನ್ನು ಭೇಟಿ ಮಾಡುತ್ತೇನೆ ಎಂದಿದ್ದರು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಗಿಲ್ಲಿ ವಿವಿಧ ಕಾರ್ಯಕ್ರಮಗಳಿಗೆ, ಶೂಟಿಂಗ್ ಗೆ ತೆರಳುತ್ತಿದ್ದಾರೆ. ಈ ಕಾರಣದಿಂದ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಇದೆಲ್ಲವನ್ನೂ ಟ್ಯಾಟೂ ಅಭಿಮಾನಿ ಖಂಡಿಸಿದ್ದಾರೆ.
‘ಗಿಲ್ಲಿ ಭೇಟಿ ಮಾಡ್ತೀನಿ ಎಂದು ಹೇಳಿ ಭೇಟಿ ಮಾಡ್ತಿಲ್ಲ. ಇವರಿಗೋಸ್ಕರ ದೇವಸ್ಥಾನಕ್ಕೆ ಹೋಗಿ ಪ್ರಸಾದ ತೆಗೆದುಕೊಂಡೆವು. ಅವರ ಅಣ್ಣನಿಗೆ ಕರೆ ಮಾಡಿ, ಗಿಲ್ಲಿಗೆ ಪ್ರಸಾದ ಕೊಡಬೇಕು ಎಂದು ಹೇಳಿದೆ. ಆದರೆ, ಭೇಟಿಗೆ ಅವಕಾಶ ಸಿಗಲಿಲ್ಲ. ಗಿಲ್ಲಿ ದುಡ್ಡಿರೋ ವ್ಯಕ್ತಿಯನ್ನು ಮಾತ್ರ ಭೇಟಿ ಮಾಡುತ್ತಿದ್ದಾರೆ. ನಮ್ಮಂತಹ ಫ್ಯಾನ್ಸ್ ಅವರು ಭೇಟಿ ಮಾಡುತ್ತಿಲ್ಲ’ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಗಿಲ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ ಅಭಿಮಾನಿ
ಸದ್ಯ ಗಿಲ್ಲಿಗೆ ಸಿಕ್ಕಿರೋ ಅತಿಯಾದ ಅಭಿಮಾನವೇ ಅವರಿಗೆ ಮುಳುವಾಗುವ ಸೂಚನೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಗಿಲ್ಲಿ ಅವರನ್ನು ಭೇಟಿ ಮಾಡಬಹುದು ಅಥವಾ ಮಾಡದೇ ಇರಬಹುದು. ಆದರೆ, ಈ ರೀತಿ ಎಲ್ಲಾ ಅಭಿಮಾನಿಗಳು ನಾವು ಬೆಂಬಲ ನೀಡಿದ್ದೆವು, ಆದರೂ ಭೇಟಿಗೆ ಬಂದಿಲ್ಲ ಎಂದೆಲ್ಲ ಹೇಳಿದರೆ ಅದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.