IND vs PAK: ಪಾಕಿಸ್ತಾನದ ಬಹಿಷ್ಕಾರದಿಂದ ಭಾರತಕ್ಕೆ ಸಿಗುವ ಅಂಕ ಎಷ್ಟು?

IND vs PAK: ಪಾಕಿಸ್ತಾನದ ಬಹಿಷ್ಕಾರದಿಂದ ಭಾರತಕ್ಕೆ ಸಿಗುವ ಅಂಕ ಎಷ್ಟು?


ಟಿ20 ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಅದರಂತೆ ಫೆಬ್ರವರಿ 15 ರಂದು ನಡೆಯಬೇಕಿರುವ ಭಾರತ ಮತ್ತು ಪಾಕಿಸ್ತಾನ್ ಪಂದ್ಯವು ನಡೆಯಲಿದೆ ಅನುಮಾನ. ಒಂದು ವೇಳೆ ಪಂದ್ಯ ನಡೆಯದೇ ಇದ್ದರೆ ಭಾರತಕ್ಕೆ ಸಿಗುವ ಅಂಕ ಎಷ್ಟು ಎಂಬ ಪ್ರಶ್ನೆ ಮೂಡುವುದು ಸಹಜ.

ಸಾಮಾನ್ಯವಾಗಿ ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ 2 ಅಂಕಗಳನ್ನು ಹಂಚಿಕೊಳ್ಳುತ್ತವೆ. ಇದೀಗ ಪಾಕಿಸ್ತಾನ್ ಪಂದ್ಯವನ್ನು ಬಹಿಷ್ಕರಿಸುವುದರಿಂದ ಅಂಕಗಳನ್ನು ಹಂಚಿಕೊಳ್ಳಲು ಆಯ್ಕೆಯೇ ಎಂಬುದೇ ಪ್ರಶ್ನೆ.

ಈ ಪ್ರಶ್ನೆಗೆ ಉತ್ತರ ಇಲ್ಲ. ಪಾಕಿಸ್ತಾನ ತಂಡವು ಪಂದ್ಯವನ್ನು ಬಾಯ್ಕಾಟ್ ಮಾಡುತ್ತಿರುವುದರಿಂದ ಅವರಿಗೆ ಯಾವುದೇ ಅಂಕ ಸಿಗುವುದಿಲ್ಲ. ಇತ್ತ ಟೀಮ್ ಇಂಡಿಯಾ ಪಂದ್ಯವಾಡಲು ಸಿದ್ಧವಾಗಿರುವುದರಿಂದ ಸಂಪೂರ್ಣ ಅಂಕಗಳನ್ನು ಪಡೆಯಲಿದೆ.

ಅಂದರೆ ಗೆಲುವಿಗೆ ನೀಡಲಾಗುವ ಸಂಪೂರ್ಣ ಅಂಕವನ್ನು ಟೀಮ್ ಇಂಡಿಯಾ ಪಡೆಯಲಿದೆ. ಟಿ20 ನಲ್ಲಿ ಒಂದು ಗೆಲುವಿಗೆ 2 ಅಂಕಗಳು ಬೇಕಾಗಿವೆ. ಅಂದರಂತೆ ಪಾಕಿಸ್ತಾನ್ ತಂಡವು ಪಂದ್ಯವನ್ನು ಬಹಿಷ್ಕರಿಸಿದರೆ ಟೀಮ್ ಇಂಡಿಯಾ 2 ಅಂಕಗಳನ್ನು ಪಡೆಯಲಿದೆ.

ಅತ್ತ ಪಂದ್ಯದಿಂದ ಹಿಂದೆ ಸರಿಯುವ ಕಾರಣ ಪಾಕಿಸ್ತಾನ್ ತಂಡಕ್ಕೆ ಯಾವುದೇ ಅಂಕ ಸಿಗುವುದಿಲ್ಲ. ಇದರಿಂದ ಪಾಕಿಸ್ತಾನ್ ತಂಡ ನೆಟ್ ರನ್ ರೇಟ್ ಮೇಲೆ ನೇರ ಪರಿಣಾಮ ಬೀರಲಿದೆ.

ಪಾಕಿಸ್ತಾನ್ ಪಂದ್ಯವನ್ನು ಬಹಿಷ್ಕರಿಸುತ್ತಿರುವುದೇಕೆ?

ಟಿ20 ನಿಂದ ಬಾಂಗ್ಲಾದೇಶ ತಂಡವನ್ನು ಕೈ ಬಿಟ್ಟಿರುವುದನ್ನು ಖಂಡಿಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬಾಂಗ್ಲಾದೇಶ ತಂಡದ ಪಂದ್ಯಗಳನ್ನು ಭಾರತದಿಂದ ಶ್ರೀಂಕಾಗೆ ಸ್ಥಳಾಂತರ ಮಾಡಲು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಸೇರಿತ್ತು.

ಆದರೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಈ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು. ಜೊತೆಗೆ ಬಾಂಗ್ಲಾ ತಂಡವು ಭಾರತದಲ್ಲೇ ಆಡಬೇಕೆಂದು ಸೂಚಿಸಿದ್ದರು. ಐಸಿಸಿಯ ಸೂಚನೆಯನ್ನು ತಿರಸ್ಕರಿಸಲಾಗಿದೆ ಬಾಂಗ್ಲಾದೇಶ್ ತಂಡವನ್ನು ಟಿ20 ಈ ಸೂಚನೆಯಿಂದ ಕೈ ಬಿಡಲಾಯಿತು.

ಇತ್ತ ಬಾಂಗ್ಲಾದೇಶ ತಂಡವನ್ನು ಕೈ ಬಿಟ್ಟಿರುವ ಐಸಿಸಿ ಹಾಗೂ ಬಿಸಿಸಿಐ ಕ್ರಮವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಖಂಡಿಸಿದೆ. ಇದೇ ಕಾರಣಕ್ಕೆ ಭಾರತದ ವಿರುದ್ಧ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಫೈನಲ್‌ನಲ್ಲಿ RCB ತಂಡದ ಎದುರಾಳಿ ಯಾರು?

ಹೀಗಾಗಿ ಫೆಬ್ರವರಿ 15ಕ್ಕೆ ನಿಗದಿಯಾಗಿರುವ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯುವುದು ಅನುಮಾನ. ಇದಾಗ್ಯೂ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್‌ನ ಮನವೊಲಿಸಲು ಐಸಿಸಿ ಯಶಸ್ವಿಯಾಗಲಿದೆಯಾ ಕಾದು ನೋಡಬೇಕಿದೆ.



Source link

Leave a Reply

Your email address will not be published. Required fields are marked *