ಬೆಳಕಿನ ಕವಿತೆಯ ದೀಪ ಆರಿಸಿದ ಐಶ್ವರ್ಯಾ-ವರುಣ್ ರೊಮ್ಯಾಂಟಿಕ್ ಹಾಡಿನ ಮೇಕಿಂಗ್ ವಿಡಿಯೋ ವೈರಲ್ | Bigg Boss Fame Aishwarya Sindhogi Varun Romantic Reels Making Video Viral Mrq

ಬೆಳಕಿನ ಕವಿತೆಯ ದೀಪ ಆರಿಸಿದ ಐಶ್ವರ್ಯಾ-ವರುಣ್ ರೊಮ್ಯಾಂಟಿಕ್ ಹಾಡಿನ ಮೇಕಿಂಗ್ ವಿಡಿಯೋ ವೈರಲ್ | Bigg Boss Fame Aishwarya Sindhogi Varun Romantic Reels Making Video Viral Mrq



ಬೆಳಕಿನ ಕವಿತೆಯ ದೀಪ ಆರಿಸಿದ ಐಶ್ವರ್ಯಾ-ವರುಣ್ ರೊಮ್ಯಾಂಟಿಕ್ ಹಾಡಿನ ಮೇಕಿಂಗ್ ವಿಡಿಯೋ ವೈರಲ್ | Bigg Boss Fame Aishwarya Sindhogi Varun Romantic Reels Making Video Viral Mrq

ಕಿರುತೆರೆ ನಟಿ ಐಶ್ವರ್ಯಾ ಸಿಂಧೋಗಿ ಮತ್ತು ನಟ ವರುಣ್ ಅವರ “ಬೆಳಕಿನ ಕವಿತೆ” ಹಾಡಿನ ರೊಮ್ಯಾಂಟಿಕ್ ರೀಲ್ಸ್ ವೈರಲ್ ಆಗಿದೆ. ಇದೀಗ, ಈ ರೀಲ್ಸ್‌ನ ಮೇಕಿಂಗ್ ವಿಡಿಯೋ ಮುನ್ನೆಲೆಗೆ ಬಂದಿದ್ದು, ತೆರೆಮೇಲಿನ ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣದ ಹಿಂದಿನ ಶ್ರಮ ಮತ್ತು ಕಸರತ್ತನ್ನು ತೋರಿಸುತ್ತದೆ.

ಬೆಂಗಳೂರು: ಕಿರುತೆರೆ ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಐಶ್ವರ್ಯಾ ಸಿಂಧೋಗಿ ಸಾಲು ಸಾಲು ಪ್ರೊಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲದರ ನಡುವೆ ಚೆಂದದ ರೀಲ್ಸ್ ಮಾಡುವ ಮೂಲಕ ಅಭಿಮಾನಿಗಳ ಹುಬ್ಬೇರುವಂತೆ ಮಾಡುತ್ತಿರುತ್ತಾರೆ. ಕಳೆದ ವರ್ಷ ಐಶ್ವರ್ಯಾ ಸಿಂಧೋಗಿ ಅವರ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಟ ವರುಣ್ ಜೊತೆಯಲ್ಲಿ “ಬೆಳಕಿನ ಕವಿತೆ ಬೆರಗಿಗೆ ಸೋತೆ ಬೆಳದಿಂಗಳೇ ಮೆರವಣಿಗೆ” ಹಾಡಿಗೆ ರೊಮ್ಯಾಂಟಿಕ್ ರೀಲ್ಸ್ ಮಾಡಿದ್ದರು. ಜೂನ್‌ನಲ್ಲಿ ಅಪ್ಲೋಡ್ ಆಗಿದ್ದ ಈ ರೀಲ್ಸ್‌ಗೆ ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಈ ಮುದ್ದಾದ ವಿಡಿಯೋದ ಮೇಕಿಂಗ್ ಕ್ಲಿಪ್ ಮುನ್ನಲೆಗೆ ಬಂದಿದೆ. ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣ ಹೇಗೆ ನಡೆಯುತ್ತೆ ಎಂಬದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಚಾಕ್ಲೆಟ್ ಹೀರೋ ಲುಕ್‌ನಲ್ಲಿ ವರುಣ್

ನಟ ವರುಣ್ ಹಲವು ರಿಯಾಲಿಟಿ ಶೋಗಳ ಮೇಲೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಡ್ಯಾನ್ಸಿಂಗ್‌ ಜೊತೆ ತಾನೋರ್ವ ಒಳ್ಳೆಯ ನಟ ಎಂಬುದನ್ನು ಸಹ ವರುಣ್ ಸಾಬೀತು ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವರುಣ್, ತಮ್ಮ ಕೆಲಸದ ಮಾಹಿತಿಯನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಐಶ್ವರ್ಯಾ ಸಿಂಧೋಗಿ ಜೊತೆಗಿನ ರೀಲ್ಸ್‌ನಲ್ಲಿಯೂ ಚಾಕ್ಲೆಟ್ ಹೀರೋ ಲುಕ್‌ನಲ್ಲಿ ವರುಣ್ ಕಾಣಿಸಿಕೊಂಡಿದ್ದಾರೆ.

ಬೆಳಕಿನ ಕವಿತೆ ಬೆರಗಿಗೆ ಸೋತೆ ರೀಲ್ಸ್‌ನ ಮೇಕಿಂಗ್ ವಿಡಿಯೋ ವೈರಲ್ ಆಗುತ್ತಿದೆ. ತೆರೆಮೇಲೆ ಕೆಲ ನಿಮಿಷಗಳ ಸುಂದರವಾದ ವಿಡಿಯೋ ತೋರಿಸಲು ಎಷ್ಟು ಶ್ರಮ ಬೇಕು? ತೆರೆ ಹಿಂದೆ ಎಷ್ಟು ಜನರು ಕೆಲಸ ಮಾಡ್ತಾರೆ ಎಂಬುದನ್ನು ಈ ವೈರಲ್ ಕ್ಲಿಪ್ ತೋರಿಸುತ್ತದೆ. ತೆರೆಯ ಮೇಲೆ ಮಿಂಚುವ ಕಲಾವಿದರು ತಮ್ಮನ್ನು ಚೆಂದವಾಗಿ ತೋರಿಸಿದ ತಂತ್ರಜ್ಞರ ಶ್ರಮವನ್ನು ಮೇಕಿಂಗ್ ವಿಡಿಯೋ ಮೂಲಕ ತೋರಿಸುತ್ತಾರೆ.

ಮೇಕಿಂಗ್ ವಿಡಿಯೋ ಹೇಗಿದೆ?

ವರುಣ್ ಮೇಕಪ್ ಹಾಕಿಕೊಳ್ಳಲು ಆರಂಭಿಸಿದ ಕ್ಷಣದಿಂದ ಮೇಕಿಂಗ್ ಕ್ಲಿಪ್ ಆರಂಭವಾಗುತ್ತದೆ. ಒಂದೊಂದು ಸ್ಟೆಪ್‌ ಪರ್ಫೆಕ್ಟ್ ಆಗಿ ಕಾಣಲು ಎಷ್ಟೆಲ್ಲಾ ಕಸರತ್ತು ಮಾಡಲಾಗಿದೆ. ಕ್ಯಾಮೆರಾ ಹಿಡಿದು ಮುಂದೆ ನಿಂತಿರುವ ಜನರ ಮುಂದೆ ಇಬ್ಬರು ಕಲಾವಿದರು ರೊಮ್ಯಾನ್ಸ್ ಮಾಡಬೇಕಾಗುತ್ತದೆ. ಹಾಗೆಯೇ ಕೆಲವೊಮ್ಮೆ ರೀಟೇಕ್‌ಗಳು ಆಗುತ್ತಿರುತ್ತವೆ. ಡಿಸೆಂಬರ್ 27ರಂದು ಈ ವಿಡಿಯೋ ಪೋಸ್ಟ್ ಮಾಡಿಕೊಳ್ಳಲಾಗಿದ್ದು, 40 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.

ಇದನ್ನೂ ಓದಿ: ಐಶ್ವರ್ಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಶಿಶಿರ್ ಶಾಸ್ತ್ರಿ ಏನಂದ್ರು ನೋಡಿ… ಲವ್ ಮಾಡ್ತಿದ್ಯಾ ಜೋಡಿ?

ಬಿಗ್‌ಬಾಸ್ ಮನೆಯ ಮಾನಸಪುತ್ರಿ ಐಶ್ವರ್ಯಾ ಸಿಂಧೋಗಿ

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಐಶ್ವರ್ಯಾ ಸಿಂಧೋಗಿ ಅವರು ಸೃಜನ್ ಲೋಕೇಶ್ ಅವರ ಸಪ್ನೋಂಕಿ ರಾಣಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಚೆಲುವೆ. ಇದಾದ ಬಳಿಕ ಸಿಂಹಾದ್ರಿ, ಮಟಾಷ್, ಸಂಯುಕ್ತ 2, ಸೈತಾನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಂಗಳ ಗೌರಿ ಮದುವೆ ಸೀರಿಯಲ್ ಐಶ್ವರ್ಯಾ ಸಿಂಧೋಗಿ ಜನಪ್ರಿಯತೆತನ್ನು ತಂದುಕೊಡ್ತು. ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿಯೂ ಐಶ್ವರ್ಯಾ ಸಿಂಧೋಗಿ ಭಾಗಿಯಾಗಿದ್ದರು. ಒಂದು ರೀತಿಯಲ್ಲಿ ಐಶ್ವರ್ಯಾ ಸಿಂಧೋಗಿ ಬಿಗ್‌ಬಾಸ್ ಮನೆಯ ಮಾನಸಪುತ್ರಿಯಾಗಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​​ ಐಶ್ವರ್ಯ ಸಿಂಧೋಗಿ ಲವರ್​ ಹೆಸ್ರು ಬಾಯಿ ಬಿಟ್ರಾ? ನಾಚಿ ನಾಚಿ ನೀರಾದ ನಟಿ ಹೇಳಿದ್ದೇನು?



Source link

Leave a Reply

Your email address will not be published. Required fields are marked *