ಡ್ರೈವಿಂಗ್ ಹೇಳಿಕೊಡ್ತಿದ್ದ ಗಂಡ: ಬ್ರೇಕ್ ಬದಲು ಆಕ್ಸಿಲರೇಟ್ ಮೇಲೆ ಕಾಲಿಟ್ಟ ಪತ್ನಿ: ದೇಗುಲದ ಕೆರೆಗೆ ಬಿದ್ದ ಕಾರು | Car Fell Into Temple Kalyani After Woman Stepped On Accelerator Instead Of Brake

ಡ್ರೈವಿಂಗ್ ಹೇಳಿಕೊಡ್ತಿದ್ದ ಗಂಡ: ಬ್ರೇಕ್ ಬದಲು ಆಕ್ಸಿಲರೇಟ್ ಮೇಲೆ ಕಾಲಿಟ್ಟ ಪತ್ನಿ: ದೇಗುಲದ ಕೆರೆಗೆ ಬಿದ್ದ ಕಾರು | Car Fell Into Temple Kalyani After Woman Stepped On Accelerator Instead Of Brake



ಡ್ರೈವಿಂಗ್ ಹೇಳಿಕೊಡ್ತಿದ್ದ ಗಂಡ: ಬ್ರೇಕ್ ಬದಲು ಆಕ್ಸಿಲರೇಟ್ ಮೇಲೆ ಕಾಲಿಟ್ಟ ಪತ್ನಿ: ದೇಗುಲದ ಕೆರೆಗೆ ಬಿದ್ದ ಕಾರು | Car Fell Into Temple Kalyani After Woman Stepped On Accelerator Instead Of Brake

ಗಂಡನೋರ್ವ ಕಾರು ಚಾಲನಾ ತರಬೇತಿ ಹೇಳಿಕೊಡುತ್ತಿದ್ದ ವೇಳೆ ಪತ್ನಿ ಗೊಂದಲಕ್ಕೊಳಗಾಗಿ ಬ್ರೇಕ್ ಒತ್ತುವ ಬದಲು ಆಕ್ಸಲಿರೇಟರ್ ಮೇಲೆ ಕಾಲಿಟ್ಟ ಪರಿಣಾಮ ಕಾರು ಸೀದಾ ಹೋಗಿ ಸಮೀಪದ ಕೆರೆಗೆ ಬಿದ್ದಂತಹ ಘಟನೆ ತಮಿಳುನಾಡಿನ ಕಾರೈಕುಡಿಯಲ್ಲಿ ನಡೆದಿದೆ.

ಡ್ರೈವಿಂಗ್ ಕಲಿಯುವ ವೇಳೆ ಗೊಂದಲಕ್ಕೊಳಗಾದ ಮಹಿಳೆ

ಗಂಡನೋರ್ವ ಕಾರು ಚಾಲನಾ ತರಬೇತಿ ಹೇಳಿಕೊಡುತ್ತಿದ್ದ ವೇಳೆ ಪತ್ನಿ ಗೊಂದಲಕ್ಕೊಳಗಾಗಿ ಬ್ರೇಕ್ ಒತ್ತುವ ಬದಲು ಆಕ್ಸಲಿರೇಟರ್ ಮೇಲೆ ಕಾಲಿಟ್ಟ ಪರಿಣಾಮ ಕಾರು ಸೀದಾ ಹೋಗಿ ಸಮೀಪದ ಕೆರೆಗೆ ಬಿದ್ದಂತಹ ಘಟನೆ ತಮಿಳುನಾಡಿನ ಕಾರೈಕುಡಿಯಲ್ಲಿ ನಡೆದಿದೆ. ಮಹಿಳೆಯೊಬ್ಬರಿಗೆ ಅವರ ಪತಿ ಡ್ರೈವಿಂಗ್ ಮಾಡುವುದರ ಬಗ್ಗೆ ಕಲಿಸಿಕೊಡುತ್ತಿದ್ದಾಗ ಈ ಘಟನೆ ನಡೆದಿದೆ. ಕಣ್ಣನ್ ಎಂಬುವವರು ತಮ್ಮ ಪತ್ನಿಗೆ ಡ್ರೈವಿಂಗ್ ಲೈಸೆನ್ಸ್ ಹೇಳಿಕೊಡುತ್ತಿದ್ದರು. ಆದರೆ ಈ ಸಮಯದಲ್ಲಿ ಮಹಿಳೆ ಬ್ರೇಕ್ ಹಿಡಿಯುವ ಬದಲು ಆಕ್ಸಿಲರೇಟರ್ ಒತ್ತಿದ್ದಾಗ ಕಾರು ಒಮ್ಮೆಲೇ ವೇಗ ಹೆಚ್ಚಿಸಿಕೊಂಡು ನಿಯಂತ್ರಣಕ್ಕೆ ಸಿಗದೇ ಸೀದಾ ಹೋಗಿ ಅಲ್ಲಿ ಸಮೀಪದಲ್ಲೇ ಇದ್ದ ದೇವಸ್ಥಾನದ ಕೆರೆಗೆ ಉರುಳಿದೆ.

ಬ್ರೇಕ್ ಬದಲು ಆಕ್ಸಿಲರೇಟರ್ ಮೇಲೆ ಕಾಲಿಟ್ಟು ಅನಾಹುತ

ಜನವರಿ 31ರಂದು ಶನಿವಾರ ಈ ಘಟನೆ ನಡೆದಿದೆ. ಅವರು ಮೊದಲಿಗೆ ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಬಂದಿದ್ದಾರೆ. ನಂತರ ಪತ್ನಿಗೆ ಡ್ರೈವಿಂಗ್ ಹೇಳಿಕೊಡುವುದಕ್ಕೆ ತಮ್ಮ ಕಾರಿನಲ್ಲಿ ತೆಪ್ಪಕುಲಂ ಪ್ರದೇಶಕ್ಕೆ ಕರೆದೊಯ್ದಿದ್ದಾರೆ ನಂತರ ವಾಹನಗಳು ಹೆಚ್ಚು ಓಡಾಡದ ಆ ಪ್ರದೇಶದಲ್ಲಿ ಅವರಿಗೆ ಡ್ರೈವಿಂಗ್ ಕಲಿಸಿಕೊಡುತ್ತಿದ್ದ ವೇಳೆ ಈ ಅನಾಹುತ ಸಂಭವಿಸಿದೆ. . ಕಣ್ಣನ್ ಶಿವಗಂಗೈ ಜಿಲ್ಲೆಯ ಕಾರೈಕುಡಿ ಬಳಿಯ ಕಲ್ಲಲ್ ಪ್ರದೇಶದ ನಿವಾಸಿಯಾಗಿದ್ದು, ಪತ್ನಿಯ ಆಸೆಯಂತೆ ಆಕೆಗೆ ಕಾರು ಓಡಿಸುವುದು ಹೇಗೆಂದು ಕಲಿಸುತ್ತಿದ್ದರು. ಡ್ರೈವಿಂಗ್ ಸೀಟ್‌ನಲ್ಲಿ ಪತ್ನಿ ಇದ್ದರೆ ಪಕ್ಕದಲ್ಲಿ ಕಣ್ಣನ್ ಇದ್ದರು, ಆದರೆ ಕಲಿಸುತ್ತಿದ್ದ ವೇಳೆ ಗೊಂದಲಕ್ಕೊಳ ಅವರ ಪತ್ನಿ ಅಕ್ಸಿಲರೇಟರ್ ಮೇಲೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಆಂಬುಲೆನ್ಸ್‌ನಲ್ಲಿ 2.6 ಕೋಟಿ ಮೌಲ್ಯದ ಗಾಂಜಾ ಸಾಗಣೆ: ಹಾವು ಹಿಡಿಯುವುದಕ್ಕೆ ಫೇಮಸ್ ಆಗಿದ್ದ ಯುಟ್ಯೂಬರ್‌ ಅಂದರ್

ಪರಿಣಾಮ ಕಾರು ಒಮ್ಮೆಲ್ಲೇ ವೇಗ ಹೆಚ್ಚಾಗಿ ನಿಯಂತ್ರಣ ಕಳೆದುಕೊಂಡಿದ್ದು, ರಸ್ತೆಯಿಂದ ಕೆಳಗೆ ಇಳಿದು ಕೆರೆಯ ಮೆಟ್ಟಿಲುಗಳ ಮೇಲೆ ಇಳಿದು ಸೀದಾ ಕೆರೆಗೆ ಹೋಗಿ ಬಿದ್ದು ನಿಧಾನವಾಗಿ ಮುಳುಗುವುದಕ್ಕೆ ಆರಂಭಿಸಿದೆ. ಕೂಡಲೇ ಅಲ್ಲಿದ್ದ ಸಾರ್ವಜನಿಕರು ಸ್ಥಳಕ್ಕೆ ಓಡಿ ಬಂದಿದ್ದು, ಅವರ ರಕ್ಷಣೆಗೆ ಯತ್ನಿಸಿದ್ದಾರೆ. ಇತ್ತ ಕಾರಿನಲ್ಲಿದ್ದ ಗಂಡ ಹೆಂಡತಿ ಕಾರು ಮುಳುಗುತ್ತಿರುವುದನ್ನು ನೋಡಿ ಕಾರಿನ ಬಾಗಿಲು ತೆಗೆದು ಹೊರಬಂದಿದ್ದಾರೆ. ಹೀಗಾಗಿ ಅವರ ಪ್ರಾಣಕ್ಕೆ ಯಾವುದೇ ಅನಾಹುತ ಆಗಿಲ್ಲ. ಇತ್ತ ದಂಪತಿಗಳು ಕಾರಿನಿಂದ ಹೊರಬರುತ್ತಿದ್ದಂತೆ ಕಾರು ಸಂಪೂರ್ಣವಾಗಿ ಕೆರೆಯಲ್ಲಿ ಮುಳುಗಿದೆ. ನಂತರ ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಅವರು ಕಾರನ್ನು ಕೆರೆಯಿಂದ ಮೇಲೆತ್ತಿದ್ದಾರೆ.

ಇದನ್ನೂ ಓದಿ: ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಅಪ್ಪ ಕ್ಯಾಪ್ಟನ್ ಸುಮಿತ್ ಕಪೂರ್ ಸ್ಮರಿಸಿ ಮಗಳ ಭಾವುಕ ಬರಹ

ಡ್ರೈವಿಂಗ್ ಕಲಿಯುವ ವೇಳೆ ಆರಂಭದಲ್ಲಿ ಗೊಂದಲಗಳಾಗುವುದು ಸಾಮಾನ್ಯ, ಸಣ್ಣ ವಯಸ್ಸಿನಲ್ಲೇ ಡ್ರೈವಿಂಗ್ ಕಲಿತಾರೆ ಕಲಿಯುವುದು ಬಲು ಸುಲಭ. ಆದರೆ ನಂತರ ಡ್ರೈವಿಂಗ್ ಕಲಿಯವುದು ಸಾಹಸವೇ ಸರಿ. ಆದರೂ ಆಗದೇ ಇರುವುದು ಯಾವುದು ಇಲ್ಲ, ಎಲ್ಲದಕ್ಕೂ ಮನಸ್ಸು ಬೇಕು ಅಷ್ಟೇ.



Source link

Leave a Reply

Your email address will not be published. Required fields are marked *