Kannada Serial Episode: ಸದ್ಯ ಕನ್ನಡ ಧಾರಾವಾಹಿಗಳಲ್ಲಿ ರಣರೋಚಕವಾದ ಟ್ವಿಸ್ಟ್ ಎದುರಾಗುತ್ತಿದೆ. ಸೀರಿಯಲ್ ಕಥೆ ನೋಡಿದವರಿಗೆ ಕ್ಲೈಮ್ಯಾಕ್ಸ್ ಎಪಿಸೋಡ್ ಪ್ರಸಾರ ಆಗ್ತಿದ್ಯಾ ಎಂಬ ಡೌಟ್ ಕೂಡ ಬರುವುದು. ಹಾಗಾದರೆ ಯಾವ ಧಾರಾವಾಹಿ ಅಂತ್ಯ ಆಗಬಹುದು?

ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಅಜಿತ್ ಮೇಲೆ ಭೂಮಿಗೂ ಲವ್ ಆಗಿದೆ. ಅಜಿತ್ ಪ್ರೇಮ ನಿವೇದನೆ ಮಾಡಿದಾಗ, ಅವಳು ಒಪ್ಪಿಕೊಳ್ಳಲು ರೆಡಿಯಾಗಿದ್ದಳು. ಭೂಮಿ ಒಪ್ಪೋದಿಲ್ಲ ಎಂದು ಅಜಿತ್ ಮನಸ್ಸಿನಲ್ಲಿ ಅಂದುಕೊಂಡು, ಫ್ರಾಂಕ್ ಮಾಡಿದ್ದೇನೆ ಎಂದು ಹೇಳಿದ್ದಾನೆ. ಇನ್ನೊಂದು ಕಡೆ ಶಾರದಾ ಕೂಡ ಅಜಿತ್ಗೆ ಸಿಗುವ ಸಾಧ್ಯತೆ ಜಾಸ್ತಿ ಇದೆ. ಅಂಜನಾ ಹಾಗೂ ನಚಿಕೇತ್ ನಿಶ್ಚಿತಾರ್ಥ ಕೂಡ ನಡೆಯುತ್ತಿದೆ. ಇವೆಲ್ಲ ನೋಡಿದರೆ ಎಲ್ಲವೂ ಒಂದಕ್ಕೊಂದು ಕೂಡಿ ಬಂದ ಹಾಗಿದೆ. ಸದ್ಯ ಸ್ಟಾರ್ ಸುವರ್ಣ ವಾಹಿನಿಯ ನಂಬರ್ 1 ಸೀರಿಯಲ್ ಆಗಿರುವ ನಿನ್ನ ಜೊತೆ ನನ್ನ ಕಥೆ ಸದ್ಯಕ್ಕೆ ಅಂತ್ಯ ಆಗೋದಿಲ್ಲ ಬಿಡಿ.

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ಗೆ ತನ್ನ ತಪ್ಪು ಅರಿವಾಗಿದೆ. ಬಂಗಾರದಂಥ ಹೆಂಡತಿ, ಮಕ್ಕಳು, ಅಪ್ಪ-ಅಮ್ಮನನ್ನು ಬಿಟ್ಟು ನಾನು ಎರಡನೇ ಮದುವೆ ಆಗಬಾರದಿತ್ತು, ಶ್ರೇಷ್ಠ ಹಿಂದೆ ಹೋಗಿ ನನ್ನ ಮನೆಯವರಿಗೆ ಮೋಸ ಮಾಡಬಾರದಿತ್ತು ಅಂತ ಅರ್ಥ ಆಗಿದೆ. ಇನ್ನು ಆದಿ ಕೂಡ ಭಾಗ್ಯಗೆ ಪ್ರೇಮ ನಿವೇದನೆ ಮಾಡಿದ್ದು, ಆದಷ್ಟು ಬೇಗ ಭಾಗ್ಯ ಮನಸ್ಸಿನಲ್ಲಿ ಏನಿದೆ ಎನ್ನೋದು ಗೊತ್ತಾಗುವುದು. ಈಗ ತಾಂಡವ್ ಕೂಡ ಭಾಗ್ಯಗೆ ಕ್ಷಮೆ ಕೇಳುತ್ತಾನೆ. ಭಾಗ್ಯ ಈಗ ತಾಂಡವ್ ಜೊತೆ ಇರಲು ಇಷ್ಟಪಡುತ್ತಾಳಾ? ಅಥವಾ ಆದಿ ಜೊತೆ ಮದುವೆ ಆಗ್ತಾಳಾ ಎಂದು ಕಾದು ನೋಡಬೇಕಿದೆ. ಸದ್ಯ ಧಾರಾವಾಹಿಯಂತೂ ಮುಗಿಯೋದಿಲ್ಲ ಬಿಡಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಮನೆಯಲ್ಲಿ ನಂದಿನಿ ಇದ್ದಾಳೆ. ಇನ್ನು ವಿಜಯಾಂಬಿಕಾ ಸತ್ಯ ಕೂಡ ಶ್ರಾವಣಿ ತಂದೆಗೆ, ಮನೆಯವರಿಗೆ ಗೊತ್ತಾಗಿದೆ. ನಂದಿನಿ ನನಗೆ ಯಾವುದೇ ಮೋಸ ಮಾಡಿಲ್ಲ, ನಂದಿನಿ ಹಾಗೂ ನನ್ನ ರಿಯಲ್ ಮಗಳು ಶ್ರಾವಣಿ ಎನ್ನೋದು ವೀರೇಂದ್ರಪಾಟೀಲ್ಗೆ ಗೊತ್ತಾಗಬೇಕಿದೆ. ಆದರೆ ಸದ್ಯ ಈ ಧಾರಾವಾಹಿ ಅಂತ್ಯ ಆಗೋದು ಡೌಟ್ ಎನ್ನಲಾಗಿದೆ.

ಬ್ರಹ್ಮಗಂಟು ಧಾರಾವಾಹಿಯಲ್ಲಿ ಚಿರಾಗ್ಗೆ ದೀಪಾ ಮೇಲೆ ಲವ್ ಆಗಿದೆ. ಅತ್ತ ಸೌಂದರ್ಯ ಉದ್ದೇಶ ಏನು? ಅವಳು ಎಷ್ಟು ಕೆಟ್ಟವಳು ಎನ್ನೋದು ಕೂಡ ಚಿರಾಗ್ ತಂದೆಗೆ ಗೊತ್ತಾಗಿದೆ. ದೀಪಾ ಕೂಡ ತನ್ನ ತಂಡ ತನ್ನನ್ನು ಲವ್ ಮಾಡ್ತಾನೆ ಎಂದು ಅರಿತಿದ್ದಾಳೆ. ಇದೆಲ್ಲ ನೋಡಿದರೆ ಈ ಸೀರಿಯಲ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಹಾಗಿದೆ, ಮುಂದೆ ನೋಡೋಣ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಒಂದಾಗಿದ್ದಾರೆ, ಗೌತಮ್ ತಾಯಿ ಹುಷಾರಾಗಿದ್ದಾಳೆ. ಒಟ್ಟಿನಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಅತ್ತ ಜಯದೇವ್ ಸಾಲ ತೀರಿದೆ. ಜಯದೇವ್ಗೆ ಬುದ್ಧಿ ಬಂದರೆ, ಗೌತಮ್ಗೆ ಮಗಳು ಸಿಕ್ಕಿದರೆ ಈ ಸೀರಿಯಲ್ ಕಥೆ ಅಂತ್ಯ ಆದಂತೆ. ಆದರೆ ಸದ್ಯಕ್ಕೆ ಈ ಸೀರಿಯಲ್ ಎಂಡ್ ಆಗೋದು ಡೌಟ್. ಟ್ವಿಸ್ಟ್ ನೋಡಿದರೆ ಸೀರಿಯಲ್ ಮುಗಿತಿದ್ಯಾ ಎಂದು ಡೌಟ್ ಬರೋದು ಸಹಜ.

Source link
ಕ್ಲೈಮ್ಯಾಕ್ಸ್ ಎಪಿಸೋಡ್ ಥರ ಪ್ರಸಾರ ಆಗ್ತಿರೋ Kannada Serials; ಯಾವ ಧಾರಾವಾಹಿ ಅಂತ್ಯ ಆಗಲಿದೆ?