ಬೆಂಗಳೂರು, ಫೆಬ್ರವರಿ 02: ತಾಳಗುಣಿ ಸಮೀಪ ಜಲಮಂಡಲಿ (BWSSB) ಕಾಮಗಾರಿ ವೇಳೆ ಇಲಾಖೆ ನಿರ್ಲಕ್ಷ್ಯಕ್ಕೆ ಬಾಲಕನೋರ್ವ ಬಲಿಯಾಗಿರುವ ಘಟನೆ ನಡೆದಿದೆ. ಕನಕಪುರ ರಸ್ತೆಯ ಪೈಪ್ಲೈನ್ ರಸ್ತೆಯಲ್ಲಿ ಕಾಮಗಾರಿ ವೇಳೆ ಮುಚ್ಚಳವಿಲ್ಲದೆ ತೆರೆದಿದ್ದ ಸಂಪಿಗೆ ಬಿದ್ದು ಪ್ರೀತಂ (14) ಇದ್ದಾರೆ. ತಾಳಗುಣಿಯ ನಿವಾಸಿ ರಮೇಶ್ ಅವರ ಪುತ್ರ ಪ್ರೀತಂ, ಜನವರಿ 28 ರಂದು ನಾಪತ್ತೆಯಾಗಿತ್ತು. ಮೂರು ದಿನಗಳ ಕಾಲ ಕುಟುಂಬಸ್ಥರು ಬಾಲಕನ ಹುಡುಕಾಟ ನಡೆಸಿದ್ದರು. ಜನವರಿ 29 ರಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಕೊಳೆತ ವಾಸನೆ ಬಂದಂತೆ ಪರಿಶೀಲಿಸಿದಾಗ ಪ್ರೀತಂ ಮೃತದೇಹವಿದೆ. ಸದ್ಯ ಮೃತದೇಹವನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆ ರವಾನಿಸಲಾಗಿದೆ, ಈ ಘಟನೆಗೆ BWSSB ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.