Headlines

T20 World Cup 2026: ಭಾರತ ಎ ತಂಡ ಪ್ರಕಟ

T20 World Cup 2026: ಭಾರತ ಎ ತಂಡ ಪ್ರಕಟ


ಟಿ20 ಅಭ್ಯಾಸ ಪಂದ್ಯಗಳಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರು ಈ ತಂಡದಲ್ಲಿ ಟೀಮ್ ಇಂಡಿಯಾ ಆಟಗಾರ ತಿಲಕ್ ವರ್ಮಾ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ತಿಲಕ್ ವರ್ಮಾ ಟಿ20 ನಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.

ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದ ತಿಲಕ್ ವರ್ಮಾ ಇತ್ತೀಚೆಗೆ ಮುಗಿದ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು.ವಿಜಯ ಹಜಾರೆ ಪಂದ್ಯದ ವೇಳೆ ವೃಷಣ ತಿರುಚಿದ್ದರಿಂದ ತೀವ್ರ ಹೊಟ್ಟೆ ನೋವಿಗೆ ತುತ್ತಾಗಿದ್ದ ತಿಲಕ್ ಕೆಲ ದಿನಗಳ ಹಿಂದೆಯೇ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ಯುಎಸ್ಎ ವಿರುದ್ಧ ಅಭ್ಯಾಸ ತಿಲಕ್ ವರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಅವರು ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ನಾಯಕ ಯಾರು?

ಟಿ20 ಪಂದ್ಯದ ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡವನ್ನು ಆಯುಷ್ ಬದೋನಿ ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಲ್ಲಿ ಸ್ಟಾರ್ ಬ್ಯಾಟರ್ ಪ್ರಿಯಾಂಶ್ ಆರ್ಯ, ಯುವ ಆಲ್ ರೌಂಡರ್ ರಿಯಾನ್ ಪರಾಗ್ ಹಾಗೂ ಟೀಮ್ ಇಂಡಿಯಾ ಬೌಲರ್ಗಳಾದ ರವಿ ಬಿಷ್ಣೋಯ್ ಹಾಗೂ ಖಲೀಲ್ ಅಹ್ಮದ್ ಕಾಣಿಸಿಕೊಂಡಿದ್ದಾರೆ.

ಕಳೆದ ತಿಂಗಳುಗಳ ಕಾಲ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ಖ್ಯಾತಿಯ ಮಯಾಂಕ್ ಯಾದವ್ ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಕೀಪರ್‌ಗಳಾಗಿ ನಾರಾಯಣ್ ಜಗದೀಸನ್ ಹಾಗೂ ಉರ್ವಿಲ್ ಪಟೇಲ್ ಕಾಣಿಸಿಕೊಂಡಿದ್ದಾರೆ. ಅದರಂತೆ ಅಭ್ಯಾಸ ಪಂದ್ಯಗಳಿಗೆ ಭಾರತ ಎ ತಂಡ ಈ ಕೆಳಗಿನಂತಿದೆ…

ಭಾರತ ಎ ತಂಡ: ಆಯುಷ್ ಬದೋನಿ (ನಾಯಕ), ನಮನ್ ಧೀರ್, ಅಶುತೋಷ್ ಶರ್ಮಾ, ಪ್ರಿಯಾಂಶ್ ಆರ್ಯ, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಯಾನ್ ಪರಾಗ್, ಮಾನವ್ ಸುತಾರ್, ಅಶೋಕ್ ಶರ್ಮಾ, ಉರ್ವಿಲ್ ಪಟೇಲ್ (ವಿಕೆಟ್ ಕೀಪರ್), ಗುರ್ಜಪ್ನೀತ್ ಸಿಂಗ್, ವಿಪ್ರಾಜ್ ಮಣಕೋಯ್, ರವಿ, ಖಂಯ್.

ಇದನ್ನೂ ಓದಿ: ಟಿ20 ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾಗೆ

ಟಿ20 ಅಭ್ಯಾಸ ಪಂದ್ಯಗಳ ಮಾದರಿ:

ದಿನಾಂಕ ಪಂದ್ಯ ಸ್ಥಳ ಪ್ರಾರಂಭ ಸಮಯ
ಫೆಬ್ರವರಿ 2 ಅಫ್ಘಾನಿಸ್ತಾನ್ vs ಸ್ಕಾಟ್ಲೆಂಡ್ ಬೆಂಗಳೂರು (CoE) ಮಧ್ಯಾಹ್ನ 3:00 ಗಂಟೆಗೆ
ಫೆಬ್ರವರಿ 2 ಭಾರತ ಎ vs ಅಮೆರಿಕ ನವಿ ಮುಂಬೈ ಸಂಜೆ 5:00 ಗಂಟೆಗೆ
ಫೆಬ್ರವರಿ 2 ಕೆನಡಾ vs ಇಟಲಿ ಚೆನ್ನೈ ರಾತ್ರಿ 7:00 ಗಂಟೆಗೆ
ಫೆಬ್ರವರಿ 3 ಶ್ರೀಲಂಕಾ ಎ vs ಒಮಾನ್ ಕೊಲಂಬೊ ಮಧ್ಯಾಹ್ನ 1:00 ಗಂಟೆಗೆ
ಫೆಬ್ರವರಿ 3 ನೆದರ್ಲೆಂಡ್ಸ್ ವಿರುದ್ಧ ಜಿಂಬಾಬ್ವೆ ಕೊಲಂಬೊ ಮಧ್ಯಾಹ್ನ 3:00 ಗಂಟೆಗೆ
ಫೆಬ್ರವರಿ 3 ನೇಪಾಳ vs ಯುಇಇ ಚೆನ್ನೈ ಸಂಜೆ 5:00 ಗಂಟೆಗೆ
ಫೆಬ್ರವರಿ 4 ನಮೀಬಿಯಾ vs ಸ್ಕಾಟ್ಲೆಂಡ್ ಬೆಂಗಳೂರು (CoE) ಮಧ್ಯಾಹ್ನ 1:00 ಗಂಟೆಗೆ
ಫೆಬ್ರವರಿ 4 ಅಫ್ಘಾನಿಸ್ತಾನ್ vs ವೆಸ್ಟ್ ಇಂಡೀಸ್ ಬೆಂಗಳೂರು (CoE) ಮಧ್ಯಾಹ್ನ 3:00 ಗಂಟೆಗೆ
ಫೆಬ್ರವರಿ 4 ಐರ್ಲೆಂಡ್ vs ಪಾಕಿಸ್ತಾನ ಕೊಲಂಬೊ ಸಂಜೆ 5:00 ಗಂಟೆಗೆ
ಫೆಬ್ರವರಿ 4 ಭಾರತ vs ಸೌತ್ ಆಫ್ರಿಕಾ ನವಿ ಮುಂಬೈ ರಾತ್ರಿ 7:00 ಗಂಟೆಗೆ
ಫೆಬ್ರವರಿ 5 ಒಮಾನ್ vs ಝಿಂಬಾಬ್ವೆ ಕೊಲಂಬೊ ಮಧ್ಯಾಹ್ನ 1:00 ಗಂಟೆಗೆ
ಫೆಬ್ರವರಿ 5 ಕೆನಡಾ vs ನೇಪಾಳ ಚೆನ್ನೈ ಮಧ್ಯಾಹ್ನ 3:00 ಗಂಟೆಗೆ
ಫೆಬ್ರವರಿ 5 ಆಸ್ಟ್ರೇಲಿಯಾ vs ನೆದರ್ಲೆಂಡ್ಸ್ ಕೊಲಂಬೊ ಸಂಜೆ 5:00 ಗಂಟೆಗೆ
ಫೆಬ್ರವರಿ 5 ನ್ಯೂಝಿಲೆಂಡ್ ವಿರುದ್ಧ ಅಮೆರಿಕ ನವಿ ಮುಂಬೈ ರಾತ್ರಿ 7:00 ಗಂಟೆಗೆ
ಫೆಬ್ರವರಿ 6 ಇಟಲಿ vs ಯುಇಇ ಚೆನ್ನೈ ಮಧ್ಯಾಹ್ನ 3:00 ಗಂಟೆಗೆ
ಫೆಬ್ರವರಿ 6 ಭಾರತ ಎ vs ನಮೀಬಿಯಾ ಬೆಂಗಳೂರು (CoE) ಸಂಜೆ 5:00 ಗಂಟೆಗೆ



Source link

Leave a Reply

Your email address will not be published. Required fields are marked *