ಬೆಂಗಳೂರು, (ಫೆಬ್ರವರಿ 02): ಕನ್ನಡ ಟಿವಿ9 ಕ್ರಿಯೇಟಿವ್ ಪ್ರೊಡ್ಯೂಸರ್ ರವೀಂದ್ರ ಮುದ್ದಿ ಅವರ ಸಿಗ್ನಲ್ ಜಂಪ್ (ಸಿಗ್ನಲ್ ಜಂಪ್) ಕಥಾ ಸಂಕಲನ ಪ್ರಕಟಿಸಿದ್ದ ಅವ್ವ ಪುಸ್ತಕಾಲಯದ ಅನಂತ ಕುಣಿಗಲ್ ಅವರಿಗೆ 2024ನೇ ಸಾಲಿನ ಪ್ರಕಾಶಕ ಆರ್. ಎನ್. ಹಬ್ಬು ದತ್ತಿ ಪ್ರಶಸ್ತಿ ಲಭಿಸಿದೆ. 2024ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೂ ಪ್ರಕಟಗೊಂಡ ಕೃತಿಗಳನ್ನು ಒಟ್ಟು 54 ಪ್ರಕಾರದ ದತ್ತಿಗಳು 58 ಪ್ರಶಸ್ತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದೆ. ವಿವಿಧ ಪ್ರಕಾರದ ಸಾಹಿತ್ಯದ ಪ್ರಶಸ್ತಿಗಾಗಿ ಸುಮಾರು 900 ಕೃತಿಗಳು ಬಂದಿದ್ದವು. ಸಾಹಿತಿ ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯ ಸಮಿತಿಯು ಪ್ರಕಾಶಕರಿಗೆ ನೀಡುವ ದತ್ತಿ ಪ್ರಶಸ್ತಿಗಾಗಿ ಸಿಗ್ನಲ್ ಜಂಪ್ ಕೃತಿಯನ್ನು ಆಯ್ಕೆ ಮಾಡಲಾಗಿದೆ
ರವೀಂದ್ರ ಮುದ್ದಿ ಅವರು ಬರೆದ ವಿಭಿನ್ನ ಹಾಗೂ ಹೊಸತನ ಹೊಂದಿದ ಒಟ್ಟು ಕಥೆಗಳು ಸಿಗ್ನಲ್ ಜಂಪ್ ಕೃತಿಯಲ್ಲಿದ್ದು ಹಲವಾರು ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಈ ಕೃತಿಯ ಮೂಲಕ ಅವ್ವ ಪುಸ್ತಕಾಲಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿ ಪ್ರಶಸ್ತಿ ಸಿಕ್ಕಿದೆ.
2024 ರ ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು, ಪ್ರಕಾಶಕರಿಂದ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳಿಗೆ 900 ಕೃತಿಗಳು ಬಂದಿದ್ದವು. ಸಾಹಿತಿ ಕೆ ಮರುಳುಸಿದ್ದಪ್ಪ ಅವರ ಅಧ್ಯಕ್ಷತೆಯ ಸಮಿತಿ ಸಾಹಿತಿಗಳ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಸಿಗ್ನಲ್ ಜಂಪ್’ ನಲ್ಲಿ ನಾಡಿನ ಹತ್ತು ಬರಹಗಾರರು
ರವೀಂದ್ರ ಮುದ್ದಿ ಅವರು ಬರೆದ ‘ಸಿಗ್ನಲ್ ಜಂಪ್’ ಕಥಾ ಸಂಕಲನದಲ್ಲಿ ಒಟ್ಟು ವಿಭಿನ್ನ ಹತ್ತು ಕಥೆಗಳಿವೆ. ನಾಡಿನ ಹತ್ತು ಪ್ರಮುಖ ಬರಹಗಾರರು ಇಲ್ಲಿ ಒಂದೊಂದು ಕಥೆಯನ್ನು ಒಬ್ಬೊಬ್ಬರು ಓದಿ ಆ ಕಥೆಯ ಬಗ್ಗೆ ಅವಲೋಕನ ಮಾಡಿದ್ದಾರೆ. ವಿಶೇಷ ಅಂದರೆ ಹತ್ತು ಬರಹಗಾರರು ಬರೆದ ಕಥೆಗಳ ಬಗೆಗಿನ ಅನಿಸಿಕೆ ಕೂಡ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಕಥಾ ಸಂಕಲನದಲ್ಲಿ ಅಚ್ಚಾಗಿವೆ.
ಕನ್ನಡ TV9 ಕ್ರಿಯೇಟಿವ್ ಪ್ರೊಡ್ಯೂಸರ್ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಕಥಾ ಸಂಕಲನ ಕಳೆದ ಅಂದರೆ 2025ರ ಜುಲೈ 14 ರಂದು ಅವ್ವ ಪುಸ್ತಕಾಲಯದಿಂದ ಬಿಡುಗಡೆಯಾಯಿತು. ಬಳಿಕ ಈ ಪುಸ್ತಕ ಸಾಕಷ್ಟು ಓದುಗರ ಗಮನಸೆಳೆದಿದೆ.
ರಾಜ್ಯದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 2:46 pm, ಸೋಮ, 2 ಫೆಬ್ರವರಿ 26