Headlines

ನಟ ಯಶ್​ ತಾಯಿ ಪುಷ್ಪಾರ ಜಾಗ ವಿವಾದಕ್ಕೆ ಹೊಸ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?

ನಟ ಯಶ್​ ತಾಯಿ ಪುಷ್ಪಾರ ಜಾಗ ವಿವಾದಕ್ಕೆ ಹೊಸ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?


ಹಾಸನ, ಫೆಬ್ಬರವರಿ 02: ಜಾಗದ ವಿಚಾರವಾಗಿ ನಟ ಯಶ್ತಾಯಿ ಪುಷ್ಪಾ ಮತ್ತು ದೇವರಾಜ್ ನಡುವೆ ವಿವಾದದ ವಿಚಾರಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಒಂದೇ ನಿವೇಶನಕ್ಕೆ ಎರಡೆರಡು ಜನರಿಗೆ ಖಾತೆ, ಸರ್ವೆನಂಬರ್, ಈ ಸ್ವತ್ತು ಅಧಿಕಾರಿಗಳು ಮಾಡಿರುವ ಗೋಲ್ಮಾಲ್‌ನಿಂದಲೇ ಈ ಗಲಾಟೆ ಸೃಷ್ಟಿಯಾಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಸೈಟ್ ತಮ್ಮದು ಎಂಬ ಬಗ್ಗೆ ಪುಷ್ಪಾ ಅವರು 1982 ರಿಂದ ಇರುವ ಸಂಪೂರ್ಣ ದಾಖಲೆ ತೋರಿಸಿದ್ದಾರೆ. ನಮ್ಮ ವಕೀಲರು ಎಲ್ಲವನ್ನೂ ನೋಡಿಯೇ ಜಾಗ ಖರೀದಿಸಿದ್ದಾರೆ. 1982 ರಿಂದ ಸುಮಾರು 44 ವರ್ಷ ಕಾಣುತ್ತಿದ್ದ ಲಕ್ಷ್ಮಮ್ಮ ದಿಢೀರ್ ಹೇಗೆ ಬಂದ್ರು ಎಂದು ಅವರು ಪ್ರಶ್ನಿಸಿದ್ದಾರೆ. ಈ ಸೈಟ್‌ನ 1982 ರಲ್ಲಿ ಕೆಪಿ ಶ್ರೀಮತಿ ಖರೀದಿ ಮಾಡಿದ್ದು, ಅವರು ಸುಮಾರು 23 ವರ್ಷಗಳ ಮಾಲೀಕತ್ವ ಹೊಂದಿದ್ದರು. ನಂತರ 2007ರಲ್ಲಿ ಗಿರೀಶ್ ಕೋಂ ಮಹಲಿಂಗಪ್ಪ ಅವರು ಜಾಗ ಖರೀದಿ ಮಾಡಿದ್ದು, ಅವರು 2020ರ ವರೆಗೆ ಅಂದರೆ 13 ವರ್ಷ ಇದರ ಮಾಲಕ. ನಂತರ 2020 ರಿಂದ ಅಂದರೆ ಆರು ವರ್ಷದಿಂದ ನನ್ನ ಸ್ವಾಧೀನದಲ್ಲಿ ಸೈಟ್ ಇದೆ. ಈ ಹಿಂದೆ ಇಲ್ಲದ ವ್ಯಾಜ್ಯ ಹೀಗೇಕೆ?. ದೇವರಾಜ್ ಹೇಳುವಂತೆ ಇದು ಅವರ ಸೈಟ್ ಆಗಿದ್ದರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿಯೇ ಮೋಸ ಆಗಿದೆಯಾ ಇಲ್ಲವೇ ಗ್ರಾಮ ಪಂಚಾಯತ್‌ನಲ್ಲಿ ಎರಡೆರಡು ದಾಖಲೆ ಮಾಡಲಿಲ್ಲ ಎಂದು ಪುಷ್ಪಾ ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ದೇವರಾಜ್ ಕೂಡ ಜಾಗದ ದಾಖಲೆ ತೋರಿಸುತ್ತಿದ್ದಾರೆ, 2020ರಲ್ಲಿ ಲಕ್ಷ್ಮಮ್ಮ ಅವರಿಂದ ಜಿಪಿಎಯಾಗಿರೋದಾಗಿ ಹೇಳುತ್ತಿರುವ ಕಾರಣ ಗೊಂದಲದ ಗೂಡಾಗಿ ಮಾರ್ಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *